ನಿಧಿ ಸುಬ್ಬಯ್ಯರನ್ನು ನೋಡಿದರೆ ಶಾಕ್ ಆಗುತ್ತೀರಿ…

ನಿಧಿ ಸುಬ್ಬಯ್ಯ ಅಮೆರಿಕಾ ಡೈರಿ

ಒಂದು ಕಾಲದಲ್ಲಿ ನಿಧಿ ಸುಬ್ಬಯ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ ನಟಿ. ಆಮೇಲಾಮೇಲೆ ಗುಡುಗು ಕಮ್ಮಿಯಾಗಿ ಮಿಂಚೂ ಕಮ್ಮಿಯಾಯಿತು. ನಿಧಿ ತನ್ನ ಅದೃಷ್ಟವನ್ನು ಹುಡುಕುತ್ತಾ ಬಾಲಿವುಡ್ಡಿಗೆ ಹೋದರು. ಬಾಲಿವುಡ್ಡಲ್ಲಿ ಪ್ರತಿಭೆಯನ್ನು ತೋರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕೆ ಶ್ರಮ ಮತ್ತು ತಾಳ್ಮೆ ಅವಶ್ಯ. ನಿಧಿಗೆ ಶ್ರಮ ಪಡುವ ಮತ್ತು ತಾಳ್ಮೆಯಿಂದ ಕಾಯುವ ಮನಸ್ಸಿತ್ತು. ಹಾಗಾಗಿ ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು.

ಸದ್ಯ ಅವರ ಹೊಸ ಸಿನಿಮಾದ ಟ್ರೇಲರ್ ರೆಡಿಯಾಗಿದೆ. ಆ ಸಿನಿಮಾಗ ಹೆಸರು ರಾಬ್ತಾ ಅಂತ. ಸುಶಾಂತ್ ಸಿಂಗ್ ರಜಪೂತ್ ಮತ್ತು ಕೃತಿ ಸನೋನ್ ಮುಖ್ಯ ಪಾತ್ರದಲ್ಲಿರುವ ಈ ಸಿನಿಮಾ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದೆ. ಹಾಗಾಗಿ ಇವತ್ತು ಬಿಡುಗಡೆಯಾದ ಟ್ರೇಲರ್ ಕೂಡ ಸದ್ದು ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ನಿಧಿ ಸುಬ್ಬಯ್ಯ ಎಲ್ಲಿದ್ದಾರೆ ಅನ್ನುವ ಕುತೂಹಲಕಾರಿ ಸಂಗತಿಯೇ.

ಇತ್ತೀಚೆಗೆ ಮದುವೆಯಾಗಿರುವ ನಿಧಿ ಸದ್ಯಕ್ಕೆ ಸಿನಿಮಾ ರಂಗದಿಂದ ಸ್ವಲ್ಪ ದೂರವಾಗಿಯೇ ಇದ್ದಾರೆ. ರಾಜ್ಯ ರಾಜ್ಯ ದೇಶ ದೇಶ ಸುತ್ತುತ್ತಾ ಆರಾಮಾಗಿದ್ದಾರೆ. ಪ್ರಸ್ತುತ ಅವರು ಇರೋದು ಅಮೆರಿಕಾ ಫ್ಲೋರಿಡಾದ ಮಿಯಾಮಿ ಬೀಚಿನ ಆಸುಪಾಸಿನಲ್ಲಿ. ಬೀಚಿನಲ್ಲಿ ಕುಣಿದಾಡುತ್ತಾ, ಸಂಜೆ ಹೊತ್ತು ಪಾರ್ಟಿ ಮಾಡುತ್ತಾ ಹ್ಯಾಪಿಯಾಗಿದ್ದಾರೆ. ಅವರ ಅಮೆರಿಕಾ ಡೈರಿಯ ಫೋಟೋಗಳು ಇಲ್ಲಿವೆ.

ನಿಧಿ ಸುಬ್ಬಯ್ಯ ಫೋಟೋ ೪
ನಿಧಿ ಸುಬ್ಬಯ್ಯ ಫೋಟೋ ೩

ನಿಧಿ ಸುಬ್ಬಯ್ಯ ಫೋಟೋ ೨

 

 

 

-Ad-

Leave Your Comments