ಯೂಟ್ಯೂಬ್ ನಲ್ಲೂ ಮಾಸ್ತಿ ಹವಾ!!

ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನಿಮಾ ಸಾಕಷ್ಟು ಮಾತುಗಳಿಗೆ ಆಹಾರವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಡೆದ ಸಹ ನಟರ ದುರಂತ ಅಂತ್ಯ, ಸಿನಿಮಾ ತಂಡವನ್ನೇ ಜರ್ಜರಿತರನ್ನಾಗಿಸಿತ್ತು.. ಇದೆಲ್ಲವನ್ನು ಮೆಟ್ಟಿನಿಂತ ನಿರ್ದೇಶಕ ನಾಗಶೇಖರ್ ಹಾಗೂ ನಟ ದುನಿಯಾ ವಿಜಯ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ಮೇ 12ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ಮಾಸ್ತಿಗುಡಿ ಇನ್ನೊಂದು ಸಾಧನೆ ಮಾಡಿದೆ.

ಮಾಸ್ತಿಗುಡಿ ಸಿನಿಮಾದ ಎರಡನೇ ಟ್ರೈಲರ್ ಯುಟ್ಯೂಬ್‌ನಲ್ಲಿ ದೂಳೆಬ್ಬಿಸಿದೆ. ಟ್ರೆಂಡಿಂಗ್ ನಂಬರ್ 2 ಸ್ಥಾನ ಗಳಿಸಿದೆ. ಸಂಪೂರ್ಣ ಕಾಡಿನ ಆಸುಪಾಸಿನಲ್ಲೇ ಚಿತ್ರಕಥೆ ಇದ್ದು ಹುಲಿಗಳ ಸಂರಕ್ಷಣೆ ಬಗೆಗಿನ ಕಥೆಯನ್ನು ಒಳಗೊಂಡಿದೆ. ಚಿತ್ರದ ನಾಯಕ ವಿಜಯ್ ಐದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರೋದು‌ ಸಿನಿಮಾದ ಹೈಲಟ್ಸ್. ನಾಯಕಿಯಾಗಿ ನಟಿ ಅಮೂಲ್ಯ ಅಭಿನಯಿಸಿದ್ದು, ಕೃತಿ ಕರಬಂಧ, ರವಿಶಂಕರ್ ಗೌಡ ಕೂಡ ಪಾತ್ರ ನಿರ್ವಹಿಸಿದ್ದಾರೆ. ಸಾಧು ಸಂಗೀತ ಜೊತೆ ಕವಿರಾಜ್ ಗೀತರಚನೆ ಗಮನಸೆಳೆದಿದೆ.

-Ad-

Leave Your Comments