ಪಾರ್ವತಮ್ಮ ವಿಧಿ ವಿಧಾನ ಹೇಗೆ ನಡೀತು..?

ಅಪ್ಪಾಜಿ ಅವರಿಗೆ ಅಮ್ಮನ ಆಸರೆ ಬೇಕು ಅಂತ ಅನ್ನಿಸಿರಬೇಕು.. ಹಾಗಾಗಿ  ಅಮ್ಮನನ್ನು ಅಪ್ಪಾಜಿಯವರೇ ಕರೆಸಿಕೊಂಡಿದ್ದಾರೆ. ಅವರನ್ನು ಕಳೆದುಕೊಂಡು ಅತೀವ ದುಃಖವಾಗಿದೆ  ಅಂತಾ ಡಾ ರಾಜ್‌ಕುಮಾರ್- ಪಾರ್ವತಮ್ಮ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಭಾವುಕರಾದ್ರು.

ಮಧ್ಯಾಹ್ನ ೩.೩೦ರ ತನಕ ಸದಾಶಿವನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸದಿಂದ ಕಂಠೀರವ ಸ್ಟುಡಿಯೋ ತನಕ ಹೂವಿನಿಂದ ಅಲಂಕಾರ ಮಾಡಿದ್ದ ವಾಹನದಲ್ಲಿ  ಮೆರವಣಿಗೆ ಮಾಡಲಾಯ್ತು. ರಸ್ತೆಯುದ್ದಕ್ಕೂ ನೆರೆದಿದ್ದ ಜನಸ್ತೋಮ  ಪಾರ್ವತಮ್ಮನವರ ಅಂತಿಮ ದರ್ಶನ ಪಡೆದ್ರು.

ಸಂಜೆ ೫ ಗಂಟೆ ವೇಳೆಗೆ ಕಂಠೀರವ ಸ್ಟುಡಿಯೋ ತಲುಪಿದ ಬಳಿಕ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಪಾರ್ವತಮ್ಮ ಅವರ ಅಂತ್ಯಕ್ರಿಯೆ ಮಾಡಲಾಯ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಕುಶಾಲುತೋಪು ಸಿಡಿಸಿ ರಾಜ್ ಪತ್ನಿಗೆ ಸರ್ಕಾರದ ವತಿಯಿಂದಲೂ ಅಂತಿಮ ನಮನ ಸಲ್ಲಿಸಿದ್ರು. ಇಡೀ ಕನ್ನಡ ಚಿತ್ರೋದ್ಯದಮವೇ ಪುಷ್ಪ ನಮನ ಮೂಲಕ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಿದ್ರು.

ದಾಸಯ್ಯ ಸಂಪ್ರದಾಯದಂತೆ ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದ್ರು. ಅಂತ್ಯಕ್ರಿಯೆ ವೇಳೆ ಗೋವಿಂದ ನಾಮಸ್ಮರಣೆ ಮೊಳಗಿತು.. ಪಾರ್ವತಮ್ಮ ಭೂತಾಯಿ ಮಡಿಲು ಸೇರುತ್ತಿದ್ದ ಹಾಗೆ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು ಸೇರಿದಂತೆ ಸಾವಿರಾರು ಅಭಿಮಾನಿಗಳು ಕಣ್ಣೀರಿಟ್ಟರು. ಬಳಿಕ ಸಮಾಧಿ ಮೇಲೆ ತುಂಬೆ ಗಿಟ ನೆಟ್ಟು, ಮೂವರು ಮಕ್ಕಳು ಧೂಪ ಹಾಕಿ ದೀಪ ಬೆಳಗುವ ಮೂಲಕ ಅಂತಿಮ ವಿಧಿವಿಧಾನ ನೆರವೇರಿಸಿದ್ರು.

ಜ್ಯೋತಿ ಎಂ ಗೌಡ, ನಾಗಮಂಗಲ

-Ad-

Leave Your Comments