ವಿವಾದಗಳಿಂದಲೇ ಸುದ್ದಿಯಾಗಿದ್ದ ನೀರ್ದೋಸೆ ಸಿನಿಮಾ, ತನ್ನ ಶೂಟಿಂಗ್ ಮುಗಿಸಿ ಟೀಸರ್ ಜೊತೆಗೆ ಆಡಿಯೋವನ್ನು ಬಿಡುಗಡೆ ಮಾಡಿದೆ. ಟೀಸರ್ನಲ್ಲಿ ಸಾಕಷ್ಟು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಹರಿಪ್ರಿಯಾ ಅವರನ್ನು ಇತ್ತೀಚಿಗಷ್ಟೇ ಸೆಂಚುರಿ ಸ್ಟಾರ್ ಶಿವಣ್ಣ ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ನೀರ್ ದೋಸೆ ಸಿನಿಮಾದಲ್ಲಿ ಕುಮುದಾ ಎನ್ನುವ ಪಾತ್ರ ನಿರ್ವಹಿಸಿರುವ ಹರಿಪ್ರಿಯಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಶಿವರಾಜ್ಕುಮಾರ್ ಹರಿಪ್ರಿಯಾ ಅವರು ನಿರ್ವಹಿಸಿರುವ ಪಾತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಶಿವಣ್ಣ ಮೆಚ್ಚಿರುವುದು ಹರಿಪ್ರಿಯಾ ಅವರ ಹಾಟ್ ಲುಕ್ಗಾಗಿ ಅಲ್ಲ ಬದಲಿಗೆ ಆ ಸಿನಿಮಾದ ಪಾತ್ರಕ್ಕಾಗಿ.
ಪಾತ್ರದಲ್ಲಿ ಅಷ್ಟೋಂದು ಕಂಟೆಂಟ್ ಇರುವಾಗ ಹರಿಪ್ರಿಯಾ ಅವರ ಹಾಟ್ ಲುಕ್ ಲೆಕ್ಕಕ್ಕೆ ಬರುವುದಿಲ್ಲ ಎಂದಿದ್ದಾರೆ ಶಿವರಾಜ್ಕುಮಾರ್. ಅದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಟ್ರೈಲರ್ ನೋಡಿದ ಮೇಲೆ ಹರಿಪ್ರಿಯಾ ಅವರಿಗೆ ಫ್ಯಾನ್ ಆಗಿರುವ ಶಿವಣ್ಣ ಮೊದಲ ದಿನವೇ ಸಿನಿಮಾ ನೋಡುವುದಾಗಿ ಚಿತ್ರ ತಂಡಕ್ಕೆ ಹೇಳಿದ್ದಾರಂತೆ. ಈ ಮಾತುನ್ನು ಕೇಳಿಸಿಕೊಂಡಿರುವ ಹರಿಪ್ರಿಯಾ ಅವರು ಸಾಕಷ್ಟು ಖುಷಿಯಾಗಿದ್ದಾರೆ.
ಈ ಸಿನಿಮಾ ನಂತರ ಹರಿಪ್ರಿಯಾ ಸಾಕಷ್ಟು ಹೆಸರು ಮಾಡುವ ನಿರೀಕ್ಷೆ ಇದೆ. ಈ ಸಿನಿಮಾ ಮೂವರ ಭವಿಷ್ಯ ಎಂದೇ ಹೇಳಬಹುದು. ನಿರ್ದೇಶಕ ವಿಜಯ್ಪ್ರಕಾಶ್ ಅವರು ಸಾಕಷ್ಟು ಎಡರು ತೊಡರುಗಳ ನಡುವೆ ಸಿನಿಮಾ ಮುಗಿಸಿದ್ದಾರೆ.
ಇನ್ನು ನಾಯಕ ನಟ ಜಗ್ಗೇಶ್ ಅವರಿಗೆ ಅವರ ಸಿನಿ ಪಯಣದಲ್ಲಿ ಒಂದು ವಿಭಿನ್ನ ವಿಶೇಷವಾದ ಪಾತ್ರ ಸಿಕ್ಕಿದೆ. ವೆಶ್ಯೆಯ ಪಾತ್ರವನ್ನು ಒಪ್ಪಿಕೊಳ್ಳು ಮೂಲಕ, ಸಾಕಷ್ಟು ಜನರ ಹುಬ್ಬೇರುವಂತೆ ಮಾಡಿದ್ದ ಹರಿಪ್ರಿಯಾಗೂ ಈ ಸಿನಿಮಾ ಗೆಲ್ಲಲೇ ಬೇಕು.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ನೀರ್ದೋಸೆ ಸಾಕಷ್ಟು ಸದ್ದು ಮಾಡುತ್ತಿದೆ.