ದೀಪಿಕಾಗೆ ಬೆಂಬಲ ನೀಡಿದ ಮನುಷಿ ಚಿಲ್ಲರ್, ಬಾಲಿವುಡ್ ಎಂಟ್ರಿ ಬಗ್ಗೆ ವಿಶ್ವ ಸುಂದರಿ ಹೇಳೋದೇನು?

ಸುಮಾರು 17 ವರ್ಷಗಳ ನಂತರ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಭಾರತದ ಯುವತಿ ಮನುಷಿ ಚಿಲ್ಲರ್ ಬಾಲಿವುಡ್ ಪ್ರವೇಶ ಹಾಗೂ ಆಕೆಯ ಕನಸಿನ ಕುರಿತಂತೆ ಮನದ ಮಾತು ಹಂಚಿಕೊಂಡಿದ್ದಾರೆ.

‘ಸದ್ಯ ಬಾಲಿವುಡ್ ಪ್ರವೇಶಿಸುವ ಯಾವುದೇ ಯೋಚನೆ ನನ್ನ ತಲೆಯಲ್ಲಿಲ್ಲ. ವಿವಿಧ ಕಾರ್ಯಕ್ರಮಗಳ ಅಂಗವಾಗಿ ನಾನು ನಾಲ್ಕು ಖಂಡಗಳ ಪ್ರವಾಸ ಮಾಡಬೇಕಿದೆ. ನಾನು ಚಿತ್ರರಂಗಕ್ಕೆ ಬಂದರೆ ಅಮೀರ್ ಖಾನ್ ರೊಂದಿಗೆ ಕೆಲಸ ಮಾಡಬೇಕು ಎಂಬ ಕನಸಿದೆ. ಅವರ ಸಿನಿಮಾಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೇ ಸಾಮಾಜಕ್ಕೂ ಸಂಬಂಧಿಸಿರುತ್ತದೆ. ಹೀಗಾಗಿ ಅವರೊಟ್ಟಿಗೆ ಕೆಲಸ ಮಾಡಿದರೆ ತೃಪ್ತಿ ಸಿಗಲಿದೆ. ನನ್ನ ನೆಚ್ಚಿನ ಹಿರೋ ಕೂಡ ಅಮೀರ್ ಖಾನ್ ಆಗಿದ್ದು, ಪ್ರಿಯಾಂಕ ಚೋಪ್ರಾ ನೆಚ್ಚಿನ ನಟಿ’ ಎಂದಿದ್ದಾರೆ.

ಇನ್ನು ಪದ್ಮಾವತಿ ಚಿತ್ರಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ಅವರಿಗೆ ಬೆದರಿಕೆ ಬಂದಿರುವುದರ ಕುರಿತಾಗಿ ಮಾತನಾಡಿರುವ ಚಿಲ್ಲರ್, ‘ಆತ್ಮವಿಶ್ವಾಸ ಮಹಿಳೆಯ ದೊಡ್ಡ ಅಸ್ತ್ರ. ದೇಶದ ಪ್ರತಿಯೋಬ್ಬ ಮಹಿಳೆಯು ತನ್ನ ಸಮಸ್ಯೆಯನ್ನು ನೇರವಾಗಿ ಎದುರಿಸಬೇಕು. ಇದು ಮಹಿಳಾ ಸ್ನೇಹಿ ಸಮಾಜವಲ್ಲ. ನಮಗೆ ಕೆಲವು ನಿರ್ಬಂಧಗಳನ್ನು ಹೇರಲಾಗುತ್ತದೆ. ಹೀಗಾಗಿ ವೈಯಕ್ತಿಕವಾಗಿ ನಮ್ಮ ಸಮಸ್ಯೆ ಎದುರಿಸಿ ಬೇರೆಯವರಿಗೆ ಮಾದರಿಯಾಗಬೇಕು. ಮಹಿಳೆಯ ಅಸಾಧ್ಯವಾದುದನ್ನು ಸಾಧಿಸಬಲ್ಲಳು’ ಎಂದರು.

-Ad-

Leave Your Comments