ಲಂಡನ್ ನಲ್ಲಿ ಪದ್ಮಾವತಿ ಬಿಡುಗಡೆ ಆಗಲಿಲ್ಲವೇಕೆ ..?

ರಾಜಸ್ಥಾನದ ರಾಜವಂಶದ ಚಿತ್ರಕಥೆ ಹೊಂದಿರುವ ಬಾಲಿವುಡ್ ನ ಪದ್ಮಾವತಿ ಚಿತ್ರ ಭಾರತದಲ್ಲಿ ಭಾರೀ ವಿವಾದ ಎಬ್ಬಿಸಿಕೊಂಡು ಬಿಡುಗಡೆಯಾಗಲು ತೊಡಕು ಉಂಟಾಗಿದೆ. ಆದ್ರೆ  ಬ್ರಿಟನ್ ಸರ್ಕಾರ  ಪದ್ಮಾವತಿ ಚಿತ್ರ ಯಾವುದೇ ದೃಶ್ಯ ಕಡಿತ ಮಾಡದೆ ಬಿಡುಗಡೆ ಮಾಡಲು ಅಡ್ಡಿಯಿಲ್ಲ ಎಂದಿತ್ತು. ಅಲ್ಲಿನ ಸೆನ್ಸಾರ್ ಬೋರ್ಡ್ ಕೂಡ ಪದ್ಮಾವತಿಯನ್ನು ನೋಡಿ, ಶಹಬ್ಬಾಸ್ ಗಿರಿ ಕೊಟ್ಟಿತ್ತು. ಆದರೂ ಚಿತ್ರ ನಿಮಾಣ ಸಂಸ್ಥೆ ಮಾತ್ರ ಸಿನಿಮಾ ಬಿಡುಗಡೆ ಮಾಡುವ ಧೈರ್ಯ ತೋರಿಸಲಿಲ್ಲ.
ಕಾರಣ ಏನು ?
ಹೌದು ಒಂದು ಸಿನಿಮಾಗೆ ಒಂದು ಪ್ರಾಂತ್ಯದ ವಿರೋಧ ವ್ಯಕ್ತವಾದರೆ ಮತ್ತೊಂದು ಕಡೆ ಬಿಡುಗಡೆಯಾಗುತ್ತದೆ. ಆ ಮೂಲಕವಾದರೂ ಹಾಕಿರುವ ಬಂಡವಾಳ ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ಪದ್ಮಾವತಿ ಚಿತ್ರತಂಡ ಮಾತ್ರ ಆ ನಿರ್ಧಾರಕ್ಕೆ ಬಾರದೆ ಸಿನಿಮಾ ಬಿಡುಗಡೆ ದಿನಾಂಕವನ್ನೇ ಮುಂದೂಡಿಕೆ ಮಾಡಿದೆ. ಯಾಕಂದ್ರೆ ಇಂಡಿಯಾಸ್ ಡಾಟರ್ ಹೆಸರಲ್ಲಿ ನಿರ್ಮಾಣವಾಗಿದ್ದ ನಿರ್ಭಯಾ ಕುರಿತ ಸಾಕ್ಷ್ಯಚಿತ್ರ ಚಿತ್ರ ಕೂಡ ಇದೇ ರೀತಿಯ ವಿರೋಧ ಎದುರಿಸಿತ್ತು. ಆ ಬಳಿಕ ಲಂಡನ್ ನಲ್ಲೇ ಬಿಡುಗಡೆಯೂ ಆಯ್ತು. ಆದರೆ ಕೆಲವೇ ಗಂಟೆಗಳಲ್ಲಿ ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು. ಇದರಿಂದ ಭಾರತದಲ್ಲಿ ಬಿಡುಗಡೆ ಮಾಡುವ ಪ್ರಮೇಯವೇ ಬರಲಿಲ್ಲ. ಪದ್ಮಾವತಿ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲಾಗಿದ್ದು, ಲಂಡನ್ ನಲ್ಲಿ ಬಿಡುಗಡೆಯಾದ ಮಾತ್ರಕ್ಕೆ ಬಂಡವಾಳ ವಾಪಸ್ ಬರುವುದಿಲ್ಲ. ಸಿನಿಮಾ  ಲೀಕ್ ಆದ್ರೆ ಹಾಕಿದ ಬಂಡವಾಳಕ್ಕೆ ಖೋತಾ ಆಗೋದಂತೂ ಗ್ಯಾರಂಟಿ.
ಅಷ್ಟಕ್ಕೂ ಪದ್ಮಾವತಿ ನಿರ್ಮಾಪಕರು ಯಾರು..?
ವಯಾ ಕಾಮ್ 18 ಮೋಷನ್ ಫಿಲ್ಮ್ಸ್ ಪದ್ಮಾವತಿ ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಅಷ್ಟಕ್ಕೂ ವಯಾ ಕಾಮ್ 18 ಸಂಸ್ಥೆ ನ್ಯೂಸ್ 18 ಸಂಸ್ಥೆಯ ಪಾಲುದಾರ ಸಂಸ್ಥೆ ಅಂದರೆ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರ ಒಡೆತನದ ಕಂಪನಿ ಅನ್ನೋದು ನಿಚ್ಚಳ ಆದಂತಾಯ್ತು. ದೇಶದ ಉದ್ಯಮ ವಲಯದಲ್ಲಿ ಎರಡು ಕಣ್ಣುಗಳಂತೆ ಇರುವ ಅಂಬಾನಿ, ಅದಾನಿ ಸಂಸ್ಥೆಗಳಿಗೆ ನಷ್ಟ ಉಂಟು ಮಾಡುತ್ತಾರೆಯೇ ಎಂದರೆ ಖಂಡಿತ ಇಲ್ಲ ಅನ್ನುವ ಮಾತೇ ಬರುತ್ತದೆ. ಹಾಗಾದರೆ ಈ ವಿವಾದ ಯಾಕೆ..? ಅನ್ನೋದು ಶ್ರೀ ಸಾಮಾನ್ಯನಲ್ಲಿ ಉದ್ಬವಿಸುವ ವಿಚಾರ. ಅದಕ್ಕೆ ಉತ್ತರ ಗುಜರಾತ್ ಚುನಾವಣೆ. ಚುನಾವಣೆ ಬಳಿಕ ತನ್ನಿಂದ ತಾನೇ ವಿವಾದ ಅಂತ್ಯವಾಗಿ ಚಿತ್ರವೂ ಬಿಡುಗಡೆ ಆಗಲಿದೆ. ಇದರಿಂದ ಚಿತ್ರತಂಡಕ್ಕೂ ಲಾಭ. ವಿರೋಧಿಸುವವರಿಗೂ ಲಾಭ ಆಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ .
-ಜ್ಯೋತಿ
-Ad-

Leave Your Comments