ಪಾರ್ವತಮ್ಮನ ಹಾದಿಯಲ್ಲಿ ಶಿವಣ್ಣನ ಮಗಳು ನಿವೇದಿತಾ

ಅಂಡಮಾನ್ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಬಾರಿ ಅವರು ನಟಿಯಾಗಿ ಪ್ರವೇಶಿಸುತ್ತಿಲ್ಲ. ಬದಲಿಗೆ ನಿರ್ಮಾಪಕಿಯಾಗಿದ್ದಾರೆ.

ಹೌದು ಅಜ್ಜಿ ಪಾರ್ವತಮ್ಮರಂತೆ ನಿರ್ಮಾಪಕಿಯಾಗಲು ನಿವೇದಿತಾ ನಿರ್ಧರಿಸಿದ್ದಾರೆ. ಕಿರುತೆರೆಯ ಮಾನಸ ಸರೋವರ ಎಂಬ ಧಾರಾವಾಹಿಗೆ ನಿರ್ಮಾಪಕಿಯಾಗುವ ಮೂಲಕ ಹೊಸ ಜವಾಬ್ದಾರಿ ಹೊರುತ್ತಿದ್ದಾರೆ. ಅಂದಹಾಗೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ಮಾನಸ ಸರೋವರ ಚಿತ್ರ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಅದೇ ಹೆಸರಿನಲ್ಲಿ ಧಾರಾವಾಹಿ ಬರುತ್ತಿದೆ. ಆ ಚಿತ್ರಕ್ಕೂ ಈ ಧಾರಾವಾಹಿಗೂ ಸಂಬಂಧ ಇದೆ ಎಂದು ಹೇಳಲಾಗುತ್ತಿದೆ.

ಅದು ಹೇಗೆ ಎಂದರೆ, ಮಾನಸ ಸರೋವರ ಚಿತ್ರದಲ್ಲಿ ಅಭಿನಯಿಸಿದ್ದ ಶ್ರೀನಾಥ್, ರಾಮಕೃಷ್ಣ ಹಾಗೂ ಪದ್ಮವಾಸಂತಿ ಅವರು ಈ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು ಆ ಚಿತ್ರದ ಎಲ್ಲಾ ಹಾಡುಗಳು ಧಾರಾವಾಹಿಯುದ್ದಕ್ಕೂ ಮೂಡಿಬರಲಿದೆಯಂತೆ.

-Ad-

Leave Your Comments