ಪಾರ್ವತಮ್ಮ ರಾಜಕುಮಾರ್ ಅಂತಿಮ ಯಾತ್ರೆಯಲ್ಲಿ ರಾಷ್ಟ್ರ ಧ್ವಜ ಸುತ್ತಿದ ಆರೋಪ.

ಪಾರ್ವತಮ್ಮ ರಾಜಕುಮಾರ್ ಅಂತಿಮ ಯಾತ್ರೆಯಲ್ಲಿ ರಾಷ್ಟ್ರ ಧ್ವಜ ಸುತ್ತಿದ ಆರೋಪ ಎಸಗಿದ್ದಾರೆ ಎಂದು
ಸರ್ಕಾರದ ಮುಖ್ಯ ಕಾರ್ಯದರ್ಶಿ , ಗೃಹ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ಖಾಸಗಿ ದೂರು ಸಲ್ಲಿಕೆಯಾಗಿದೆ .
ರಾಷ್ಟ್ರ ಧ್ವಜವನ್ನು ಕೇವಲ ಮಿಲಿಟರಿ ಅಧಿಕಾರಿಗಳ ಕಳೇಬರಕ್ಕೆ ಸುತ್ತಲು ಮಾತ್ರ ಅವಕಾಶವಿದೆ
ಬೇರೆ ಯಾವುದೇ ಖಾಸಗಿ ವ್ಯಕ್ತಿಗಳ ಅಂತಿಮ  ಸಂಸ್ಕಾರ ಕ್ಕೆ ಬಳಸಬಾರದು ಎಂಬ ನಿಯಮವಿದೆ.
ರಾಷ್ಟ್ರ ಧ್ವಜ ಕಾಯ್ದೆ ನಿಯಮ 5 ನ್ನು ಉಲ್ಲಂಘಿಸಿದ್ದು ,ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ರಾಷ್ಟ್ರ ಧ್ವಜ ಸುತ್ತುವ ಮೂಲಕ   prevention of insult to the national honour act 1971 ಕಾಯ್ದೆ ಪ್ರಕಾರ ಅಪರಾಧವೆಸಗಿದ್ದಾರೆ ಎಂದು ವಿಜಯನಗರ ನಿವಾಸಿ ವಕೀಲ ಚೇತನ್ ಖಾಸಗಿ ದೂರು ಸಲ್ಲಿಸಿದ್ದಾರೆ.
ಮುಂದೇನಾಗುವುದೋ ಕಾದು  ನೋಡೋಣ.
-Ad-

Leave Your Comments