ಸಿನಿಮಾಗಳ ಮೇಲೂ ಮೋದಿ ಕೆಂಗಣ್ಣು

ತಮಿಳು ಸೂಪರ್ ಸ್ಟಾರ್ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರ ಕಳೆದ ವಾರ ಬಿಡುಗಡೆಯಾಗಿ 175 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ಎಸ್ ಟಿ ಬಗ್ಗೆ ಸಿನಿಮಾದಲ್ಲಿ ಒಂದು ಕಾಮಿಡಿ ಡೈಲಾಗ್ ಇದ್ದು, ಆ ಡೈಲಾಗ್ ಕಟ್ ಮಾಡುವಂತೆ ತಮಿಳುನಾಡು ಬಿಜೆಪಿ ಒತ್ತಡ ಹಾಕಿತ್ತು. ಬಿಜೆಪಿ ಮೆರ್ಸೆಲ್ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಹಾಗೆ ವಿಜಯ್ ಚಿತ್ರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿದ್ದು ಬಾಕ್ಸಾಫೀಸ್ ಲೂಟಿ ಮಾಡ್ತಿದೆ.
ತೆಲುಗು ವರ್ಷನ್ ಬಿಡುಗಡೆಗೆ ಅಡ್ಡಗಾಲು
ತಮಿಳುನಾಡಲ್ಲಿ ಬಿಜೆಪಿ ಅಷ್ಟೊಂದು ಪ್ರಬಲವಾಗಿಲ್ಲ.ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ, ಡಿಎಂಕೆ ಮಾತ್ರ ಪ್ರಾಬಲ್ಯ ಸಾಧಿಸಿರೋದ್ರಿಂದ ತಮಿಳು ಚಿತ್ರದ ಮೇಲೆ ಯಾವುದೇ ವ್ಯತಿರಿಕ್ತವಾದ ಪರಿಣಾಮ ಬೀರಲಿಲ್ಲ. ಆದರೆ ಇಂದು ಬಿಡುಗಡೆ ಆಗಬೇಕಿದ್ದ ತೆಲುಗು ಭಾಷೆಯ ಅದಿರಂದಿ ಚಿತ್ರಕ್ಕೆ ಪರಿಣಾಮ ಬೀರಿದೆ.
ಆಂಧ್ರದಲ್ಲಿ ಅದಿರಂದಿ ಚಿತ್ರದಲ್ಲಿ ಇರುವ ಜಿ ಎಸ್ ಟಿ ಕಾಮಿಡಿ ಡೈಲಾಗ್ ಗೆ ಕತ್ತರಿ ಹಾಕುವಂತೆ ಒತ್ತಡ ಕೇಳಿಬಂದಿದೆ. ಹೀಗಾಗಿ ಸೆನ್ಸಾರ್ ಮಂಡಳಿಯಿಂದ  ಪ್ರಮಾಣ ಪತ್ರವೂ ಸಿಕ್ಕಿಲ್ಲ..
ಟೀಕೆ ಸಹಿಸದ ಬಿಜೆಪಿ..! ಪ್ರಜಾಪ್ರಭುತ್ವಕ್ಕೆ ಸಂಕಷ್ಟ
ಪ್ರಜಾಪ್ರಭುತ್ವದಲ್ಲಿ ಟೀಕೆ ಇರಬೇಕು, ಆಡಳಿತ ನಡೆಸುವವರನ್ನು ಟೀಕೆ ಮಾಡುವ ಮೂಲಕ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಈ ರೀತಿಯ ಟೀಕೆ ಟಿಪ್ಪಣಿ ಇಂದು ಆರಂಭವಾಗಿರುವುದಲ್ಲ. ಎಲ್ಲಾ ಪಕ್ಷಗಳ ಆಡಳಿತದಲ್ಲೂ ಮಾಧ್ಯಮಗಳಲ್ಲಿ ಟೀಕೆ ಸಹಜ. ಅದೇ ರೀತಿ ಸಿನಿಮಾ ಕೂಡ ಒಂದು ವಿಧದ ಮಾಧ್ಯಮವೇ ಆಗಿದ್ದು ಅನೇಕ ಸರ್ಕಾರಗಳು, ರಾಜಕಾರಣಿಗಳ ಬಗ್ಗೆ ಸಿನಿಮಾದಲ್ಲಿ ಕಾಲೆಳೆಯಲಾಗುತ್ತೆ. ಆದ್ರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಟೀಕೆಗಳಿಗೆ ಬ್ರೇಕ್ ಹಾಕಲಾಗ್ತಿದೆ. ಜಿ ಎಸ್ ಟಿ ಈಗಾಗಲೇ ಹಲವಾರು ಟೀಕೆಗಳಿಗೆ ಗುರಿಯಾಗಿರುವ ಬೆನ್ನಲ್ಲೇ ಸಿನಿಮಾದಲ್ಲೂ ಬಳಕೆ ಮಾಡಿಕೊಂಡಿರುವುದು ಸಹಜ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ. ಆದರೆ ಸಿನಿಮಾ ಬಿಡುಗಡೆಗೆ ಅಡ್ಡಿ ಮಾಡುವುದು ಎಷ್ಟು ಸರಿ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದೆ ಅದಿರಿಂದಿ ಚಿತ್ರ ಬಿಡುಗಡೆ ಆಗುತ್ತಾ..? ಆಗಲ್ವಾ..? ಅನ್ನೋದನ್ನ ಕಾದು ನೋಡಬೇಕಿದೆ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments