ಈ ನಟಿ ಐವರ ಮುದ್ದಿನ ಹೆಂಡತಿಯಾಗಲು ರೆಡಿ..?!

ಬಾಹುಬಲಿ ಸಿನಿಮಾದಲ್ಲಿ ದೇವಸೇನಾ ಪಾತ್ರ ಮಾಡಿ ಎಲ್ಲರ ಮನಸೆಳೆದ ಅನುಷ್ಕಾ ಶೆಟ್ಟಿ, ಇದೀಗ ಎಲ್ಲರ ಮನ ಮನೆಗಳಲ್ಲೂ ದೇವಸೇನಾಳಾಗಿ ಗುರುತಿಸಿಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ಮೂಲಕ ಅನುಷ್ಕಾ ಶೆಟ್ಟಿ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಹೊಸ ತಿರುವನ್ನೇ ಪಡೆದುಕೊಂಡ್ರು. ಅಮೋಘ ಅಭಿನಯದ ಮೂಲಕ ಇದೀಗ ಬಾಹುಬಲಿಯ ದೇವಸೇನಾ ಅನುಷ್ಕಾ ಶೆಟ್ಟಿಗೆ ಭಾರೀ ಬೇಡಿಕೆಯೂ ಕ್ರಿಯೇಟ್ ಆಗಿದೆ.
ಅಲ್ಲಿ ಮಿಸ್ ಆದ ನಯನಾ ತಾರ ಇದೀಗ ದ್ರೌಪದಿ..!?
ಅಸಲಿಗೆ ಬಾಹುಬಲಿಯ ದೇವಸೇನಾ ಪಾತ್ರ ಅನುಷ್ಕಾ ಶೆಟ್ಟಿಗೆ ಬಂದಿರಲಿಲ್ಲ. ದೇವಸೇನಾ ಪಾತ್ರಕ್ಕೆ ನಿರ್ದೇಶಕ ರಾಜಮೌಳಿ ತೆಲುಗಿನ ಖ್ಯಾತ ತಾರೆ ನಯನಾ ತಾರಾರನ್ನು ಆಯ್ಕೆ ಮಾಡಿದ್ರು. ಆದ್ರೆ ಕಾರಣಾಂತರಗಳಿಂದ ನಯನಾ ತಾರಾ ದೇವಸೇನಳಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅಲ್ಲಿ ಕೈತಪ್ಪಿದ ಅವಕಾಶವನ್ನು ಕುರುಕ್ಷೇತ್ರದಲ್ಲಿ ಪಡೆಯಲು ಮುಂದಾಗಿದ್ದಾರೆ. ದ್ರೌಪದಿ ಪಾತ್ರಕ್ಕೆ ಬಣ್ಣಹಚ್ಚುವುದು ಬಹುತೇಕ ಕನ್ಫರ್ಮ್ ಆಗಿದೆ.
ನಯನ ತಾರಾ ಸೀರೆ ಸೆಳೆಯುವ ದುಶ್ಯಾಸನ ಯಾರು..? 
ನಯನ ತಾರಾ ತೆಲುಗಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಕನ್ನಡ ಚಿತ್ರೋದ್ಯಮದಲ್ಲು ಒಳ್ಳೆ ಹೆಸರು ಹೊಂದಿದ್ದಾರೆ. ಸ್ಯಾಂಡಲ್ ವುಡ್ ನಲ್ಲೂ ಸಾಕಷ್ಟು ಉತ್ತಮ ಚಿತ್ರಗಳಲ್ಲಿ ಅಭಿನಯಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಿರ್ಮಾಪಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿನಯಿಸಲು   ಒಪ್ಪಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಲಿದ್ದಾರೆ. ಆದ್ರೆ ನಯನ ತಾರಾಳಾ ಸೀರೆ ಸೆಳೆಯುವ ದುಶ್ಯಾನನ ಪಾತ್ರ ಯಾರು ಮಾಡಲಿದ್ದಾರೆ ಅನ್ನೋದು ಇನ್ನು ಪಕ್ಕಾ ಆಗಿಲ್ಲ.. ಇನ್ಮೇಲೆ ದುಶ್ಯಾಸನ ಪಾತ್ರಕ್ಕಾಗಿ ಟ್ರೋಲ್ ನಲ್ಲಿ ಪೈಪೋಟಿ ಶುರುವಾದರೂ ಅಚ್ಚರಿಯಿಲ್ಲ.
ಜ್ಯೋತಿ ಎಂ ಗೌಡ
-Ad-

Leave Your Comments