ಮುಂಗಾರುಮಳೆ-2 ಆಡಿಯೋ ಲಾಂಚ್‌ಗೂ ಒಂದು ಟ್ರೈಲರ್ :) !

ಟ್ರೈಲರ್‌ಗಳು ಸಿನಿಮಾಗೆ ಪ್ರೇಕ್ಷಕರನ್ನು ಹೆಚ್ಚಿಸುತ್ತವೆ. ಮತ್ತು ಸಿನಿಮಾ ಬಗ್ಗೆ ಕೂತಹಲವನ್ನು ಕೆರಳಿಸುತ್ತದೆ. ಈ ಟ್ರೈಲರ್‌ನಿಂದಲೇ ಕೆಲ ಸಿನಿಮಾಗಳು ಅತಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡು, ಬಾಕ್ಸ್ ಆಫೀಸ್‌ನಲ್ಲಿ ಅಲ್ಪ ಸ್ವಲ್ಪ ಹಣ ಗಳಿಕೆಯಲ್ಲೂ ಸಹಾಯ ಮಾಡುತ್ತವೆ. ಆದರೆ ಈಗ ಆಡಿಯೋ ರೀಲಿಸ್‌ಗೂ ಒಂದು ಟ್ರೈಲರ್ ಮಾಡಿ ಅದನ್ನು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು, ಚಿತ್ರದ ಸಂಗೀತದ ಬಗ್ಗೆ ಹೆಚ್ಚಿನ ಕೂತುಹಲ ಕೆರಳಿಸಿದೆ ಇಲ್ಲೊಂದು ಚಿತ್ರ ತಂಡ....

ಮುಂಗಾರುಮಳೆ-2 ಆಡಿಯೋ ಲಾಂಚ್‌ಗೂ ಒಂದು ಟ್ರೈಲರ್ 🙂 !

ಹೌದು, ಗೋಲ್ಡನ್‌ಸ್ಟಾರ್ ಗಣೇಶ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ಮುಂಗಾರುಮಳೆ-2 ಸಿನಿಮಾ ತಂಡದಿಂದ, ವಿಭಿನ್ನ ಪ್ರಯತ್ನವೆಂಬಂತೆ ಆಡಿಯೊ ರೀಲಿಸ್‌ಗೂ ಮುನ್ನ ಆಡಿಯೋದ ಬಗ್ಗೆ ಒಂದು ಟ್ರೈಲರ್ ಮಾಡಿ ಹರಿಯ ಬಿಟ್ಟಿದೆ.

ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಎರಡೇ ದಿನಕ್ಕೆ ಇದು ಲಕ್ಷಕ್ಕೂ ಹೆಚ್ಚು ಜನರನ್ನು ತನ್ನತ್ತ ಸೆಳೆದು ಟ್ರೆಂಡ್ ಸೆಟ್ ಮಾಡುತ್ತಿದೆ.

ಮುಂಗಾರು ಮಳೆ ಹೆಸರನ್ನು ಕೇಳದ ಕನ್ನಡದ ಯಾವುದೇ ಪ್ರೇಕ್ಷಕನಿಲ್ಲ! ಹಾಗು ಒಂದು ಕಾಲದಲ್ಲಿ ಸುಮಾರು ಆಯಾಮಗಳಲ್ಲಿ ಟ್ರೆಂಡ್ ಸೆಟ್ ಮಾಡಿದ ಸಿನಿಮಾ ಅದು.
ಪ್ರೇಮಿಗಳ ಮನಸ್ಸಿನಲ್ಲಿ ಬೆಚ್ಚಗೆ ಕೂತ ಸಿನಿಮಾ, ಕಾಮಿಡಿ ಟೈಮ್‌ನಂತಹ ಒಂದು ಶೋನಿಂದ ಬಣ್ಣದಲೋಕಕ್ಕೆ ಬಂದ ಗಣೇಶ್‌ಗೆ ಗೋಲ್ಡನ್ ಸ್ಟಾರ್ ಎಂದು ಬಿರುದು ನೀಡಿದ ಸಿನಿಮಾ ಅದು.

ಆ ಸಿನಿಮಾ ಹಾಡುಗಳು ಸಹ ಒಂದು ಟ್ರೆಂಡ್ ಸೆಟ್ ಮಾಡಿದ್ದವು. ಹಾಗಾಗಿ ಈಗಿನ ಸಿನಿಮಾ ಮುಂಗಾರುಮಳೆ-2 ಚಿತ್ರದ ಹಾಡುಗಳ ಮೇಲೂ ಅಷ್ಟೇ ನಿರೀಕ್ಷೆ ಇದೆ.

ನಾಯಕ ನಟ ಗಣೇಶ್ ಮತ್ತು ನಿರ್ಮಾಪಕ ಗಂಗಾಧರ್ ಹೊರತುಪಡಿಸಿ ಮುಂಗಾರುಮಳೆ ಚಿತ್ರದಲ್ಲಿ ತೊಡಿಗಿಸಿಕೊಂಡಿದ್ದ ಸಾಕಷ್ಟು ತಂತ್ರಜ್ಞರು ಭಾಗ 2 ರಲ್ಲಿ ಇಲ್ಲ.

ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದರೆ, ಸಂಗೀತ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರದ್ದು, ಸಾಹಿತ್ಯ ಜಯಂತ್‌ಕಾಯ್ಕಿಣಿ ಮತ್ತು ಶಶಾಂಕ್ ಅವರದ್ದು.

ಮೊದಲ ಚಿತ್ರದಂತೆ ಈ ಚಿತ್ರದ ಸಂಗೀತವೂ ಹಿಟ್ ಆದರೆ ಸಿನಿಮಾ ಗೆಲ್ಲಲು ಸಹಕಾರಿಯಾಗುತ್ತದೆ ಎಂಬ ಉದ್ದೇಶದಿಂದ ಮ್ಯೂಸಿಕ್ ಟ್ರೈಲರ್ ತಂತ್ರಕ್ಕೆ ಮೊರೆ ಹೋಗಿರುವಂತಿದೆ, ಶಶಾಂಕ್ ಮತ್ತವರ ತಂಡ.

ಟ್ರೈಲರ್‌ನಲ್ಲಿ ಸಿನಿಮಾಗಾಗಿ ಹಾಡಿರುವ ಎಲ್ಲ ಗಾಯಕರು ಮಾತನಾಡಿದ್ದಾರೆ. ಹಾಡನ್ನು ಚಿತ್ರೀಕರಿಸುವ ಜಾಗ ಮತ್ತು ಸನ್ನೀವೇಶಗಳು ಇವೆ. ಇನ್ನು ಸಾಹಿತ್ಯ ಒದಗಿಸಿರುವ ಜಯಂತ್‌ಕಾಯ್ಕಿಣಿ, ಶಶಾಂಕ್ ಅವರು ಸಹ ಟ್ರೈಲರ್‌ನಲ್ಲಿ ಮುಖ ತೋರಿಸಿದ್ದಾರೆ.

ಚಿತ್ರದ ಹೈಲೆಟ್ ಎಂದರೆ ರವಿಚಂದ್ರನ್ ಅವರಿಗೆ ಒಂದು ಹಾಡನ್ನು ವಿಶೇಷವಾಗಿ ರಚಿಸಲಾಗಿದೆ. ಒಟ್ಟಿನಲ್ಲಿ ಭಾಗ ಒಂದರಂತೆ ಇದು ಸಹ ಬ್ಲಾಕ್ ಬಸ್ಟರ್ ಹಿಟ್ ಆಗುವತ್ತ ತನ್ನ ಹೆಜ್ಜೆ ಇಟ್ಟಿದೆ ಎನ್ನಬಹುದು.

ಅಂದಹಾಗೆ , ಆ ಟ್ರೈಲರ್ ನಿಮಗಾಗಿ ಇಲ್ಲಿ ಸಾದರಪಡಿಸುತಿದ್ದೇವೆ ನೋಡಿ !

 

-Ad-

Leave Your Comments