ಈಕೆ ನಾಗಕನ್ನಿಕೆ !!

ಕಲರ್ಸ್ ಸೂಪರ್ ವಾಹಿನಿಯ ಬಹು ನಿರೀಕ್ಷಿತ ಧಾರಾವಾಹಿ ನಾಗಕನ್ನಿಕೆ  ಇದೇ ತಿಂಗಳ 26ರಿಂದ ಪ್ರಾರಂಭವಾಗಲಿದೆ.ಪ್ರೀತಿ -ಪ್ರತಿಕಾರ ಇದರ ಕಥಾವಸ್ತು.

ಕಲರ್ಸ್ ಸೂಪರ್ ವಾಹಿನಿಗೆ ಕಣ್ಣು ನೆಟ್ಟು ತಮ್ಮ ಫೇವರಿಟ್ ಸೀರಿಯಲ್ ಗಾಗಿ ಕಾಯುವ ಮಂದಿಗೆ ಮತ್ತೊಂದು ಸಿಹಿಸುದ್ದಿ “ನಾಗಕನ್ನಿಕೆ “. ನಾಗಕನ್ನಿಕೆಯಾಗಿ ರಾರಾಜಿಸಲಿರುವ ನಾಯಕಿ ಅದಿತಿ ಪ್ರಭುದೇವ್. ಈಕೆ ಇದಾಗಲೇ ಧೈರ್ಯಮ್ ಚಿತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ.

ಜೂನ್ 26ರಿಂದ ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ  7.30ಕ್ಕೆ ನಿಮ್ಮ ಮನೆಗೆ “ನಾಗಕನ್ನಿಕೆ ” ಬರಲಿದ್ದಾಳೆ. ಪ್ರೀತಿ -ಪ್ರತಿಕಾರದ ರೂಪ ಹೇಗೆಲ್ಲಾ ತೆರೆದುಕೊಳ್ಳಲಿದೆ. ನಾಗಕನ್ನಿಕೆಯ ವೈಭವ ಹೇಗಿರಲಿದೆ ಎಲ್ಲ ಕೂತೂಹಲ ತಣಿಯಬೇಕಾದರೆ ನಿತ್ಯ ನಾಗಕನ್ನಿಕೆ  ನೋಡಲೇಬೇಕಷ್ಟೆ.

-Ad-

Leave Your Comments