ಹೊಸ ನಿರ್ದೇಶಕನಿಗೆ ಮಣೆ ಹಾಕಿದ ಕಿಚ್ಚ ಸುದೀಪ್ !

ಹೊಸ ರೀತಿಯ ಚಿತ್ರಗಳು, ಹೊಸ ನಟ, ನಿರ್ದೇಶಕರನ್ನು ಗುರುತಿಸುವ ಕಿಚ್ಚ ಸುದೀಪ್ ತಮ್ಮ ಅಂಬಿ ಮಾಮನ  “ಅಂಬಿ ನಿಂಗ್ ವಯಸ್ಸಾಯ್ತೋ ” ಚಿತ್ರಕ್ಕೂ ಹೊಸ ನಿರ್ದೇಶಕರನ್ನೇ ಹುಡುಕಿದ್ದಾರೆ . ಕನ್ನಡ ಚಿತ್ರರಂಗದಲ್ಲಿ  ಮೊದಲ ಬಾರಿಗೆ ಟೇಕ್ ಹೇಳಲು ಹೊರಟಿರುವ ಗುರುದತ್ತ ಗಾಣಿಗ ಸುದೀಪ್ ಕೊಟ್ಟ ಜವಾಬ್ದಾರಿಯನ್ನು ಹೊತ್ತಿದ್ದಾರೆ .
ಇದುವರೆಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತವಾಗಿ  ವಿಷಯ ಬಹಿರಂಗವಾಗಿಲ್ಲ.   ಸುದೀಪ್ ಸದ್ಯದಲ್ಲೇ ಸಿನಿಮಾ ಆರಂಭವಾಗುವ ದಿನ ಎಲ್ಲವನ್ನು ತಿಳಿಸಲಿದ್ದಾರೆ.
 ಜಾಕ್ ಮಂಜು ಮೈಸೂರು ಟಾಕೀಸ್ ಅಸೋಸಿಯೇಷನ್ ಮತ್ತು ಕಿಚ್ಚ ಪ್ರೊಡಕ್ಷನ್ ಜೊತೆಗೂಡಿ ನಿರ್ಮಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಗುರು ಗಾಣಿಗೆ ಅವರಿಗೆ ನಿರ್ದೇಶಕನಾಗಿ ಮೊಟ್ಟಮೊದಲ ಸಿನಿಮಾ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವಿದೆ. ಚಿತ್ರ ನಿರ್ಮಾಣದ ಎಲ್ಲ ಹಂತಗಳ ಅರಿವಿರುವ ಸುದೀಪ್ ಜೊತೆ ಕೆಲಸ ಮಾಡುವ ಸವಾಲು ಗುರು ಮೇಲಿದೆ.
ಅಂಬಿ ನಿಂಗ್ ವಯಸ್ಸಾಯ್ತೋ ತಮಿಳಿನಲ್ಲಿ ವೈಶಸ್ಸು ಕಂಡ ಪಂಡಿ ಚಿತ್ರದ ರಿಮೇಕ್. ಸದ್ಯದ ಮಾಹಿತಿ ಪ್ರಕಾರ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಸಿನಿಮಾ ಶುರುವಾಗಲಿದೆ.
.
-Ad-

Leave Your Comments