ತೆರೆಗೆ ಸಿದ್ಧವಾಗುತ್ತಿದೆ “ಮನಸಿನ ಮರೆಯಲಿ”

ರಾಕಿನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ “ಮನಸಿನ ಮರೆಯಲಿ” ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಇತ್ತೀಚೆಗೆ ಮಡಿಕೇರಿ, ಸಕಲೇಶಪುರ, ಮಂಗಳೂರು ಹಾಗೂ ಸೂರತ್ಕಲ್ ಬೀಚ್ ನಲ್ಲಿ ಚಿತ್ರೀಕರಣ ನಡೆಸಿದ ಚಿತ್ರತಂಡ ಈಗ ಬೆಂಗಳೂರಿಗೆ ವಾಪಸಾಗಿದೆ. ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಸುಂದರ ತಾಣಗಳಲ್ಲಿ ಕೆಲವು ದೃಶ್ಯಗಳು ಮತ್ತು ಎರಡು ಹಾಡುಗಳ ಶೂಟಿಂಗ್ ನಂತರ ಚಿತ್ರದ ಚಿತ್ರೀಕರಣ ಭಾಗ ಸಂಪೂರ್ಣಗೊಂಡಿದೆ.

ಶಬೀನ ಅರ ಮತ್ತು ಕಿಂಗ್ ಲಿಂಗರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದಕ್ಕೆ ಮೊದಲು “ಆಸ್ಕರ್”, “ಮಿಸ್ ಮಲ್ಲಿಗೆ” ಮತ್ತು “ಮೊನಿಕಾ ಈಸ್ ಮಿಸ್ಸಿಂಗ್” ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಇದೇ ಮೊದಲ ಬಾರಿಗೆ ಲವ್ ಸ್ಟೋರಿಯೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಚಿತ್ರದಲ್ಲಿ ಕಿಶೋರ್ ಯಾದವ್, ದಿವ್ಯಾ ಗೌಡ, ಮಾಸ್ಟರ್ ರಾಕಿನ್, ನಂದಗೋಪಾಲ್, ರಾಜ್ ಭಗಾವತ್, ಪ್ರಿಯಾಂಕ, ಗುರುರಾಜ್, ಪುಷ್ಪಾ ಶುಕ್ಲ, ಸಂದೀಪ್ ಮಲಾನಿ, ಶಶಾಂಕ್ ರಾಜ್ ಮತ್ತಿತರರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಪಿ.ತ್ಯಾಗರಾಜ್ ಸಂಗೀತ, ಪವನ್ ಕುಮಾರ್ ಛಾಯಾಗ್ರಹಣ, ಹರೀಶ್ ಗಿರಿಗೌಡ ಸಂಕಲನ, ರಾಜೇಶ್ ಜಾನ್ ಮತ್ತು ನಾಗಿ ನೃತ್ಯ, ವೈಲೆಂಟ್ ವೇಲು ಸಾಹಸವಿದೆ.

-Ad-

Leave Your Comments