“ದಿ ವಿಲನ್” ಗೆ ಮಿಥುನ್ ಚಕ್ರವರ್ತಿ ವಿಲನ್ !!

  ಯಾವಾಗಲೂ ದೊಡ್ಡ ಕನಸನ್ನೇ ಕಾಣಬೇಕು ಅಂತ ದೊಡ್ಡೋರು ಹೇಳುತ್ತಾರೆ. ಆದರೆ ದೊಡ್ಡ ಕನಸು ಕಾಣುವುದಕ್ಕೆ ತುಂಬಾ ಧೈರ್ಯ ಬೇಕು. ಆ ಧೈರ್ಯವನ್ನು ತೋರಿದ್ದು ನಿರ್ದೇಶಕ ಪ್ರೇಮ್.
   ಮೊದಲು ಅವರು ವಿಲನ್ ಸಿನಿಮಾಗಾಗಿ ಸುದೀಪ್ ಮತ್ತು ಶಿವರಾಜ್‌ಕುಮಾರ್ ಅವರನ್ನು ಜೊತೆಗೂಡಿಸಿದರು.ದಿ ವಿಲನ್ ಫಸ್ಟ್ ಲುಕ್ ಅದ್ಭುತವಾಗಿ ಬಿಡುಗಡೆ ಮಾಡಿದರು. ಈಗ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಅದೇನ್ ಗೊತ್ತಾ?

  ವಿಲನ್ ಸಿನಿಮಾಗೆ ಖಡಕ್ ವಿಲನ್ ಅನ್ನೇ ಕರೆದುಕೊಂಡುಬಂದಿದ್ದಾರೆ. ಒಂದು ಕಾಲದಲ್ಲಿ ಇಡೀ ಭಾರತವನ್ನು ಆಳಿದ ಅಪರೂಪದ ಆ ನಟ ಯಾರು ಅಂತ ಗೊತ್ತಾ?

  ಒನ್ ಆ್ಯಂಡ್ ಓನ್ಲೀ ಮಿಥುನ್ ಚಕ್ರವರ್ತಿ !
  ಬಾಲಿವುಡ್‌ನ ಈ ಸೂಪರ್‌ಸ್ಟಾರ್ ಇದುವರೆಗೆ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ತೆಲುಗಿನಲ್ಲಿ ಗೋವಿಂದ ಗೋಪಾಲ ಸಿನಿಮಾದಲ್ಲಿ ನಟಿಸಿದ್ದರು.
  ಈಗ ಅವರನ್ನು ಪ್ರೇಮ್ ಕನ್ನಡಕ್ಕೆ ಕರೆದುಕೊಂಡು ಬಂದಿದ್ದಾರೆ. ಮಿಥುನ್ ಚಕ್ರವರ್ತಿ ಮುಂದಿನವಾರ ಬೆಳಗಾವಿಯಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೂ ಆರಡಿ ಕಟೌಟ್ ಸುದೀಪ್ ಎದುರಿಗೆ.
  ಮಿಥುನ್ ಕೂಡ ಎತ್ತರದ ವ್ಯಕ್ತಿತ್ವ. ಇತ್ತ ಸುದೀಪ್ ಕೂಡ ಆರಡಿ ವೀರ. ಹಾಗಾಗಿ ಇವರಿಬ್ಬರನ್ನು ಸ್ಕ್ರೀನಲ್ಲಿ ನೋಡುವುದೇ ಅಭಿಮಾನಿಗಳಿಗೆ ಹಬ್ಬ.
  -Ad-

  Leave Your Comments