ನಾವು ಭರವಸೆ ಬಿಟ್ಟಿಲ್ಲ -ಶಿವರಾಜಕುಮಾರ್

ಹನ್ನೆರಡು ದಿನ ಉರುಳುತ್ತಿದ್ದರೂ ಪಾರ್ವತಮ್ಮ ರಾಜಕುಮಾರ್ ಅರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ. ಚಿಕಿತ್ಸೆ ಎಂದಿನಂತೆ ಮುಂದುವರೆದಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ರಾಮಯ್ಯ ಆಸ್ಪತ್ರೆಯ ವೈದ್ಯರು ಹಾಗು  ಶಿವರಾಜಕುಮಾರ್ ಪಾರ್ವತಮ್ಮನವರ ಆರೋಗ್ಯದ ಸ್ಥಿತಿಯ ಬಗ್ಗೆ ವಿವರಿಸಿದ್ರು . ಇನ್ನೂ  ವೆಂಟಿಲೇಟರ್ ನಲ್ಲೇ ಚಿಕಿತ್ಸೆ ನಡೆಯುತ್ತಿದೆ . ಟ್ರೈಕಾಷ್ಟಮಿ ಯನ್ನು ಸುಲಭ ಉಸಿರಾಟಕ್ಕಾಗಿ ಮಾಡಿದ್ದೇವೆ. ಬಿಪಿ,ಪಲ್ಸ್ ಸಮಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದೇವೆ. ಪಾರ್ವತಮ್ಮನವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಅದರಿಂದ ಪೇಶೆಂಟ್ ಗೆ ತೊಂದರೆ ಆಗುತ್ತೆ.ಅಭಿಮಾನಿಗಳು, ನಟನಟಿಯರು ಆಸ್ಪತ್ರೆಗೆ ಬರುವುದಕ್ಕಿಂತ ಇರುವಲ್ಲಿಂದಲೇ ಪಾರ್ವತಮ್ಮನವರ ಗುಣಮುಖರಾಗಲಿ ಅಂತ ಪ್ರಾರ್ಥಿಸಿ ಅಂದ್ರು ವೈದ್ಯರು

ಐಸಿಯು ನಲ್ಲಿ ಇರೋದ್ರಿಂದ ಅಮ್ಮನ ಕಂಡೀಷನ್ ಬದಲಾಗುತ್ತಿರುತ್ತೆ. ನಿನ್ನೆಗೆ ಹೋಲಿಸಿದ್ರೆ ಇವತ್ತು ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಆದರೆ ನಾವು ಭರವಸೆ ಬಿಟ್ಟಿಲ್ಲ. ಅಷ್ಟು ಸುಲಭಕ್ಕೆ ಬಿಟ್ಟುಕೊಡಲ್ಲ. ಇಲ್ಲಿನ ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದಾರೆ ಅನ್ನುವುದು ಶಿವರಾಜ್ ಕುಮಾರ್ ಅಭಿಮತ .

ಕನ್ನಡ ಚಿತ್ರರಂಗದ ಸಾಧಕಿ ಪಾರ್ವತಮ್ಮ ಎಂಬ ವಜ್ರೇಶ್ವರಿ ಕಠಿಣ ಪರಿಸ್ಥಿತಿಯನ್ನು ಗೆದ್ದು ಬರಲಿ ಎಂಬುದು ciniadda.com ನ ಹಾರೈಕೆ.

-Ad-

Leave Your Comments