ಮಾತು ಉಳಿಸಿಕೊಂಡ ಮಾಸ್ತಿ ಗುಡಿ

ಮಾಸ್ತಿಗುಡಿ ಚಿತ್ರ ಇಂದು ತೆರೆ ಕಂಡಿದೆ. ಇದಕ್ಕೂ ಮುನ್ನ ನಡೆದ ದುರಂತ ಜನರ ಮನಸ್ಸಿನಲ್ಲಿ ಇನ್ನೂ ಅಳಿಯದೆ ನಿಂತಿದೆ. ಅದು ಉದಯ್ -ಅನಿಲ್ ಸಾವು. ತಮ್ಮದಲ್ಲದ ತಪ್ಪಿಗೆ ಅಸುನೀಗಿದ ಅಸಹಾಯಕರಿವರು.

ಇಬ್ಬರು ಪ್ರತಿಭಾವಂತರನ್ನು ಅಜಾಗೂರುಕತೆಯಿಂದ ಕಳೆದುಕೊಂಡ ಚಿತ್ರ ತಂಡದ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಹಲವರು ಜೈಲಿನ ಮುಖವನ್ನೂ ಕಾಣಬೇಕಾಗಿ ಬಂದಿತ್ತು. ಇದರ ನಡುವೆ ನಡೆದ ವಾಣಿಜ್ಯ ಮಂಡಳಿ ಸಭೆಯಲ್ಲಿ ಚಿತ್ರ ಬಿಡುಗಡೆಗೂ ಮುನ್ನ  ಉದಯ್ ಕುಟುಂಬಕ್ಕೆ ಧನ ಸಹಾಯ ಮಾಡುವುದಾಗಿ ಚಿತ್ರತಂಡ ಒಪ್ಪಿಕೊಂಡಿತ್ತು. ಆ ಮಾತಿನಂತೆ ಬಿಡುಗಡೆಗೂ ಮುನ್ನಾ ದಿನ ಪತ್ರಿಕಾ ಗೋಷ್ಠಿ ಕರೆದು  ಇಪ್ಪತ್ತು ಲಕ್ಷ ಹಣವನ್ನು ಉದಯ್ ತಂದೆ-ತಾಯಿಗೆ ಒಪ್ಪಿಸಿದೆ.

ಮಾಸ್ತಿಗುಡಿ ಚಿತ್ರತಂಡ ಐಸಿಐಸಿ ಬ್ಯಾಂಕ್ ನಲ್ಲಿ ಇಪ್ಪತ್ತು ಲಕ್ಷ ರೂಪಾಯಿಗಳ ಠೇವಣಿ ಇಟ್ಟಿದೆ. ಇದರಿಂದ ಪ್ರತೀ ತಿಂಗಳು ಉದಯ್ ತಂದೆ-ವೆಂಕಟೇಶ್ ,ತಾಯಿ ಕೌಶಲ್ಯಾಗೆ ಇಪ್ಪತ್ತು ಸಾವಿರ ಬಡ್ಡಿ ಬರಲಿದೆ .

ಸಭೆಯಲ್ಲಿ ನಟ ದುನಿಯಾ ವಿಜಯ್ , ನಿರ್ದೇಶಕ ನಾಗಶೇಖರ್ , ನಿರ್ಮಾಪಕ ಸುಂದರ್ ಗೌಡ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಉಪಸ್ಥಿತರಿದ್ದರು.

-Ad-

Leave Your Comments