ಮಿತ್ರ ‘ಪರಸಂಗ’ಕ್ಕೆ ಮೈಸೂರಿನಲ್ಲಿ ಮುಹೂರ್ತ

ನಟ ಮಿತ್ರ ಅವರ ಹೊಸ ಚಿತ್ರ ಪರಸಂಗದ ಮೂಹೂರ್ತ ಶುಕ್ರವಾರ ಮೈಸೂರಿನಲ್ಲಿ ನಡೆದಿದೆ. ನಗರದ ಅಗ್ರಹಾರದಲ್ಲಿರುವ ನೂರಾ ಒಂದು ಗಣಪತಿ ದೇವಸ್ಥಾನದಲ್ಲಿ ಪರಸಂಗ ಚಿತ್ರತಂಡ ವಿಷ್ನೇಶ್ವರನಿಗೆ ಪೂಜೆ ಸಲ್ಲಿಸಿ, ಚಿತ್ರದ ಮೂಹೂರ್ತ ನೆರವೇರಿಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮಿತ್ರ, ‘ರಾಗ ಚಿತ್ರದ ನಂತರ ಮಿತ್ರ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು, ಅದಕ್ಕೆ ಈ ಚಿತ್ರವೇ ಉತ್ತರ. ಈ ಚಿತ್ರದ ಶೀರ್ಷಿಕೆ ಕೇಳಿದೊಡನೆ ಹಿರಿಯ ನಟ ಲೋಕೇಶ್ ಅಭಿನಯದ ಪರಸಂಗದ ಗೆಂಡೆತಿಮ್ಮನ ನೆನಪಾಗೋದು ಸಹಜ. ಆದರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಪಕ್ಕ ಹಳ್ಳಿ ಕಥೆಯಾಗಿದ್ದು, ಹಳ್ಳಿಯ ಸೊಗಡನ್ನು ಮತ್ತಷ್ಟು ಬಿತ್ತರಿಸುವ ಪ್ರಯತ್ನ ಇದಾಗಿದೆ. ಕನ್ನಡ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ’ ಎಂದು ಹೇಳಿದರು.

ನಂತರ ಮಾತನಾಡಿದ ನಟಿ ಅಕ್ಷತಾ ಶ್ರೀನಿವಾಸ್, ‘ಈ ಪರಸಂಗ ಚಿತ್ರ ನನ್ನ ಕನ್ನಡದ ಮೊದಲನೇ ಚಿತ್ರ. ಈ ಚಿತ್ರದ ಕತೆ ತುಂಬಾ ಚೆನ್ನಾಗಿದ್ದು, ಇಂದು ಚಿತ್ರಕ್ಕೆ ಮುಹೂರ್ತ ನಡೆಯುತ್ತಿದೆ. ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಬೆಂಬಲಿಸಿ’ ಎಂದು ಹೇಳಿದರು.

-Ad-

Leave Your Comments