ರಾಜಕೀಯದ ಬಗ್ಗೆ ಇಂದು ಪವನ್ ನಿರ್ಧಾರ ಪ್ರಕಟ?

ಚಿತ್ರರಂಗದ ದಿಗ್ಗಜರುಗಳಾದ ಕಮಲ್ ಹಾಸನ್, ರಜನಿಕಾಂತ್ ಹಾದಿಯಲ್ಲಿ ಈಗ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದತ್ತ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಜನಸೇನಾ ಪಕ್ಷ ಸ್ಥಾಪಿಸಿರುವ ಪವನ್ ಕಲ್ಯಾಣ್, ಇಂದು ತಮ್ಮ ನಡೆ ಪ್ರಕಟಿಸಲಿದ್ದಾರೆ.

ಹೈದರಾಬಾದಿನ ಹನುಮಾನ್ ದೇವಾಲಯಕ್ಕೇ ಭೇಟಿ ಬಳಿಕ ನಿರ್ಧಾರ ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ. ತೆಲಂಗಾಣದಲ್ಲೂ ಪಕ್ಷ ಸಂಘಟಿಸುವ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ. ಜತೆಗೆ ತಮ್ಮ ಪಕ್ಷದಿಂದ ನಡೆಯಲಿರುವ ಪಾದಯಾತ್ರೆ ಮತ್ತು ಸಮಾವೇಶಗಳ ಮಾಹಿತಿ ನೀಡಲಿರುವ ಕಲ್ಯಾಣ್, ಈ ಹಿಂದೆ ಲೋಕಸಭಾ ಚುನಾವಣೆ ವೇಳೆ ಮೋದಿ ಬೆಂಬಲಿಸಿದ್ದರು.

-Ad-

Leave Your Comments