ಶುಕ್ರವಾರ ಹೊಸ ಚಿತ್ರ ಏಕಿಲ್ಲ ?

ಕನ್ನಡ ಚಿತ್ರರಂಗ ಈ  ಶುಕ್ರವಾರ ಯಾವುದೇ ಹೊಸ ಚಿತ್ರ ಬಿಡಯಗಡೆ ಮಾಡದಿರಲು ನಿರ್ಧರಿಸಿದೆ.. ಉಪಗ್ರಹ ಆಧಾರಿತ ಚಿತ್ರಪ್ರದರ್ಶನಕ್ಕೆ ದುಬಾರಿ ಶುಲ್ಕ ವಿಚಾರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗ ಮಾರ್ಚ್ 2 ರಿಂದ ಹೋರಾಟಕ್ಕೆ ಇಳಿದಿದ್ದ, ಕನ್ನಡ ಚಿತ್ರರಂಗ ಕೂಡ ಅಧಿಕೃತವಾಗಿ ಶುಕ್ರವಾರದಿಂದ ಬೆಂಬಲ ನೀಡ್ತಿದೆ.. ಉಪಗ್ರಹ ಆಧಾರಿತ ಚಿತ್ರಪ್ರದರ್ಶನ ಮಾಡುವ ಸಂಸ್ಥೆಗಳಾದ ಯು.ಎಫ್.ಓ ಹಾಗೂ ಕ್ಯೂಬ್ ಸಂಸ್ಥೆಗಳಿಗೆ ಹೊಸದಾಗಿ ಕಂಟೆಂಟ್ ಕೊಡುವುದನ್ನ ನಿಲ್ಲಿಸಲಾಗಿದ್ದು, ತೆಲುಗು, ತಮಿಳು, ಮಲಯಾಳಂನ ಯಾವುದೇ ಹೊಸ ಚಿತ್ರ ಬಿಡುಗಡೆಯಾಗುತ್ತಿಲ್ಲ.
ಪ್ರತಿಭಟನೆ ಶುರುವಾದ ಮಾರ್ಚ್ 2 ರಿಂದಲೇ ಸಾಂಕೇತಿಕ ಬೆಂಬಲ ನೀಡಿದ್ದ ಕನ್ನಡ ಚಿತ್ರರಂಗ ಬರುವ ಶುಕ್ರವಾರದಿಂದ ಪೂರ್ಣ ಪ್ರಮಾಣದ ಹೋರಾಟಕ್ಕೆ ಇಳಿಯಲಿದೆ. ಅದಕ್ಕಾಗಿ ಮಾರ್ಚ್ 9 ರಂದು ರಾಜ್ಯದ ಯಾವುದೇ ಚಿತ್ರಮಂದಿರದಲ್ಲೂ ಚಿತ್ರ ಪ್ರದರ್ಶನ ಇರುವುದಿಲ್ಲ. ಶನಿವಾರದಿಂದ ಎಂದಿನಂತೆ ಈಗಾಗಲೇ ಥಿಯೇಟರ್‍ನಲ್ಲಿ ಬಿಡುಗಡೆ ಆಗಿರೋ ಚಿತ್ರಗಳು ಪ್ರದರ್ಶನ ಮುಂದುವರೆಯಲಿದೆ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದು ಹೇಳಿದ್ದಾರೆ.
ಯು.ಎಫ್.ಓ ಹಾಗೂ ಕ್ಯೂಬ್ ಸಂಸ್ಥೆಗಳು ಈಗ ವಿಧಿಸುತ್ತಿರೋ ಶುಲ್ಕ ದುಬಾರಿಯಾಗಿದ್ದು, ಅದರಲ್ಲಿ ಶೇಕಡ 25ರಷ್ಟನ್ನು ಕಡಿಮೆ ಮಾಡಬೇಕು ಎಂದು ದಕ್ಷಿಣ ಭಾರತ ಚಿತ್ರರಂಗ ಬೇಡಿಕೆ ಇಟ್ಟಿದೆ. ಆದ್ರೆ ಈ ಶುಲ್ಕ ಕಡಿಮೆ ಮಾಡುವ ಕುರಿತು ಚಿತ್ರರಂಗ ಹಾಗೂ ಉಪಗ್ರಹ ಆಧಾರಿತ ಚಿತ್ರಪ್ರದರ್ಶನ ಮಾಡುವ ಸಂಸ್ಥೆಗಳ ನಡುವೆ ಇದುವರೆಗೂ ಒಮ್ಮತ ಮೂಡದೇ ಇರುವ ಕಾರಣ  ಅನಿರ್ಧಿಷ್ಟಾವಧಿ ಬಂದ್ ಮುಂದುವರಿಯುತ್ತಿದೆ. ಮುಂದೇ ಚಿತ್ರ ಪ್ರದರ್ಶನ ಎಲ್ಲಿವರೆಗೂ ಬಂದ್ ಆಗಿರುತ್ತೋ ಅಲ್ಲೀವರೆಗೂ ಎರಡೂ ಕಡೆಗೂ ಸಾಕಷ್ಟು ನಷ್ಟವಾಗಲಿದೆ.
-Ad-

Leave Your Comments