ನಯನತಾರಾಗೆ ಕೂಡಿಬಂತಾ ಕಂಕಣ ಭಾಗ್ಯ?

ರಿಯಲ್ ಸ್ಟಾರ್ ಉಪೇಂದ್ರ ಜತೆ ‘ಸೂಪರ್’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ನಯನತಾರಾಗೆ ಕಡೆಗೂ ಕಂಗಣಭಾಗ್ಯ ಕೂಡಿಬಂದಿದೆಯಾ? ಕೋಲಿವುಡ್‍ನ ಯುವ ನಿರ್ದೇಶಕರಲ್ಲಿ ಒಬ್ಬರಾಗಿರುವ ವಿಘ್ನೇಶ್ ಶಿವನ್ ಜತೆಗೆ ಕ್ಲೋಸ್ ಆಗಿರುವ ನಯನತಾರಾ ಶೀಘ್ರದಲ್ಲೇ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ಕೋಲಿವುಡ್‌ನಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ವಿಘ್ನೇಶ್ ಶಿವನ್ ಹುಟ್ಟುಹಬ್ಬ ಸಂಭ್ರಮವನ್ನು ಸೆಲೆಬ್ರೇಟ್ ಮಾಡಲು ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದರು ನಯನತಾರಾ. ನ್ಯೂಯಾರ್ಕ್ ಬೀದಿಗಳಲ್ಲಿ ಈ ಜೋಡಿ ಸುತ್ತಾಡುತ್ತಿರುವುದು ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದಕ್ಕೆ ಇನ್ನೊಂದು ಬಲವಾದ ಕಾರಣವಾಗಿದೆ.
ಒಂದು ವೇಳೆ ವಿಘ್ನೇಶ್‌ರನ್ನು ವರಿಸುವ ಪ್ರಶ್ನೆಯೇ ಇಲ್ಲದಿದ್ದರೆ ಅವರು ನ್ಯೂಯಾರ್ಕ್ ತನಕ ಹೋಗುವ ಅಗತ್ಯ ಇರುತ್ತಿರಲಿಲ್ಲ. ಅದರಲ್ಲೂ ಮಾಧ್ಯಮಗಳೊಂದಿಗೆ ತಮ್ಮ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ಉದ್ದೇಶವೂ ಇವರಿಬ್ಬರೂ ಮದುವೆಯಾಗಲಿರುವ ಸೂಚನೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದೇ ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಅಲ್ಲಿಗೆ ಈ ಜೋಡಿ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ತಮಿಳಿನಲ್ಲಿ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದ ‘ನಾನು ರೌಡಿ ಥಾನ್’ ಸಿನಿಮಾದಲ್ಲಿ ನಯನತಾರಾ ಮುಖ್ಯಪಾತ್ರ ಪೋಷಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರಿತ್ತು ಎನ್ನುತ್ತವೆ ಮೂಲಗಳು
-Ad-

Leave Your Comments