ಪದ್ಮಾವತಿಗೆ ಗ್ರೀನ್ ಸಿಗ್ನಲ್!

ದೇಶದಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಅಭಿನಯನದ ಚಿತ್ರ ಪದ್ಮಾವತಿ ಬಿಡುಗಡೆಗೆ ಸಂನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಚಿತ್ರದಲ್ಲಿ 26 ದೃಷ್ಯಗಳಿಗೆ ಕತ್ತರಿ ಪ್ರಯೋಗಿಸಿ ಚಿತ್ರದ ಹೆಸರನ್ನು ಪದ್ಮಾವತಿಯಿಂದ ಪದ್ಮಾವತ್ ಎಂದು ಬದಲಿಸಿಕೊಂಡ್ರೆ ಮಾತ್ರ!

ಚಿತ್ರದಲ್ಲಿ ಈ ಬದಲಾವಣೆ ಮಾಡಿದ ನಂತರ ಯು/ಎ ಪ್ರಮಾಣ ಪತ್ರ ನೀಡುವುದಾಗಿ ಸೆನ್ಸಾರ್ ಮಂಡಳಿ ತಿಳಿಸಿದೆ. ರಜಪೂತರ ರಾಣಿ ಪದ್ಮಾವತಿ ಮೇಲಿನ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಂಜಯ್ ಲೀಲಾ ಬನ್ಸಾಲಿ ಅವರು ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಿ ರಾಣಿ ಪದ್ಮಾವತಿ ಘನತೆಗೆ ಚ್ಯುತಿ ತರಲಾಗಿದೆ ಎಂದು ಆರೋಪಿಸಿ ರಜಪೂತ ಸಂಘಟನೆಗಳು ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ ದೀಪಿಕಾ ಪಡುಕೋಣೆ ಅವರ ತಲೆ ಕಡಿದರೆ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಹೀಗಾಗಿ ಈ ಚಿತ್ರದ ವಿವಾದ ತೀವ್ರ ಮಟ್ಟಕ್ಕೆ ತಲುಪಿತ್ತು.

ಚಿತ್ರ ನಿರ್ಮಾಪಕರು ಹಾಗೂ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ವಿಶೇಷ ಸಮಿತಿಯನ್ನೇ ರಚಿಸಲಾಗಿತ್ತು. ಈ ಸಮಿತಿ ಚಿತ್ರವನ್ನು ವೀಕ್ಷಿಸಿ ಒಟ್ಟು 26 ದೃಷ್ಯಗಳಿಗೆ ಕತ್ತರಿ ಹಾಕಿ ಹಾಗೂ ಚಿತ್ರದ ಹೆಸರನ್ನು ಪದ್ಮಾವತ್ ಎಂದು ಬದಲಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಸೆನ್ಸಾರ್ ಮಂಡಳಿಯ ಈ ಸಲಹೆಗೆ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿಗಳು ಬಂದಿದ್ದು, ಶೀಘ್ರದಲ್ಲೇ ಪದ್ಮಾವತಿ ಚಿತ್ರ ತೆರೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.

-Ad-

Leave Your Comments