ನಿಖಿಲ್ ಗೌಡರಿಗೆ ಸಿಕ್ಕ ಹೊಸ ಹುಡುಗಿ ರಿಯಾ ನಲವಡೆ

ದೊಡ್ಡ ಗೌಡರ ಮೊಮ್ಮಗ ನಿಖಿಲ್ ಗೌಡ ವೀರಾಧಿವೀರನಂತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದನ್ನು ನೋಡಿ ಇಡೀ ನಾಡು ಬೆರಗಾಗಿತ್ತು.ಸಿನಿಮಾ ಮೇಕಿಂಗ್ ನಲ್ಲಿ ಸಕ್ಕತಾಗಿದ್ದರೂ  ನಿರೀಕ್ಷೆಗೆ  ತಕ್ಕ ಯಶಸ್ಸು ಸಿಗಲಿಲ್ಲ. ಹಾಗಂತ ನಿಖಿಲ್ ಬೇಜಾರಾಗಲೂ ಇಲ್ಲ. ಮೊದಲೇ ಎಲ್ಲಕ್ಕೂ ಸಿದ್ಧವಾಗಿದ್ದವರಂತೆ ದೃಢವಾಗಿ ನಿಂತಿದ್ದರು. ಈಗಲೂ ಅಷ್ಟೇ ಅದೇ ಆತ್ಮ ವಿಶ್ವಾಸ. ಅದೇ ನಗು. ಅದೇ ನಡಿಗೆ.
ಮೊದಲಿನ ಸಿನಿಮಾ ಮಾಡುವಾಗ ಇದ್ದ ಉತ್ಸಾಹ , ಎನರ್ಜಿ ಕಳೆದುಕೊಳ್ಳದ  ನಿಖಿಲ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಅನ್ನುವುದು ಈಗಾಗಲೇ ಸುದ್ದಿಯಾಗಿದೆ. ಬಹದ್ದೂರು ಸಿನಿಮಾದ ನಿರ್ದೇಶಕ ಚೇತನ್ ನಿರ್ದೇಶನದ ಸಿನಿಮಾ ಇದು. ಅದಕ್ಕೆ ಲತಾ ಹೆಗ್ಡೆ ಎಂಬ ಸುಂದರಿ ನಾಯಕಿಯಾಗಿ ಆಯ್ಕೆಯಾಗಿದ್ದಳು. ಆದರೆ ಕಾರಣಾಂತರಗಳಿಂದ ಆಕೆ ಸಿನಿಮಾದಿಂದ ಹೊರನಡೆದಿದ್ದಳು. ಈಗ ಆ ಜಾಗಕ್ಕೆ ಮತ್ತೊಬ್ಬ ಚೆಂದದ ಹುಡುಗಿಯ ಆಗಮನವಾಗಿದೆ. ಆಕೆಯ ಹೆಸರು ರಿಯಾ ನಲವಡೆ.
ಅಂತಿಂಥೋಳಲ್ಲ ಈ ರಿಯಾ. ಬೆಂಗಳೂರು ಈಸ್ಟ್ ದೆಹಲಿ ಪಬ್ಲಿಕ್ ಸ್ಕೂಲಿನಲ್ಲಿ ಓದುತ್ತಿರುವ ರಿಯಾ ಟೈಮ್ಸ್ ಫ್ರೆಶ್ ಫೇಸ್ ಬಿರುದಾಂಕಿತೆ. ತೆಳ್ಳಗೆ ಬೆಳ್ಳಗೆ ಮಿಂಚಿನ ಬಳ್ಳಿಯಂತಿರುವ ರಿಯಾ, ನಿಖಿಲ್ ಗೌಡರಿಗೆ ಪರ್ಫೆಕ್ಟ್ ಮ್ಯಾಚ್ ಆಗಬಹುದು . ಒಂದ್ಸಲ ಈ ಹುಡುಗಿಯನ್ನು ನೋಡಿ ಶುಭ ಹಾರೈಸಿ.
-Ad-

Leave Your Comments