ನಿಖಿತಾ ತುಕ್ರಾಲ್ ಹೆಂಗ್ ಡಾನ್ಸ್ ಮಾಡವ್ರೆ ನೋಡಿ

ಜನಪ್ರಿಯ ನಟಿ, ಬಿಗ್ ಬಾಸ್  ಖ್ಯಾತಿಯ ನಿಖಿತಾ ತುಕ್ರಾಲ್ ಮೊದಲಿಂದಲೂ ಕನ್ನಡಿಗರಿಗೆ ಅಚ್ಚುಮೆಚ್ಚು. ತನ್ನ ಅಭಿನಯದಿಂದ, ವಿವಾದ ಮತ್ತು ಅಸ್ಪಷ್ಟ ಕನ್ನಡ ಮಾತಿನಿಂದಾಗಿ ಕನ್ನಡ ನಾಡಲ್ಲಿ ಪ್ರಖ್ಯಾತರಾಗಿರುವ ನಿಖಿತಾ ಇತ್ತೀಚೆಗೆ ಸಿನಿಮಾದಲ್ಲಿ ಕಾಣಿಸಿಕೊಂಡು ಬಹಳ ದಿನಗಳೇ ಕಳೆದಿವೆ. ನಿಕಿತಾ ಎಲ್ಲಿದ್ದಾರೆ ಅಂತ  ಹುಡುಕುವ ಪರಿಸ್ಥಿತಿ ಬಂದಿತ್ತು ಅಭಿಮಾನಿಗಳಿಗೆ. ಆದರೆ ನಿಖಿತಾ ಈಗ ಮತ್ತೆ ಆ್ಯಕ್ಷನ್ ಗೆ ಇಳಿದಿದ್ದಾರೆ. ನೀವು ಈ ವೀಡಿಯೋ ನೋಡಿದರೆ ನಿಮಗೆ ಅಚ್ಚರಿಯಾಗುವುದು ಖಂಡಿತಾ…
ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ರಾಜಾ ಸಿಂಹ. ಅದರ ಚಿತ್ರೀಕರಣ ನಡೆಯುತ್ತಿದೆ. ಆ ಚಿತ್ರದಲ್ಲಿ ನಿಖಿತಾ ತುಕ್ರಾಲ್ ಅವರು ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ಮಾಡಿದ ನೃತ್ಯದ ತುಣುಕು ಇಲ್ಲಿದೆ. ಈ ನೃತ್ಯದ ತುಣುಕನ್ನು ನೋಡಿದರೆ ಅಭಿಮಾನಿಗಳು ಖುಷಿಯಾಗುತ್ತಾರೆ. ಡಾನ್ಸ್ ಪ್ರೇಮಿಗಳು ಆಶ್ಚರ್ಯ ಪಡ್ತಾರೆ.
ಅಂದಹಾಗೆ ಈ ರಾಜಾ ಸಿಂಹ ಸಿನಿಮಾ ನಿರ್ದೇಶನ ರವಿ ರಾಮ್ ನಿರ್ದೇಶಿಸುತ್ತಿದ್ದು, ಸಿಡಿ ಬಸಪ್ಪ ನಿರ್ಮಾಣವಿದೆ. ಕೆಎಂ ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದೆ.
-Ad-

Leave Your Comments