ಟಾಲಿವುಡ್ ಪವರ್ ಸ್ಟಾರ್ ಗೆ ಗಂಡು ಮಗು

ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದಕ್ಕೂ ಮೊದಲು ಈ ಜೋಡಿಗೆ ಪೊಲೆನ್ ಅನ್ನೋ ಒಂದು ಹೆಣ್ಣು ಮಗು ಕೂಡ ಇದೆ. 2011ರಲ್ಲಿ ತೀನ್ ಮಾರ್ ಸಿನಿಮಾ ಶೂಟಿಂಗ್‌ಗಾಗಿ ರಷ್ಯಾಗೆ ತೆರಳಿದ್ದಾಗ ಅನ್ನಾ ಲೆಜ್‌ನೆವಾ ಪ್ರೀತಿಗೆ ಒಳಗಾಗಿದ್ದ ಪವನ್ ಕಲ್ಯಾಣ್, ಇವರನ್ನು ಮದುವೆಯಾಗಿದ್ದರು. ಇದಕ್ಕೂ ಮುನ್ನ 2009ರಲ್ಲಿ ವಸ್ತ್ರ ವಿನ್ಯಾಸಗಾರ್ತಿ ರೇಣು ದೇಸಾಯ್ ಅವರನ್ನ ಮದ್ವೆಯಾಗಿದ್ದರು. ಎರಡನೇ ಪತ್ನಿಯಾಗಿದ್ದ ರೇಣು ದೇಸಾಯ್ ಅವರಿಗೆ ವಿಚ್ಛೇದನ ನೀಡಿ ಪವನ್ ಮೂರನೇ ಮದ್ವೆಯಾಗಿದ್ದಾರೆ. ರೇಣು ದೇಸಾಯ್ ಅವರಿಗೆ ಅಕಿರಾ ಹಾಗೂ ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಪವನ್ ಕಲ್ಯಾಣ್, ಟಾಲಿವುಡ್ ನಟ್ ಮಾತ್ರವಲ್ಲದೇ ಜನ ಸೇನಾ ಪಕ್ಷದ ಸಂಸ್ಥಾಪಕರಾಗಿದ್ದಾರೆ.

-Ad-

Leave Your Comments