ಮಾಸ್ತಿಗುಡಿ ರೈಟ್ಸ್ ಬರೋಬ್ಬರಿ 10.80 ರೂ!!

ಹತ್ತು ಹಲವು ವಿವಾದ ಹೊತ್ತುಕೊಂಡ ಮಾಸ್ತಿಗುಡಿ ಸಾಕಷ್ಟು ಕುತೂಹಲ ಕೆರಳಿಸಿದೆ..

ಬಾಹುಬಲಿನಾ? ಮಾಸ್ತಿಗುಡಿನಾ? ಅನ್ನೋ ಡಿಸ್ಕಶನ್ ಕೂಡ ನಡೆದಿತ್ತು. ಅದಕ್ಕೆ ಪುಷ್ಠಿ  ಕೊಡೊ ಹಾಗೆ  ಬಿಸೆನೆಸ್ ದೃಷ್ಟಿಯಿಂದಲೂ ಮಾಸ್ತಿಗುಡಿ ಹವಾ ಕ್ರಿಯೇಟ್ ಮಾಡ್ತಿದೆ..

ಇದರ ವಿತರಕ ಜಾಕ್ ಮಂಜು 10.80 ಕೋಟಿ ನೀಡಿ ರಾಜ್ಯಾದ್ಯಂತ  ವಿತರಣೆ ಹಕ್ಕು ಪಡೆದಿರೋದು ಹೈಲೇಟ್ ಆಗಿದೆ.ಚಿತ್ರದ ತಾಕತ್ತು ಎಂಥದ್ದು ಎಂಬುದನ್ನು ನೋಡಿ ಇಷ್ಟು ದುಡ್ಡನ್ನ ಕೊಡಲು ನಿರ್ಧರಿಸಿದ್ದಂತೆ ಮಂಜು.

ಎಲ್ಲವೂ ಅಂದುಕೊಂತೆ ನಡೆದರೆ ಮೇ 12 ರಂದು ಮಾಸ್ತಿಗುಡಿ ನಿಮ್ಮ ಮುಂದೆ ಬರಲಿದೆ..  ಚಿತ್ರದ ಸ್ಟೋರಿಬೋರ್ಡ್ ಮಾಸ್ತಿಗುಡಿಯ  ತಾಕತ್ತಿನ ಬಗ್ಗೆ ಸಾಕ್ಷಿ ನೀಡುತ್ತೆ ಅಂತಾರೆ  ಮಂಜು..ಈ ನಂಬಿಕೆ ಮೇಲೆಯೇ ಹಕ್ಕುಗಳನ್ನು ಅಷ್ಟು ದುಬಾರಿ ಹಣ ಕೊಟ್ಟು ಖರೀದಿಸಿದ್ದಾರೆ..

 ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದು ವಿಪರ್ಯಾಸ ಅವರಿಬ್ಬರಿಗೋಸ್ಕರವೇ ನಿರ್ಮಾಪಕ ಸುಂದರ್ ಗೌಡ ಈ ಸಿನಿಮಾ ಮಾಡಿದ್ದು ಆ ಪಾತ್ರಗಳೆ ಇಡೀ ಚಿತ್ರದ ಹೈಲೈಟ್ಸ್ ಅನ್ನೋ ಮಂಜು ಈ ಚಿತ್ರದ ಮೇಲೆ ಕಂಪ್ಲೀಟ್ ಹೋಪ್ ಇಟ್ಟಿದ್ದಾರೆ ..

ಎನಿವೇ ಮಾಸ್ತಿಗುಡಿ ಚಿತ್ರ ಹಿಟ್ ಆಗಿ ಕಲೆಕ್ಷನ್ ಬಾಕ್ಸ್ ಕೊಳ್ಳೆ ಹೊಡೆಯುತ್ತಾ ಕಾದು ನೋಡಬೇಕು.

_ಪಲ್ಲವಿ ಗೌಡ

-Ad-

Leave Your Comments