ಅಮ್ಮನ ಮೂರನೇ ದಿನದ ಕಾರ್ಯ ಮಾಡಿದ ರಾಜ್ ಕುಟುಂಬ

ಡಾ.ಪಾರ್ವತಮ್ಮ ರಾಜ್‍ಕುಮಾರ್ ಅವರ ನಿಧನದ ನಂತರ ಇಂದು ಮೂರನೇ ದಿನದ ವಿಧಿವಿಧಾನಗಳನ್ನು ಡಾ.ರಾಜ್ ಪುತ್ರರು, ಕುಟುಂಬಸ್ಥರು ಹಾಗೂ ಸಂಬಂಧಿಕರು ನೆರವೇರಿಸಿದ್ದಾರೆ.

ಶುಕ್ರವಾರ ಕಂಠೀರವ ಸ್ಟುಡಿಯೋದಲ್ಲಿರುವ ಪಾರ್ವತಮ್ಮನವರ ಸಮಾಧಿ ಬಳಿಗೆ ಕುಟುಂಬ ಸಮೇತರಾಗಿ ತೆರಳಿದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಬಂಧು ಮಿತ್ರರು ಹಾಲು ತುಪ್ಪ ಬಿಟ್ಟು ಸಾಂಪ್ರದಾಯಿಕ ಕಾರ್ಯ ನೆರವೇರಿಸಿದರು.

-Ad-

Leave Your Comments