ನಾನು L/0 ಜಾನು !!

ಸನ್ ಆಫ್ , ವೈಫ್ ಆಫ್, ಡಾಟರ್ ಆಫ್ ಕೇಳಿದ್ವಿ . ಇದೇನಿದು ಲವರ್ ಆಫ್ ?

ಇಂಥದೊಂದು ಕುತೂಹಲ ಹುಟ್ಟಿಸಿ, ಕಲಾತಪಸ್ವಿ  ಲಾಂಛನದ ಅಡಿಯಲ್ಲಿ ಟೈಟಲ್ ರಿಲೀಸ್  ಮಾಡಿದ ಚಿತ್ರ    “ನಾನು L/0 ಜಾನು ”

naanu-lover-of-jaanu

ಗೊಂಬೆಗಳ ಲವ್ ಸ್ಟೋರಿ, ಪಯಣ ಸಿನಿಮಾದಲ್ಲಿ ಕೆಲಸ ಮಾಡಿರುವ ಸುರೇಶ “ನಾನು L/0 ಜಾನು ” ಕಥೆ,ಚಿತ್ರಕಥೆ ,ಸಂಭಾಷಣೆ ,ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅವರ ಪ್ರಕಾರ ಇದು ಹೊಸತನದಿಂದ ಕೂಡಿರುವ  ಪ್ರೀತಿಸುವ ಹೃದಯಗಳ  ಪ್ರೇಮಕಾವ್ಯ. ಕುಟುಂಬವೆಲ್ಲ ಕೂತು ನೋಡಬಹುದಾದ ಚಿತ್ರ .ಪ್ರೀತಿಯ ಕಥೆಗೆ ಸುಮಧುರ ಸಂಗೀತ ಲೇಪಿಸಿ ಕೊಡುವ ಸಿದ್ಧತೆ ನಡೆದಿದೆ. ನಾಗೇಂದ್ರ ಪ್ರಸಾದ್ ಬರೆದಿರುವ ೪ ಹಾಡುಗಳು ಪ್ರೇಕ್ಷರನ್ನ ಮುಟ್ಟುವುದು ಗ್ಯಾರಂಟಿ !! ಶ್ರೀನಾಥ್ ವಿಜಯ್ ಸಂಗೀತ ಕೂಡ ಕೇಳುಗರಿಗೆ ಖುಷಿ ಕೊಡುತ್ತೆ . ಹೈದ್ರಾಬಾದ್ ನ ಛಾಯಾಗ್ರಾಹಕ ಶಿವ ಬಿ ಕೆ ಕುಮಾರ್ ದೃಶ್ಯಗಳನ್ನು ಬಹಳ ಚೆನ್ನಾಗಿ ಸೆರೆಹಿಡಿದಿದ್ದಾರೆ.ಚಿಕ್ಕಮಗಳೂರು, ತುಮಕೂರು,ಮಂಗಳೂರು, ಬೆಂಗಳೂರಿನಲ್ಲಿ  ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿರುವ “ನಾನು L/0 ಜಾನು ” ಒಂದು ಹಾಡು ಹಾಗು ಕ್ಲೈಮಾಕ್ಸ್ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆ. ಡಿಸೆಂಬರ್ ನಲ್ಲಿ ಟೀಸರ್ ಬಿಡುಗಡೆ ಮಾಡಿ ಫೆಬ್ರವರಿ -ಮಾರ್ಚ್ ತಿಂಗಳಲ್ಲಿ ತೆರೆಗೆ ತರುವ ಪ್ಲಾನ್ ಇದೆ. ಮುಖ್ಯವಾಗಿ ಯಾವುದೇ ಫೈಟ್ ಇಲ್ಲದೆ ಸಂಗೀತ ಹಾಗು ಮೌನದಲ್ಲೆ  ಕ್ಲೈಮಾಕ್ಸ್ ಸೀನ್ ಶೂಟ್ ಮಾಡುವ ತಯಾರಿ ನಡೆದಿದೆ.

ಏಳು ಬಣ್ಣಗಳು

ಚಂದ್ರು ಕೆ ವಿ ,ರಾಜು, ವಿಷ್ಣು ಬಂಡಾರಿ, ರವಿಶಂಕರ್ ಕೆ ಬಿ ,ಮುರಳೀರಾವ್, ಮಹೇಶ್ ಎಚ್ ಬಿ, ಭುವನೇಶ್, ಒಟ್ಟು 7 ಮಂದಿ ನಿರ್ಮಾಪಕರ ತಂಡದಲ್ಲಿ ವಿಭಿನ್ನ ಹಿನ್ನೆಲೆಯಿಂದ ಬಂದವರಿದ್ದಾರೆ . ವಿಷ್ಣು ಅವರನ್ನು ಬಿಟ್ಟರೆ ಉಳಿದವರೆಲ್ಲ ಚಿತ್ರರಂಗಕ್ಕೆ ಹೊಸಬರೆ.

????????????????????????????????????
ವಿಷ್ಣು ಬಂಡಾರಿ -ನಟ, ನಿರ್ಮಾಪಕ

ಮಸ್ತ್ ಮೈಕಟ್ಟಿನ ವಿಷ್ಣು ಬಂಡಾರಿ ಜೋಗಯ್ಯ, ನಾಡರಕ್ಷಕ, ದಾದಾ ಈಸ್ ಬ್ಯಾಕ್ ಸಿನಿಮಾಗಳಲ್ಲಿ ವಿಲನ್ ರೋಲ್ ಮಾಡಿದ್ದಾರೆ .  “ನಾನು L/0 ಜಾನು ” ನಲ್ಲಿ ಮೊದಲ ಸೀನ್ ನಲ್ಲೆ ಭರ್ಜರಿ ಎಂಟ್ರಿ ಕೊಡಲಿದ್ದಾರಂತೆ. ಅವರೇ ಹೇಳುವಂತೆ ವಿಷ್ಣು, ರವಿಶಂಕರ್ ಕೆ ಬಿ ನಿರ್ದೇಶಕ ಸುರೇಶ ಬೆಂಗಳೂರಿನ ಕೆಜೆ ಶಾಲೆಯಲ್ಲಿ ಒಟ್ಟಿಗೆ ಓದಿದವರು. ಸಿನಿಮಾ ಮಾಡುವ ಆಸೆ ಮೊದಲಿಂದಾನು ಇತ್ತು. ಸುರೇಶ್ ಬೇರೆ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವಾಗ ನಾವೆಲ್ಲಾ ಸೇರಿ ಒಂದು ಚಿತ್ರ ಮಾಡೋಣ ಅಂತ ಮಾತಾಡಿಕೊಂಡೆವು. ಮಧ್ಯದಲ್ಲಿ ಸ್ವಲ್ಪ ಹಣಕ್ಕ್ಕೆ ತೊಂದರೆ ಬಂತು. ಒಂದೂವರೆ ವರ್ಷ ಸಿದ್ಧತೆ ಮಾಡ್ಕೊಂಡು ಬಂದಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ.

naanu-lover-of-hero

ನಾಯಕಿ ಮಂಜುಳಾ ನಾಯಕಿ ವಿಶಾಲ್ ಗೆ ಬೆಳ್ಳಿ ತೆರೆಯಲ್ಲಿಇದು ಮೊದಲ ದೊಡ್ಡ ಅವಕಾಶ. ವಿಶಾಲ್ ೧೦ ವರ್ಷದಿಂದ ಡಾನ್ಸ್ ಅಭ್ಯಾಸ ಮಾಡಿದ್ದಾರಂತೆ ,ಜೊತೆಗೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ ಅನುಭವ.

ಸುಚೇಂದ್ರ ಪ್ರಸಾದ್,ಚಿಕ್ಕಣ್ಣ , ಕಡ್ಡಿಪುಡಿ ಚಂದ್ರು ಸೇರಿದಂತೆ ಕೆಲ ನುರಿತ ಕಲಾವಿದರ ಜೊತೆಗೆ ಹಲವಾರು ಹೊಸ ಮುಖಗಳನ್ನು ತೆರೆಗೆ ತರುತ್ತಿದೆ  “ನಾನು L/0 ಜಾನು “.

ವಿಶೇಷ:

“ನಾನು L/0 ಜಾನು ” ತೆರೆಕಂಡ ನಂತರ ,ಚಿತ್ರ ನೋಡಿ ಕ್ಲೈಮಾಕ್ಸ್ ಸೀನ್ ಗೆ  ಬೆಸ್ಟ್ ಸಂಭಾಷಣೆ ಬರೆದು ಕಳುಹಿಸುವ ಪ್ರೇಕ್ಷಕರಿಗೆ ಬಹುಮಾನ ಕೊಡುವ  ಸ್ಪರ್ಧೆ ಕೂಡ ನಡೆಯಲಿದೆ.

 

 

-Ad-

Leave Your Comments