ಮಲ್ಟಿಪ್ಲೆಕ್ಸ್ ಮಾಲ್ ಗಳಲ್ಲಿ ತಂಪು ಪಾನೀಯಗಳಿಗೆ ಬ್ರೇಕ್!

ಇನ್ಮುಂದೆ ಮಲ್ಟಿಪ್ಲೆಕ್ಸ್ ಮಾಲ್ ಗಳಲ್ಲಿ  ತಂಪು ಪಾನಿಯಗಳಿಗೆ ಬ್ರೇಕ್ ಬೀಳಲಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕಡ್ಡಾಯ ಎಳೆನೀರು ಮಾರಾಟಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಖಡಕ್ ಆದೇಶ ನೀಡಿದ್ದಾರೆ.
ಮೈಸೂರಿನ ಎಲ್ಲಾ ಮಲ್ಟಿಪ್ಲೆಕ್ಸ್, ಮಾಲ್ ಗಳಲ್ಲಿ ಎಳನೀರು ಮಾರಾಟಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಪರಿಷತ್ ಸದಸ್ಯ ಎಂ.ಕೆ.ಪ್ರಾಣೀಶ್ ತೋಟಗಾರಿಕೆ ಸಚಿವರಿಗೆ ರೈತರ ಹಿತ ದೃಷ್ಟಿಯಿಂದ ರಾಜ್ಯದ ಎಲ್ಲಾ ಮಾಲ್ ಗಳು ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಲ್ ಡ್ರಿಂಕ್ಸ್ ಮಾರಾಟಕ್ಕೆ ಬ್ರೇಕ್ ಹಾಕಿ. ರೈತರ ಉತ್ತೇಜನಕ್ಕೆ ಮಾಲ್ ಗಳಲ್ಲಿ ಎಳನೀರು ಮಾರುವಂತೆ  ಪತ್ರ ಬರೆದಿದ್ದಾರೆ. ಬರದಲ್ಲಿ ತತ್ತರಿಸಿರುವ ರೈತರ ನೆರವಿಗೆ ಧಾವಿಸಲು ತೋಟಗಾರಿಕೆ ಆಯುಕ್ತರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಕ್ಷಣ ರೈತರ ನೆರವಿಗೆ ಧಾವಿಸಿರುವ ಮೈಸೂರು ಜಿಲ್ಲಾಧಿಕಾರಿಗಳು ಮಾಲ್ ಗಳು ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಲ್ ಡ್ರಿಂಕ್ಸ್ ಬದಲಿಗೆ ಎಳನೀರು ಮಾರಾಟ ಮಾಡಲು ಸೂಚನೆ ನೀಡಿದ್ದಾರೆ. ಮೈಸೂರು ಚಲನಚಿತ್ರ ಒಕ್ಕೂಟಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ.

-Ad-

Leave Your Comments