ಉಂಗುರ ತೊಡಿಸಲು ಸಿದ್ದರಾದ ಮೇಘನಾರಾಜ್ -ಚಿರಂಜೀವಿ ಸರ್ಜಾ !!

ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಮಧ್ಯೆ ಪ್ರೇಮ ಸಂಬಂಧವಿದ್ದು, ಅವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎರಡು ವರ್ಷಗಳಿಂದ ಕೇಳಿ ಬರುತ್ತಿತ್ತು. ಖಾಸಗಿ ಸಮಾರಂಭಗಳಲ್ಲಿ ಇಬ್ಬರೂ ಒಟ್ಟಾಗಿ ಭಾಗವಹಿಸುತ್ತಿದ್ದರಿಂದ ಚಿರು-ಮೇಘನಾ ಮಧ್ಯೆ ಪ್ರೀತಿ ಮೊಳೆತಿದೆ ಎನ್ನಲಾಗಿತ್ತು.
ಆದರೆ ಈಗ ಇವೆಲ್ಲ ಅಂತೆ-ಕಂತೆಗಳಿಗೆ ತೆರೆ ಬಿದ್ದಿದೆ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ನಿಶ್ಚಿತಾರ್ಥ ನಿಕ್ಕಿಯಾಗಿದ್ದು, ಈ ಮೂಲಕ ಕನ್ನಡ ಚಿತ್ರರಂಗದ ಮತ್ತೊಂದು ತಾರಾ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಅಕ್ಟೋಬರ್‌ 22ರಂದು ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಚಿರು-ಮೇಘನಾ ನಿಶ್ಚಿತಾರ್ಥ ನಡೆಯಲಿದೆ. ಬರುವ ಡಿಸೆಂಬರ್‌ನಲ್ಲಿ ಈ ಸ್ಟಾರ್‌ ಜೋಡಿ ಸಪ್ತಪದಿ ತುಳಿಯಲಿದೆ ಎಂಬ ಮಾಹಿತಿ ದೊರೆತಿದೆ.
ಮೇಘನಾರಾಜ್ ಹಾಗು ಚಿರಂಜೀವಿ ಸರ್ಜಾ “ಆಟಗಾರ ” ಚಿತ್ರದಲ್ಲಿ ಅಭಿನಯಿಸಿದ್ದರು. ಇದು ದ್ವಾರಕೀಶ್ ನಿರ್ಮಿಸಿದ್ದ ಚಿತ್ರ. ಯಶಸ್ಸು ಕೂಡ ದಕ್ಕಿತ್ತು. ಮೇಘನಾ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ ರಾಜಾಹುಲಿ ಚಿತ್ರ ವೃತ್ತಿ ಬದುಕನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತ್ತು.
ಈ ತಾರಾ ಜೋಡಿ ವಯಕ್ತಿಕ ಮತ್ತು ವೃತ್ತಿ ಬದುಕಲ್ಲಿ ಸಕ್ಸಸ್ ಕಾಣಲಿ ಅಂತ ಹಾರೈಸುತ್ತಿದೆ ciniadda.com 
-Ad-

Leave Your Comments