ದಿಢೀರ್ ಅಂತಾ ಬದಲಾಯ್ತು ಪ್ಲಾನ್.. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ..

ಪಾರ್ವತಮ್ಮ ರಾಜ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನ ಸದಾಶಿವ ನಗರದ ಪೂರ್ಣಪ್ರಜ್ಞ ಶಾಲಾ ಆವರಣದಲ್ಲಿ ಸಾರ್ವಜನಿಕರು ದರ್ಶನ ಮಾಡಬಹುದು ಎಂತಾ ಈ ಮೊದಲು ತಿಳಿಸಲಾಗಿತ್ತು.. ಇದೀಗ ಏಕಾಏಕಿ ನಿರ್ಧಾರ ಬದಲಾವಣೆ ಮಾಡಿದ್ದು, ಅಂತಿಮ ದರ್ಶನದ ನಿರ್ಧಾರ ಕೈಬಿಡಲಾಗಿದೆ..
ಸದಾಶಿವನಗರ ನಿವಾಸದಲ್ಲೇ ಅಂತಿಮ ದರ್ಶನ
ಪೂರ್ಣಪ್ರಜ್ಞ ಶಾಲಾ ಆವರಣಕ್ಕೆ ಬೆಳಗ್ಗೆ ೧೦ ಗಂಟೆಗೆ ಕೊಂಡೊಯ್ಯಲಾಗುವುದು ಅಂತಾ ಈ ಮೊದಲು ಹೇಳಿದ್ದರು. ಆದ್ರೆ ಇದೀಗ ನಿರ್ಧಾರ ಬದಲಾವಣೆ ಮಾಡಲಾಗಿದ್ದು, ಸದಾಶಿವನಗರದ ನಿವಾಸದಲ್ಲೇ ಸಾರ್ವಜನಿಕರ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ ಅಂತಾ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕುಟುಂಬಸ್ಥರ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ ಅಂತಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.. ಸಂಜೆ ೪ ಗಂಟೆ ಬಳಿಕ ಮನೆಯಿಂದಲೇ ನೇರವಾಗಿ ಕಂಠೀರವ ಸ್ಟೂಡಿಯೋಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು  ಎಂದು ತಿಳಿಸಿದ್ದಾರೆ.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ..!
ಕನ್ನಡ ಚಿತ್ರೋದ್ಯಮದ ಹಲವು ನಟ ನಟಿಯರು ಪಾರ್ವತಮ್ಮ ರಾಜ್ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಕಲ  ಸರ್ಕಾರಿ ಗೌರವಗಳೊಂದಿಗೆ  ಕಂಠೀರವ ಸ್ಟೂಡಿಯೋದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಅಂತಾ ತಿಳಿಸಿದ್ದಾರೆ.
-Ad-

Leave Your Comments