ಮುದ್ದುಮನಸೇ ಹೀರೋ ಈಗ ಪೊಲೀಸರ ಅತಿಥಿ

ಜೀ  ಕನ್ನಡ ಚಾನೆಲ್ ಕೆಲ ವರ್ಷಗಳ ಹಿಂದೆ ಪ್ಯಾಟೆ ಮಂದಿ ಕಾಡಿಗ್ ಬಂದ್ರು ಅಂತ ಒಂದು ರಿಯಾಲಿಟಿ ಶೋ ಮಾಡಿತ್ತು. ಅದ್ರಲ್ಲಿ ಆರುಗೌಡನೂ ಒಬ್ಬ ಸ್ಪರ್ದಿ ಆಗಿ ಭಾಗವಹಿಸಿದ್ದ . ಅದ್ರಲ್ಲಿ ಸ್ವಲ್ಪ ದಿನ ಮುಖ ತೋರಿಸಿದ್ದೇ  ತಡ ನಾನೂ ಹೀರೊ ಆಗ್ಬೇಕು ಅಂತ ಮುದ್ದು ಮನಸೇ ಅಂತ ಒಂದ್ ಚಿತ್ರ ಮಾಡಿದ್ದ. ಆ ಚಿತ್ರ ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಚಿತ್ರರಂಗದಲ್ಲಿ ಹೆಂಗಾದ್ರು ಮಾಡಿ ಒಬ್ಬ ಹೀರೊ ಅನ್ನಿಸಿಕೊಳ್ಬೇಕು  ಅಂತ ಹೆಣಗಾಡ್ತಾ ಇರೋವಾಗ ಒಂದ್ ಒಳ್ಳೆ ಬಿಸ್ನೆಸ್ ಐಡಿಯಾ ಬಂದಿತ್ತು..
ಹುಕ್ಕಾ ಬಾರ್ !

ಐಡಿಯಾ ಬಂದಿದ್ದೇ ತಡ ಸ್ನೇಹಿತರ ಜೊತೆಗೂಡಿ ಚಂದ್ರ ಲೇಔಟ್ ನಲ್ಲಿ ಒಂದ್ ಹುಕ್ಕಾ ಬಾರ್ ಶುರು ಮಾಡೇಬಿಟ್ಟ. ಬೆಂಗಳೂರಲ್ಲಿ ಹುಕ್ಕಾಬಾರ್ ಗಳನ್ನ ನಿಷೇಧಿಸಿ ವರ್ಷಗಳೇ ಕಳೆದಿವೆ ಅನ್ನೋದನ್ನು ಕೇರ್ ಮಾಡದೆ ಬಾರಿನ ಕಾರುಬಾರಿಗೆ ಕೈ ಇಟ್ಟಿದ್ದ.
ಹಿಂಗಿದ್ದಾಗ ಅಕ್ರಮವಾಗಿ ನಡೆಸುತ್ತಿದ್ದ  ಹುಕ್ಕಾ ಬಾರ್ ಮೇಲೆ ಪೊಲೀಸರು ದಾಳಿ ಮಾಡಿ ಆರು ಗೌಡ  ಮತ್ತವನ ಸ್ನೇಹಿತರನ್ನ ಅರೆಸ್ಟ್ ಮಾಡಿದ್ದಾರೆ..
ಚಿತ್ರರಂಗದಲ್ಲಿ ನೆಲೆ ನಿಲ್ಬೇಕು ಅಂತ ಒದ್ದಾಡ್ತಿದ್ದವನಿಗೆ ಹುಕ್ಕಾ ಹುಸಾಬರಿ  ಬೇಕಿತ್ತಾ?
ತೆರೆ ಮೇಲೆ ಅಷ್ಟೇ ಅಲ್ಲ ನಿಜ ಜೀವನ ದಲ್ಲೂ  ನಿಯತ್ತಾಗಿ  ಬದುಕಿ  ತೋರಿಸಿ, ಹೀರೊ ಅನ್ನಿಸಿಕೊಳ್ಬೇಕು ಅಂತ ಈಗಲಾದರೂ ಅರುಗೌಡನಿಗೆ ಅನ್ನಿಸಿದ್ರೆ ಉದ್ದಾರ ಆಗಬಹುದು . ಇಲ್ಲದಿದ್ರೆ ಪರಮಾತ್ಮ ಬಂದ್ರು ಪರದಾಟ ತಪ್ಪಿದ್ದಲ್ಲ .

-Ad-

Leave Your Comments