ಆತಂಕದಲ್ಲಿ ‘ರಾಜ್’ ಕುಟುಂಬ

ಅನಾರೋಗ್ಯದಿಂದ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಮಧುಮೇಹ, ರಕ್ತದೊತ್ತಡ ಜತೆಗೆ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಡುತ್ತಿದೆ, ಹಾಗು ವೆಂಟಿಲೇಟರ್ ಸಪೋರ್ಟ್ ನಲ್ಲಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ.

ಶಿವರಾಜ್ ಕುಮಾರ್ ದಂಪತಿ ಮತ್ತು ಪುತ್ರಿ ನಿರುಪಮಾ ದಿಲೀಪ್ ಹಾಗೂ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ಬಂದಿದ್ದು, ರಾಜ್ ಕುಮಾರ್ ಕುಟುಂಬದಲ್ಲಿ ಆತಂಕ ಮಡುಗಟ್ಟಿದೆ.

ಪಾರ್ವತಮ್ಮ ರಾಜ್ ಕುಮಾರ್ ಅವರ ಮನೆ ಹಾಗೂ ಎಂ.ಎಸ್ ರಾಮಯ್ಯ ಆಸ್ಪತ್ರೆ ಬಳಿ ಮಾಧ್ಯಮ ಪ್ರತಿನಿಧಿಗಳು ಜಮಾಯಿಸಿದ್ದಾರೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಆಸ್ಪತ್ರೆಗೆ ಭೇಟಿ ಕೊಟ್ಟು ಪಾರ್ವತಮ್ಮನವರ ಆರೋಗ್ಯ ವಿಚಾರಿಸಿದ್ದರು. ಈ ಬಗ್ಗೆ ಸಿನಿಅಡ್ಡ ತಂಡ ಸಹ, ಪಾರ್ವತಮ್ಮ ರಾಜ್ ಕುಮಾರ್ ಗುಣಮುಖರಾಗಲಿ ಎಂದು ಹಾರೈಸಿ ಲೇಖನ ಪ್ರಕಟಿಸಿತ್ತು.

ಹೆಚ್ಚು ಕಾಲ ಶಾಲೆಯ ಮುಖ ನೋಡದಿದ್ದರೂ ಬದುಕೆಂಬ ಪಾಠಶಾಲೆಯಲ್ಲಿ ಪಳಗಿ ಪರಿಣತಿ ಪಡೆದು ವಜ್ರೇಶ್ವರಿಯಾಗಿ ದಶಕಗಳ ಕಾಲ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ್ದರು ಪಾರ್ವತಮ್ಮನವರು. ತೀವ್ರ ಅನಾರೋಗ್ಯದಿಂದಾಗಿ ಅಣ್ಣಾವ್ರ ಹುಟ್ಟಿದ ಹಬ್ಬದಂದು ಕೊಡಮಾಡಿದ  ಪ್ರಶಸ್ತಿ ಸಮಾರಂಭಕ್ಕೂ ಬಂದಿರಲಿಲ್ಲ. ಸಮಾಧಿ ಇರುವ ರಾಜಕುಮಾರ್ ಸ್ಮಾರಕಕ್ಕೆ ಎಂದಿನಂತೆ ಬಂದು ಪೂಜೆ ಸಲ್ಲಿಸುವುದೂ ಸಾಧ್ಯವಾಗಿರಲಿಲ್ಲ.

-Ad-

Leave Your Comments