ಮಾಸ್ತಿಗುಡಿಗೆ ಎದುರಾಯ್ತು ಮಲ್ಟಿಪ್ಲೆಕ್ಸ್ ಸಮಸ್ಯೆ..! ಇನ್ನಾದರೂ ಎಚ್ಚೆತ್ತುಕೊಳ್ಳಿ

 ಮಾಸ್ತಿಗುಡಿ ಸಿನಿಮಾಗೆ ಮಲ್ಟಿಪ್ಲೆಕ್ಸ್ ಸಮಸ್ಯೆ ಎದುರಾಗಿದೆ. ಬಾಹುಬಲಿ ಸಿನಿಮಾ ಬಿರುಗಾಳಿಗೆ ಸಿಕ್ಕಿ ನಲುಗುವ ಭಯದಲ್ಲಿ ಏಪ್ರಿಲ್ 28 ರಂದು ಬಿಡುಗಡೆ ಮಾಡದೆ ಮೇ 12ಕ್ಕೆ ಮುಂದೂಡಲಾಯಿತು. ಆದರೆ ಇನ್ನೂ ಬಾಹುಬಲಿಯ ಕದಂಬ ಬಾಹುಗಳು ಕರ್ನಾಟಕದಲ್ಲಿ ಬಲಾಢವಾಗಿ ಚಾಚಿರೋದ್ರಿಂದ ಮಾಸ್ತಿ ಗುಡಿ ಸ್ಥಾಪಿಸಲು ನಿರ್ದೇಶಕ ನಾಗಶೇಖರ್ ಹಾಗೂ ನಟ ದುನಿಯಾ ವಿಜಯ್ ಪರದಾಡುವಂತಾಗಿದೆ.
ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ ಮಧ್ಯಾಹ್ನ 1ರಿಂದ ಸಂಜೆ 7.30ರ ಪೀಕ್ ಅವರ್ ನಲ್ಲಿ ಕಡ್ಡಾಯವಾಗಿ ಕನ್ನಡ ಸಿನಿಮಾವನ್ನು ಪ್ರದರ್ಶನ ಮಾಡಬೇಕು ಅಂತ ಸರ್ಕಾರ ಆದೇಶ ಮಾಡಿದೆ. ಆದರೆ ಆ ಕಾನೂನು ಇನ್ನೂ ಪೇಪರ್ ನಲ್ಲಿಯೇ ಇದೆಯೋ ಅಥವಾ ಜಾರಿ ಆಗಿದೆಯೋ ಅನ್ನೋದನ್ನ ಸರ್ಕಾರದ ಹಿರಿಯ ಅಧಿಕಾರಿಗಳೇ ಹೇಳಬೇಕು. ಕನ್ನಡಿಗರು ಅದ್ಧೂರಿಯಾಗಿ ಮಾಡಿರುವ  ಮಾಸ್ತಿಗುಡಿ‌ ಸಿನಿಮಾ ಬಿಡುಗಡೆಗೆ ಕನ್ನಡನಾಡಿನಲ್ಲೇ ಥೇಟರ್  ಸಿಗದೆ ಒದ್ದಾಡುತ್ತಿರುವುದು ದುರಂತ.

ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಚಿತ್ರತಂಡ ಅಳಲು ತೋಡಿಕೊಂಡಿದೆ. ಇದ್ರಿಂದ ಕೆಲವು ಮಲ್ಟಿಪ್ಲೆಕ್ಸ್ ಮಾಲೀಕರು ಮಾಸ್ತಿಗುಡಿಗೆ ಅವಕಾಶ ಕೊಡುವ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಒಂದು ದೊಡ್ಡ ಸಿನಿಮಾಬಿಡುಗಡೆಯ  ಸ್ಥಿತಿಯೇ ಈ ರೀತಿ ಆದರೆ ಸಣ್ಣಪುಟ್ಟ ಸಿನಿಮಾಗಳ ಕಥೆ ಹರೋಹರ. ಚಲನಚಿತ್ರ ವಾಣಿಜ್ಯ ಮಂಡಳಿ ನಾಮಕಾವಸ್ತೆಗೆ ಕೆಲಸ ಮಾಡದೆ ಈ ಬಗ್ಗೆ ಗಮನ ಕೊಡಬೇಕಿದೆ..

-Ad-

Leave Your Comments