ಕಿಚ್ಚ ಸುದೀಪ್ ಮೇಲಿನ ಅಭಿಮಾನಕ್ಕಾಗಿ ಆತ ಮಾಡಿದ್ದೇನು ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದರೆ ಅಭಿಮಾನಿಗಳಿಗೆ ಪಂಚಪ್ರಾಣ, ಅವರು ಹೋದಲ್ಲಿ ಬಂದಲ್ಲಿ ನೋಡಲು ಜನ ಮುಗಿಬೀಳ್ತಾರೆ. ಆ ಕಾರಣದಿಂದ ಭದ್ರತೆಗಾಗಿ ನಟ ಸುದೀಪ್ ತಮ್ಮದೇ ಆದ ಹುಡುಗರ ಪಡೆಯನ್ನೇ ಜೊತೆಯಲ್ಲಿ ಸ್ನೇಹಿತರಂತೆ ಇಟ್ಟುಕೊಂಡಿದ್ದಾರೆ..

ಆದರೂ ಇತ್ತೀಚಿನ ದಿನಗಳಲ್ಲಿ ಸುದೀಪ್ ಅಭಿಮಾನಿಗಳು ಪ್ರಚಂಡ ಅಭಿಮಾನ ತೋರುತ್ತಿದ್ದು ಬೆಳಗಾವಿಯಲ್ಲಿ ದೊಡ್ಡ ರಂಪಾಟವನ್ನೇ ಮಾಡಿದ್ರು ಕೊನೆಗೆ ಬೆಂಗಳೂರಿಗೂ ಬಂದು ಸೀನ್ ಕ್ರಿಯೇಟ್ ಮಾಡಿದ್ರು. ಇದೀಗ ಹುಬ್ಬಳ್ಳಿ ಹುಡುಗರ ಸರದಿ.

ದೇಹದ ಮೇಲೆ ಮೂಡಿದ ಹೆಬ್ಬುಲಿ

ದೇಹದ ಮೇಲೆ ಸುದೀಪ್ ಚಿತ್ರ ಬರೆಸಿಕೊಂಡಿರುವ ಕಲಬುರಗಿ ಅಭಿಮಾನಿಯೊಬ್ಬ ಹೆಬ್ಬುಲಿ ಚಿತ್ರದ ಟೈಟಲ್ ಜೊತೆಗೆ ಹ್ಯಾಪಿ ಬರ್ತ್ ಡೇ ಕಿಚ್ಚ ಸುದೀಪ್ ಅಂತಾ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು, ಅಣ್ಣಾ ನಿಮ್ಮ ರಿಯಾಕ್ಷನ್ ಗೆ ಕಾಯುತ್ತಿದ್ದೇನೆ ಅಂತಾ ಬರೆದುಕೊಂಡಿದ್ದ. ಇದನ್ನು ಗಮನಿಸಿ ಸುದೀಪ್ ನಿಮ್ಮ ಪ್ರೀತಿಗೆ ನಾನು ಧನ್ಯ ಎಂದಿದ್ದಾರೆ.

ಆದರೂ ಸುದೀಪ್ ಗೆ ಅಭಿಮಾನಿಗಳು ತೋರುವ ಅಭಿಮಾನ ದೊಡ್ಡದು. ಸುದೀಪ್ ತನ್ನ ಅಭಿಮಾನಿಗಳನ್ನು ಹೆಚ್ಚಾಗಿ ಪ್ರೀತಿಸ್ತಾರೆ. ಗಮನ ಸೆಳೆಯಲು ಅಭಿಮಾನಿಗಳು ಈ ರೀತಿ ಎಲ್ಲಾ ಮಾಡೋದು ಕಾಮನ್. ಆದ್ರೆ ಮಿತಿಮೀರದೆ ಇದ್ರೆ ಉತ್ತಮ ಅನ್ನೋದಷ್ಟೆ ನಮ್ಮ ಕಳಕಳಿ..

-Ad-

Leave Your Comments