“ಮಮ್ಮಿ” ಹೋದಲೆಲ್ಲಾ ಮಸ್ತ್ ಮಸ್ತ್ ಮೋಡಿ!!

ಮಮ್ಮಿ ನೋಡಿ ಬಂದ ಮೊದಲ ದಿನ ಎದೆಗಾರಿಕೆ ಇದ್ದವರಿಗೆ ಮಾತ್ರ ಮಮ್ಮಿ . ಹ್ಯಾಪಿ ಗಢ ಗಢ ! ಢವ ಢವ !ಅಂದಿದ್ದೆವು ನಾವು.  . ನಮ್ಮ ಜನ “ನಾವು ಯಾವುದರಲ್ಲೂ ಕಮ್ಮಿ ಇಲ್ಲ. ಎದೆಸೆಟೆಸಿ ಅದೇನಾಗುತ್ತೋ ನೋಡೇ ಬಿಡಾನ ನಡಿ” ಅಂತ ನೋಡಿ.. ನೋಡಿ.. ಮಮ್ಮಿ ಯನ್ನ ಗೆಲ್ಲಿಸಿದ್ದಾರೆ.

mummy-kannada-movie-online

ತರಕಾರಿ ತಗೋಳೋಕು ಕಾಸಿಲ್ಲ . ಎಟಿಎಂ ನಲ್ಲಿ ದುಡ್ಡ್ಡಿಲ್ಲ . ಸಿಕ್ತಿರೋದೆಲ್ಲ 2000ದ  ಪಿಂಕ್ ನೋಟು. ಚೇಂಜ್ ಇಲ್ಲಾರಿ.. ಚೇಂಜ್ ಇಲ್ಲ . ಯಾರಿಗೇಳೋಣಾ ನಮ್ಮ ಪ್ರಾಬ್ಲಮ್ಮು ಅಂತ ತಲೆಕೆರ್ಕೊಂಡು ಗೊಣಗಾಡ್ತಿದ್ದ ನಮ್ ಜನ ಪ್ರಾಬ್ಲೆಮ್ನೆಲ್ಲ ಪಕ್ಕಕ್ಕಿಟ್ಟು , ಚಳಿಗಾಲದಲ್ಲಿ ಮೈಬಿಸಿ ಏರಿಸಿ ಭಯ ಹುಟ್ಟಿಸೋ ಮಮ್ಮಿ ಯನ್ನ ಅಪ್ಪಿಕೊಂಡ್ರು .ಒಪ್ಪಿಕೊಂಡ್ರು.

mummy-save-me-15-1481780992

ಬೆಂಗಳೂರಿನ ವೀರೇಶ್ ಚಿತ್ರಮಂದಿರಕ್ಕೆ ಕ್ಲಾಸ್ -ಮಾಸ್ ಸೇರಿಸಿಕೊಳ್ಳುವಷ್ಟು ಜಾಗವಿದೆ. ಅಂದ್ರೆ 2 ಪರದೆಗಳಿವೆ. 2 ವಾರದಲ್ಲಿ 30ಪ್ರದರ್ಶನ  ಕಂಡಿರೋ ಮಮ್ಮಿ ನೋಡಲಿಕ್ಕೆ ನೂಕುನುಗ್ಗಲು. ಹೌಸ್ ಫುಲ್ಲೋ ಫುಲ್ಲು !! ನಾಳೆಗೆ ಮೂರನೇ ವಾರಕ್ಕೆ ಕಾಲಿಡೋ ಮಮ್ಮಿಗೆ ಮುತ್ತಿಗೆ ಹಾಕಿದಂತೆ ಜನ ಬರ್ತಾನೆ ಇದ್ದಾರೆ.

ಬೆಂಗಳೂರಿನ ಎಲ್ಲಾ ಮಲ್ಟಿಪ್ಲೆಕ್ಸ್ನಲ್ಲೂ ಯಶಸ್ವಿ ಪ್ರದರ್ಶನ . ಇಲ್ಲದಿದ್ದರೆ ಗೊತ್ತಲ್ಲ ಮುಲಾಜಿಲ್ಲದೆ ಇಷ್ಟೊತ್ತಿಗೆ ಕಿತ್ತು ಬಿಸಾಕೀರ್ತಿದ್ರು. ಜನ ಬರದೇ ಕಾಸು ಸಿಗದೇ ಸುಂಸುಮ್ನೆ ಸಿನಿಮಾ ಓಡಿಸೋಕೆ ನಮ್ಮದೇನು ಛತ್ರವೇ ಸೋಮಿ ಅಂತಾರೆ ಬಂಡವಾಳದಾರರು.

ಬೆಂಗಳೂರು ಅಷ್ಟೇ ಅಲ್ಲ ಮೈಸೂರಿನ ಶಾಂತಲಾ, ಶಿವಮೊಗ್ಗದ  ಮಂಜುನಾಥ ಎಲ್ಲ ಕಡೆಯೂ ಭರ್ಜರಿಯಾಗಿ ಓಡುತ್ತಿದೆ ಮಮ್ಮಿ.

ಅಂದಹಾಗೆ ಬೆಂಗಳೂರಿನ ಓರಾಯಿನ್  ಮಾಲ್ನಲ್ಲಿ ನಾಳೆಯಿಂದ 2 ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಬೆಳಿಗ್ಗೆ 11 ಹಾಗು ಸಂಜೆ  7 ಗಂಟೆಗೆ.

mummy-movie-16

ಒಟ್ಟಿನಲ್ಲಿ ಮೊದಲ ನಿರ್ದೇಶನಕ್ಕೆ ಲೋಹಿತ್ ಗೆ ಸಕ್ಕತ್ ಸ್ವಾಗತ ಸಿಕ್ಕಿದೆ.  ಪ್ರಿಯಾಂಕಾ ಉಪೇಂದ್ರ , ಯುವಿನಾ, ಐಶ್ವರ್ಯ ಸಿಂದೋಗಿ ,ವತ್ಸಲಾ ಮೋಹನ್ ಸೇರಿದಂತೆ ಹೆಣ್ಣು ಮಕ್ಕಳೇ ಹೆಚ್ಚಾಗಿ ತುಂಬಿರುವ ಮಮ್ಮಿ  ಮಸ್ತ್ ಮಸ್ತ್ ಮೋಡಿ ಮಾಡಿದೆ.

ಹೆದರಿಕೆಯಲ್ಲೂ ಒಂಥರಾ ಎಂಜಾಯ್ಮೆಂಟ್ ಸಿಕ್ಕ್ತಿದೆ ಅಂದಹಾಗಾಯ್ತು.

ಸೋ ವನ್ಸ್ ಎಗೈನ್ ಹ್ಯಾಪಿ ಢವ.. ಢವ !!

 

-Ad-

Leave Your Comments