ಇದೇ ತಿಂಗಳ 25ಕ್ಕೆ ‘ಪದ್ಮಾವತ್’

ರಜಪೂತರ ಭಾರೀ ವಿರೋಧದಿಂದ ದೊಡ್ಡ ಸುದ್ದಿಯಾಗಿ ಬಿಡುಗಡೆಯಾಗದೆ ಉಳಿದಿದ್ದ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ  ಚಿತ್ರ ‘ಪದ್ಮಾವತಿ’ ಅಲ್ಲ ‘ಪದ್ಮಾವತ್’ ಇದೇ ತಿಂಗಳ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.  ಚಿತ್ರ ನಿರ್ಮಾಣ ಸಂಸ್ಥೆ ಆಗಿರುವ ವಯಾಕಾಮ್18 ಮೋಷನ್ ಪಿಕ್ಚರ್ಸ್ ಸಂಸ್ಥೆ ಈ ಬಗ್ಗೆ ಮಾಹಿತಿ ಬಹಿರಂಗ ಮಾಡಿದೆ. ‘ಪದ್ಮಾವತ್’ ಅಕ್ಷರಶಃ ಅದ್ಭುತ ಸಿನಿಮಾ, ಅಭಿಮಾನಿಗಳ ನಿರೀಕ್ಷೆ ಮೀರಿ ಚಿತ್ರ ಯಶಸ್ವಿಯಾಗಲಿದೆ. ಸಿನಿಮಾಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ’ ಎಂದಿದೆ.. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದ್ದು, ’ಜಾಗತಿಕ ಐಮ್ಯಾಕ್ಸ್ 3ಡಿ ತಂತ್ರಜ್ಞಾನ ಹೊಂದಿರುವ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ’ ಅಂತಾನು ಸಂಸ್ಥೆ ತಿಳಿಸಿದೆ.
ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾದ ಬಳಿಕ 20ಕ್ಕೂ ಹೆಚ್ಚು ಕತ್ತರಿ ಪ್ರಯೋಗಕ್ಕೆ ಸೂಚಿಸಲಾಗಿದೆ ಅಂತೆಲ್ಲಾ ಮಾಹಿತಿ ಬಂದಿತ್ತು. ಆದ್ರೆ ಕೇವಲ 5 ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ ಅಂತಾ ಚಿತ್ರ ನಿರ್ಮಾಣ ಸಂಸ್ಥೆ ತಿಳಿಸಿದೆ. ಪದ್ಮಾವತ್​​ ಚಿತ್ರಕ್ಕೆ ಸೆನ್ಸಾರ್​ ಬೋರ್ಡ್​ ನಿಂದ ಯು/ಎ ಪ್ರಮಾಣಪತ್ರ ಕೂಡ ಸಿಕ್ಕಿದೆ..  ಮೊದಲು ಪದ್ಮಾವತಿ ಸಿನಿಮಾ ರಜಪೂತ ರಾಜಮನೆತನಕ್ಕೆ ಧಕ್ಕೆ ಉಂಟುಮಾಡಿದೆ ಎಂದು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರಿಂದ ಡಿಸೆಂಬರ್​ 1ರಂದು ರಿಲೀಸ್​ ಆಗಬೇಕಿದ್ದ ದಿನಾಂಕ ಬದಲಾಗಿತ್ತು.. ಪದ್ಮಾವತಿ ಎಂಬ ಟೈಟಲ್​ ಅನ್ನು ಸೆನ್ಸಾರ್​ ಬೋರ್ಡ್​​ನ ನಿರ್ದೇಶನದ ಬಳಿಕ ಪದ್ಮಾವತ್ ಎಂದು ಮರುನಾಮಕರಣ ಆಗಿದೆ. ಆದ್ರೆ ಇಷ್ಟೆಲ್ಲಾ ರಾದ್ಧಾಂತಗಳ ಬಳಿಕವೂ ಚಿತ್ರ ಬಿಡುಗಡೆ ಆಗ್ತಿರೋದ್ರಿಂದ ಸಾಕಷ್ಟು ಕುತೂಹಲ ಹೆಚ್ಚಿಸಿದೆ..
ಚಿತ್ರ ವಿವಾದ ಸ್ವರೂಪ ಪಡೆದುಕೊಂಡಿಡ್ರಿಂದ ನಿರ್ಮಾಣ ಸಂಸ್ಥೆ ವಯಾಡಾಟ್​ 18 ಮೋಷನ್​​ ಪಿಕ್ಷರ್ಸ್​ ಸಂಸ್ಥೆಗೆ ಲಾಭವೇ ಆಗಿದೆ. ಯಾಕಂದ್ರೆ ಒಂದು ಸಿನಿಮಾ ಪ್ರಚಾರಕ್ಕೆ ಬಾಲಿವುಡ್​ ಹಾಲಿವುಡ್​ನಲ್ಲಿ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತೆ. ಆದ್ರೆ ಪದ್ಮಾವತಿ ಚಿತ್ರ ಅಲಿಯಾಸ್​ ಪಸ್ಮಾವತ್​ ಚಿತ್ರ ಯಾವುದೇ ಹಣ ವೆಚ್ಚ ಮಾಡದೆ ವಿಶ್ವಾದ್ಯಂತ ಭರ್ಜರಿ ಪ್ರಚಾರ ಪಡೆದುಕೊಂಡಿದೆ.. ಇದೀಗ ಸಿನಿಮಾ ಬಿಡುಗಡೆ ವೇಳೆ ದೊಡ್ಡ ಮಟ್ಟದಲ್ಲಿ ವೆಚ್ಚ ಮಾಡಬೇಕಿದ್ದ ಪ್ರಚಾರದ ಬಜೆಟ್​​ ಉಳಿತಾಯವಾಗಿದೆ. ಮೂಲಗಳ ಪ್ರಕಾರ 100 ಕೋಟಿಗೂ ಮೀರಿ ಬಂಡವಾಳ ಹೂಡಿಕೆಯಾಗಿದ್ದು, ಪದ್ಮಾವತ್​ ಚಿತ್ರ ಕ್ರಿಯೇಟ್​ ಮಾಡಿರುವ ಕುತೂಹಲದಿಂದಲೇ ಚಿತ್ರ ಗೆಲುವು ಕಾಣಲಿದೆ ಎನ್ನಲಾಗ್ತಿದೆ..
-Ad-

Leave Your Comments