ಮತ್ತೆ ಮೆಂಟಲ್ ಆದ ಸ್ಯಾಂಡಲ್ ವುಡ್ ಹೀರೊ !!

ಅರೇ ಇದೇನಪ್ಪ, ಯಾರಿಗೆ ಏನಾಯ್ತು ಅಂತ ತಲೆ ಕೆಡಸ್ಕೊಂಡ್ರಾ….
ನಿಮ್ಗೆ ನೆನಪಿರಬಹುದು ದಶಕದ ಹಿಂದೆ “ಮೆಂಟಲ್ ಮಂಜ” ಅನ್ನೋ ಒಂದ್ ಹೊಸಬರ ಸಿನಿಮಾ  ಬಂದಿತ್ತು, ಆ ಕಾಲಕ್ಕೆ  ಪಡ್ಡೆಗಳಲ್ಲಿ ಒಂದ್ ರೇಂಜ್ಗೆ  ಹವಾ ಸೃಷ್ಟಿ ಮಾಡಿತ್ತು. ಆ ಕಾಲಕ್ಕೆ ರೌಡಿಸಂ ಸಿನೆಮಾಗಳದ್ದೇ  ಅಬ್ಬರ. ಅದ್ರ ನಡುವೆ ಕನ್ನಡ ಚಳುವಳಿ ಹೋರಾಟಗಾರ  ನಾರಾಯಣ್ ಅವರ ಮಕ್ಕಳಾದ ಅರ್ಜುನ್, ಸಾಯಿಸಾಗರ್ ಸಹೋದರರು ಹೀರೋ, ನಿರ್ದೇಶಕರಾಗಿ  ಮೆಂಟಲ್ ಮಂಜ ಅನ್ನೋ ರೌಡಿಸಂ ಸಿನಿಮಾ ಮಾಡಿ ಗೆದ್ದಿದ್ದರು. ದರ್ಶನ್ ಮುಂದೆ ನಿಲ್ಲೊಂಥ  ಮತ್ತೊಬ್ಬ ಹೀರೋ ಸಿಕ್ಕ ಅಂತ ಗಾಂಧಿ ನಗರ ಮಾತಾಡಿಕೊಂಡಿತ್ತು. ನಿರ್ದೇಶಕ ಸಾಯಿಸಾಗರ್ ಭರವಸೆಯ ನಿರ್ದೇಶಕ ಅಂದಿದ್ದರು…   ಆದ್ರೆ ಅದ್ಯಾಕೋ ಏನೋ ಆಮೇಲೆ ಮಾಡಿದ ” ತಿಮ್ಮ”, ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ” ಸೋತಿದ್ದವು

ಮೆಂಟಲ್ ಸ್ಟಾರ್ !!

ರಾಕಿಂಗ್ ಸ್ಟಾರ್,ಪವರ್ ಸ್ಟಾರ್,ಚಾಲೆಂಜಿಂಗ್ ಸ್ಟಾರ್,ರಿಯಲ್ ಸ್ಟಾರ್ ಹಿಂಗೆ ಇನ್ನೂ ಹಲವಾರು ಸ್ಟಾರ್ ಗಳು ಇದಾರೆ, ಆದ್ರೆ  ಅರ್ಜುನ್ ಮಾತ್ರ ಮೆಂಟಲ್ ಸ್ಟಾರ್!!
ಮೆಂಟಲ್ ಮಂಜ ಹಿಟ್ ಆದಾಗ ಮೆಂಟಲ್ ಸ್ಟಾರ್ ಅಂತ ಬಿರುದು ಕೊಟ್ಟಿದ್ದು ಅಭಿಮಾನಿಗಳಂತೆ.

ಹಲವು ವರ್ಷದ ಗ್ಯಾಪ್ ನಂತರ ಇವಾಗ ಮೊದಲ ಗೆಲುವಿನ ಜಾಡನ್ನ ಹಿಡಿದು “ಮೆಂಟಲ್ ಮಂಜ 2” ಮಾಡ್ತಾ ಇದಾರೆ ಈ ಅಣ್ತಮ್ಮಾಸ್ !!  ಶಾರ್ಟ್ ಆಗಿ mm2  ಅಂತಿದಾರೆ,
MM2 !! ಅಂದ್ರೆ ಮೆಂಟಲ್ ಮಂಜ ಪಾರ್ಟ್ 2.

ಪಕ್ಕಾ ಪ್ರಯೋಗಾತ್ಮಕ ರೌಡಿಸಂ ಸಿನಿಮಾ ಅಂತೆ. ಮೇಕಪ್ ಇಲ್ಲದ ಸಹಜ ಫೀಲ್ ಕಟ್ಟಿಕೊಡೋಕೆ ಹೊರಟಿದ್ದಾರೆ. ಇದುವರೆಗೂ ಯಾರೂ ತೊರಿಸದ ಭೂಗತ ಲೋಕವನ್ನ ತೊರಿಸ್ತಾ ಇದಾರಂತೆ. ರೌಡಿಯೊಬ್ಬ ಸಮಾಜದ ಬ್ರಷ್ಟಾಚಾರವನ್ನ ನಿಗ್ರಹಿಸುವ ಕೆಲಸ ಮಾಡ್ತಾನಂತೆ!
ಸದ್ಯ ಗಾಂಧಿನಗರ ಕಾಮೆಡಿ,ಹಾರರ್, ಲವ್ ಸ್ಟೋರಿ ಹಿಂದೆ ಬಿದ್ದಿದೆ. ಒಂದು ಕಾಲದಲ್ಲಿ ಅಬ್ಬರಿಸಿದ್ದ ರೌಡಿಸಂ ಬೇಸ್ಡ್ ಸಬ್ಜೆಕ್ಟ್ ಗಳು ಇವಾಗ ಸಂಪೂರ್ಣ ಮಾಯವಾಗಿವೆ. ಈ ನಡುವೆ ಟ್ರೆಂಡ್ ಬ್ರೇಕ್ ಮಾಡಿ ಒಂದು ಹಸಿ ಹಸಿ ರೌಡಿಸಂ ಸಿನಿಮಾ ಮಾಡಿದ್ರೆ ಗೆಲ್ಲಬಹುದು ಅನ್ನೋದು ಸಾಯಿಸಾಗರ್ ಲೆಕ್ಕಾಚಾರ.
ಕತೆ, ಚಿತ್ರಕತೆ,ಸಂಭಾಷಣೆ,ಸಂಗೀತ,ನಿರ್ದೇಶನ ಎಲ್ಲಾ ವಿಭಾಗದ ಕ್ವಿಂಟಾಲ್  ಭಾರನ ತಾವೇ ಹೊತ್ತುಕೊಂಡಿದ್ದಾರೆ ನಿರ್ದೇಶಕರು! ಮಿಕ್ಕಂತೆ ಹೊಸ ಮುಖಗಳು ಇವರಿಗೆ ಜೊತೆ ಆಗಿದ್ದಾರೆ….

ಮೈಸೂರಲ್ಲಿ ಹುಟ್ಟಿ, ದೆಹಲಿಯಲ್ಲಿ ಬೆಳೆದು, ಮಾಡೆಲ್ ಆಗಿದ್ದ  ಅಪ್ಪಟ ಕನ್ನಡದ ಹುಡುಗಿ  ರಿಹಾನ್ಷಿ ನಾಯಕಿ. ಕಿರು ತೆರೆಯ ಹರ ಹರ ಮಹದೇವ ಧಾರಾವಾಹಿಯಲ್ಲಿ “ಲೇಖ” ಪಾತ್ರ ಮಾಡ್ತಾ ಇದಾರೆ. ಅಲ್ಲದೆ “ವಿನಾಶಿನಿ” ಅನ್ನೋ ಮತ್ತೊಂದು ಚಿತ್ರದಲ್ಲಿ ನಾಯಕಿ ಆಗಿದ್ದಾರೆ ಈ ಚೆಲುವೆ. ಇವರೊಂದಿಗೆ ಪ್ರಮೋದಿನಿ, ಯಶೋದಾ ಅನ್ನೋ ಇನ್ನಿಬ್ಬರು ನಾಯಕಿಯರು mm2  ಚಿತ್ರದಲ್ಲಿ ಇದಾರೆ.

ಇವಾಗ ಒಂದು ಹಂತದ ಚಿತ್ರೀಕರಣ ಪೂರೈಸಿದ ನಮ್ ಫಿಲ್ಮಲ್ಲಿ ಇನ್ನೂ ಬಹಳಷ್ಟು ವಿಶೇಷತೆಗಳಿದಾವೆ ನಿದಾನಕ್ಕೆ ರಿವೀಲ್ ಮಾಡ್ತೀನಿ ಅಂತಿದಾರೆ ಸಾಯಿಸಾಗರ್ .. ಮತ್ತೆ ಗೆಲವು ಸಿಗತ್ತಾ ಈ ಆಣ್ಣ್ತಮ್ಮಾಸ್ ಗೆ ಕಾದು ನೋಡೋಣ ….

-ವಿನಯ್ ಕಸ್ವೇ

-Ad-

Leave Your Comments