ಕಲರ್ಸ್‍ ಕನ್ನಡದಲ್ಲಿ ಫೆಬ್ರವರಿ 6ಕ್ಕೆ “ಪದ್ಮಾವತಿ” ಪುರ ಪ್ರವೇಶ !!

ಮನರಂಜನೆಯ ವಿಷಯ ಬಂದರೆ ಕನ್ನಡದ ಅಪ್ರತಿಮ ಮನೋರಂಜನಾ ಚಾನೆಲ್ ಕಲರ್ಸ್‍ಕನ್ನಡ ವೀಕ್ಷಕರನ್ನು ಯಾವತ್ತೂ ನಿರಾಸೆ ಮಾಡಿಲ್ಲ. ಬಿಗ್‍ಬಾಸ್‍ನಂತಹ ಬೃಹತ್‍ ರಿಯಾಲಿಟಿ ಶೋ ಬೆನ್ನಲ್ಲೇ `ರಾಧಾರಮಣ’ ಆರಂಭವಾಯಿತು. ಇದರ ಸೊಬಗನ್ನು ವೀಕ್ಷಕರು ಸವಿಯುತ್ತಿರುವಾಗಲೇ ಕಲರ್ಸ್‍ ಕನ್ನಡ ಇದೀಗ `ಪದ್ಮಾವತಿ’ ಎಂಬ ಇನ್ನೊಂದು ಹೊಸ ಕತೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಹೊಸ ಧಾರಾವಾಹಿ ಫೆಬ್ರವರಿ 6ರಿಂದ ರಾತ್ರಿ9:30ಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

`ಪದ್ಮಾವತಿ’ ಧಾರಾವಾಹಿಯು ತುಳಸಿ ಮತ್ತು ಸಾಮ್ರಾಟನ ಸುತ್ತ ಸಾಗುವ ಕತೆ. ಕಥಾನಾಯಕಿ ತುಳಸಿ ಹಳ್ಳಿಯಲ್ಲಿ ಬೆಳೆದ ಮುಗ್ದಮನಸ್ಸಿನ ಸ್ಪುರದ್ರೂಪಿ ಹುಡುಗಿ. ಇಷ್ಟದೇವತೆ ಪದ್ಮಾವತಿಯೊಡನೆ ಅವಿನಾಭಾವ ಸಂಬಂಧ ಹೊಂದಿದತರುಣಿ. ಕಥಾನಾಯಕ ಸಾಮ್ರಾಟ ಒಬ್ಬ ಸೂಪರ್ ಸ್ಟಾರ್, ಹೃದಯವಂತ. ತನ್ನಕುಟುಂಬವನ್ನು ಪ್ರೀತಿಸುವಜವಾಬ್ದಾರಿಯ ಹುಡುಗ. ಆದರೆ ನಾಸ್ತಿಕ. ಈ ಆಸ್ತಿಕ ಮತ್ತು ನಾಸ್ತಿಕರ ಮಧ್ಯೆ ಬೆಳೆಯುವ ಸಂಬಂಧದಕತೆ ಪದ್ಮಾವತಿ.

parameshwar gundkalಕಲರ್ಸ್‍ಕನ್ನಡ ಹಾಗೂ ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರಗುಂಡ್ಕಲ್ ಹೇಳುವಂತೆ, “ನಮ್ಮ ವಾಹಿನಿಯು ಸಾಕಷ್ಟು ಹೊಸ ಕತೆಗಳನ್ನು ವೀಕ್ಷಕರಿಗೆ ಮನ ಮುಟ್ಟುವಂತೆ ತಲುಪಿಸಿದೆ. ಜನ್ಮಜನ್ಮಾಂತರದ ಸಂಬಂಧಗಳಲ್ಲಿ ನಂಬಿಕೆ ಇಡುವ, ದೇವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮುಗ್ದಮನಸ್ಸಿನ ತುಳಸಿಯ ಕತೆ `ಪದ್ಮಾವತಿ’. ನಾವು ಇಲ್ಲಿಯವರೆಗೂ ನೀಡದ ರೀತಿಯ ಫ್ರೆಶ್‍ಕತೆಇದು. ಬಿಗ್‍ಬಾಸ್ ನಂತರ ಪ್ರೈಮ್‍ಟೈಮ್‍ನಲ್ಲಿ ಪ್ರಸಾರ ಮಾಡುವ `ಪದ್ಮಾವತಿ’ ಧಾರಾವಾಹಿಯನ್ನು ನಮ್ಮ ವೀಕ್ಷಕರು ಸ್ವೀಕರಿಸುತ್ತಾರೆ ಎಂಬುದು ನಮ್ಮ ನಂಬಿಕೆ.”

ವಾಹಿನಿಯ ಫಿಕ್ಷನ್ ಹೆಡ್ ಹಾರೀಸ್‍ ಅಭಿಪ್ರಾಯದಂತೆ, “ಕೆಲವು ಕತೆಗಳು ಸಾರ್ವಕಾಲಿಕ. ಉದಾಹರಣೆಗೆ ದೇವರ ಮೇಲಿನ ಭಕ್ತಿ, ಮದುವೆ ಮುಂತಾದ ಕತೆಗಳನ್ನು ಎಷ್ಟು ನೋಡಿದರೂ ಸಾಕಾಗುವುದಿಲ್ಲ. `ಪದ್ಮಾವತಿ’ ಅಂತಹ ಒಂದು ಸಾರ್ವಕಾಲಿಕ ಕತೆ. ಈ ಕತೆ ಸಿದ್ಧಪಡಿಸುವಾಗ ಮತ್ತು ಕತೆಯನ್ನು ಧಾರಾವಾಹಿಯನ್ನಾಗಿ ಮಾಡುವಾಗ ಕಲರ್ಸ್‍ ಕನ್ನಡದ ನಮ್ಮತಂಡ ಬಹಳ ಖುಷಿಪಟ್ಟಿದೆ. ನೋಡುವಾಗ ವೀಕ್ಷಕರು ಕೂಡಾ ಅಷ್ಟೇ ಖುಷಿಪಡುತ್ತಾರೆ ಎಂಬ ವಿಶ್ವಾಸ ನಮ್ಮದು.”
ಧಾರಾವಾಹಿಯೊಳಗೆ ಏನೇನಿದೆ ?

padmavathi serialಪದ್ಮಾವತಿ ದೇವಿಯ ಪರಮ ಭಕ್ತೆಯಾದ ತುಳಸಿ ತನ್ನ ಜೀವನದ ಪ್ರತಿಯೊಂದು ಹೆಜ್ಜೆಗೂ ದೇವಿಯ ಒಪ್ಪಿಗೆ ಬೇಡುವವಳು. ಇದು ಅವಳ ಮದುವೆಯ ವಿಷಯಕ್ಕೂ ಹೊರತಾಗಿಲ್ಲ. ಅವಳನ್ನು ನೋಡಲು ಸಾಕಷ್ಟು ಹುಡುಗರು ಬಂದು ಹೋದರೂ ಅದಕ್ಕೆ ಪದ್ಮಾವತಿಯಿಂದ ಒಪ್ಪಿಗೆ ದೊರೆಯದ ಕಾರಣ ತುಳಸಿಯ ಮದುವೆ ಒಂದು ಸವಾಲಾಗುತ್ತದೆ. ದೇವರನ್ನೇ ನಂಬುವ ಸಂಪ್ರದಾಯಸ್ಥ ಮನೆತನದ ಹುಡುಗಿ ತುಳಸಿ ಮತ್ತು ಸೂಪರ್ ಸ್ಟಾರ್‍ ಆಗಿರುವ ನಾಸ್ತಿಕ ಸಾಮ್ರಾಟ್ ಭೇಟಿಯಾಗುತ್ತಾರಾ? ಈ ವೈರುಧ್ಯ ಮನಸುಗಳ ಮಧ್ಯೆ ಸಂಬಂಧ ಬೆಳೆಯುತ್ತದೆಯೇ? ತುಳಸಿ-ಸಾಮ್ರಾಟ್ ಸಂಬಂಧಕ್ಕೆ ಪದ್ಮಾವತಿದೇವಿಯ ಒಪ್ಪಿಗೆ ಇದೆಯೇ? ತುಳಸಿಯ ಜೀವನಕ್ಕೆ ಆರಾಧ್ಯದೇವತೆ ಪದ್ಮಾವತಿ ಹೇಗೆ ದಾರಿ ದೀಪವಾಗುತ್ತಾಳೆ ಎಂಬುದರ ಸುತ್ತ ಹೆಣೆದಿರುವಕತೆ ಪದ್ಮಾವತಿ.

ಕಲರ್ಸ್‍ ಕನ್ನಡ ವಾಹಿನಿಯ ಕುಲವಧು, ಪುಟ್ಟಗೌರಿ ಮದುವೆ, ಕಿನ್ನರಿ, ಅಗ್ನಿಸಾಕ್ಷಿ, ಅಕ್ಕ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಗಾಂಧರಿ, ಮನೆದೇವ್ರು, ಮಜಾಟಾಕೀಸ್, ಬಿಗ್‍ಬಾಸ್, ಸೂಪರ್ ಮಿನಿಟ್, ಅಶ್ವಿನಿ ನಕ್ಷತ್ರ, ಚರಣದಾಸಿ, ಯಶೋಧೆ ಮೊದಲಾದ ಜನಪ್ರಿಯ ಕಾರ್ಯಕ್ರಮಗಳ ಸಾಲಿಗೆ ‘ಪದ್ಮಾವತಿ’ ಹೊಸದಾಗಿ ಸೇರ್ಪಡೆಯಾಗಲಿದೆ.

ಕಲಾವಿದರ ಬಳಗ:
ದೀಪ್ತಿ, ತ್ರಿವಿಕ್ರಮ, ಜಯಂತಿಅಮ್ಮ, ಚಿತ್ರ ಶೆಣೈ, ಅಶೋಕ್‍ಜಂಬೆ, ಅರುಣ್ ಬಾಲರಾಜ ಮೊದಲಾದವರು

ತಾಂತ್ರಿಕವರ್ಗ:-
ಕತೆ : ಕಲರ್ಸ್‍ಕನ್ನಡ ಫಿಕ್ಷನ್‍ತಂಡ;
ಲೇಖಕರು : ಮಂಜುನಾಥ್ ಭಟ್
ನಿರ್ಮಾಣ: ಸಾಯಿ ನಿರ್ಮಲಾ ಪ್ರೊಡಕ್ಷನ್
ನಿರ್ದೇಶಕರು: ನಿರ್ಮಲಾಚನ್ನಪ್ಪ ಮತ್ತುತಂಡ;
ಛಾಯಾಚಿತ್ರಗ್ರಾಹಕ: ಸತ್ಯ/ಸೃಜನ್/ನಟರಾಜ್ ಮದ್ದಲ/ವಿಷ್ಣು/ರವಿ ಕಿಶೋರ್
ಸಂಕಲನ: ರಾಕೆಶ್‍ಅರೂರ್/ಕೃಷ್ಣ
ಪ್ರೊಡಕ್ಷನ್ ಮ್ಯಾನೆಜರ್: ಅನಿಲ್
ಸಾಹಿತ್ಯ: ಜೋಗಿ/ ನಾಗೇಂದ್ರ  ಪ್ರಸಾದ್
ಸಂಗೀತ: ಪೂರ್ಣಚಂದ್ರ ತೇಜಸ್ವಿ/ ಎ.ಪಿ.ಅರ್ಜುನ್/ವೈಭವ್
ಹಾಡಿದವರು: ನವೀನ್

ಕಾರ್ಯಕ್ರಮ: ಪದ್ಮಾವತಿ
ಪ್ರಸಾರ ದಿನ: ಫೆಬ್ರವರಿ 6
ಪ್ರಸಾರ ಸಮಯ: ಸಂಜೆ 9:30 ಗಂಟೆಗೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ

-Ad-

Leave Your Comments