ಮುಂದೆ ಹೋದಳಾ ಪದ್ಮಾವತಿ !?

ಬಾಲಿವುಡ್​ನ ಬಹು ವಿವಾದಿತ ಸಿನಿಮಾ ಪದ್ಮಾವತಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿದೆ..  ಈ ಮೊದಲು ಡಿಸೆಂಬರ್​ 1ರಂದು ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದ್ರೆ ಚಿತ್ರದಲ್ಲಿ ರಜಪೂತ ರಾಜಮನೆತನ ರಾಣಿ ಪದ್ಮಾವತಿ ಬಗ್ಗೆ ಕೀಳು ಮಟ್ಟದಲ್ಲಿ ತೋರಿಸಲಾಗಿದೆ ಅನ್ನೋ ಕಾರಣಕ್ಕೆ  ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ಮಾಡಲಾಗಿತ್ತು

ರಜಪೂತ ಸಂಘಟನೆ ಕರ್ಣಿ ಸೇನಾ ಸಮಿತಿ ಕೂಡ ವಿರೋಧ ವ್ಯಕ್ತಪಡಿಸಿತ್ತು.. ಜೊತೆಗೆ ರಾಮಾಯಣದ ಶೂರ್ಪನಖಿಗೆ ಲಕ್ಷ್ಮಣ ಮೂಗು ಕತ್ತರಿಸಿದ ಹಾಗೆ ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಟೆ ಮೂಗು ಕತ್ತರಿಸಲಾಗುವುದು ಎಂದಿತ್ತು.ನಂತರ  ದೀಪಿಕಾ ತಲೆ ಕತ್ತರಿಸಿದರೆ 5 ಕೋಟಿ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು.. ಸೆನ್ಸಾರ್​ ಮಂಡಳಿ ಕೂಡ ಸೆನ್ಸಾರ್ ಸರ್ಟಿಫಿಕೇಟ್ ಸಿಗುವ ಮುನ್ನವೇ ಮಾಧ್ಯಮದ ಕೆಲಮಂದಿಗೆ ಚಿತ್ರವನ್ನು ತೋರಿಸಿರುವ  ವಿಚಾರದಲ್ಲಿ ಚಾಟಿ ಬೀಸಿತ್ತು.

ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೆ ಕೂಡ ಚಿತ್ರ ವಿವಾದದ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡ್ಬೇಕು ಪತ್ರ ಬರೆದು ಆಗ್ರಹಿಸಿದ್ರು.. ಅದಾದ ಬಳಿಕ ಸಂಜಯ್​​ ಲಾಲ್​ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.. ಮುಂದಿನ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡ್ತೀವಿ ಎಂದು ಹೇಳಿಕೊಂಡಿದೆ.. ಈ ಚಿತ್ರದಲ್ಲಿ ರಾಣಿ ಪದ್ಮಾವತಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಇದ್ರೆ, ರಾಜ ರಾವಲ್​ ರತನ್​ ಸಿಂಗ್​ ಪಾತ್ರದಲ್ಲಿ ಶಾಹಿದ್​ ಕಪೂರ್​ ಕಾಣಿಸಿಕೊಂಡಿದ್ದಾರೆ. ದೆಹಲಿ ಸುಲ್ತಾನನ ಪಾತ್ರದಲ್ಲಿ ರಣವೀರ್​ ಸಿಂಗ್​ ಅಭಿನಯಿಸಿದ್ದಾರೆ.

-Ad-

Leave Your Comments