ಬಾಹುಬಲಿ ಸಿನಿಮಾ ನೋಡಲು ಮೇಷ್ಟ್ರಿಗೆ ಫಳಾರ್ ಪತ್ರ ! ಹೀಗೂ ಉಂಟೇ?!

ಸಿನಿಮಾ ಅನ್ನುವುದು ಒಂದು ಹುಚ್ಚು . ಬೆಳ್ಳಿತೆರೆಯ ಮೇಲೆ ಬರುವ ನಟ- ನಟಿಯರ ರೊಮ್ಯಾನ್ಸು , ಹೊಡೆದಾಟ , ಬಡಿದಾಟ, ಕಷ್ಟ , ಅಳು -ನಗು ಎಲ್ಲವನ್ನೂ ತಮ್ಮದೇ ಅಂದುಕೊಂಡು ಅನುಭವಿಸುವ ಪ್ರೇಕ್ಷರಿಗೇನು ಕಮ್ಮಿ ಇಲ್ಲ. ಫೈಟಿಂಗ್ ಸೀನ್ ಗಳು ಡ್ಯೂಪ್ ಮಾಡಲಾಗಿರುತ್ತೆ ಅಂತ ಗೊತ್ತಿದ್ರೂ ತೆರೆ ಮೇಲೆ ನಾಯಕ ಎದುರಾಳಿಗಳಿಗೆ “ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ತಗೋ ತಿನ್ನು” ಅನ್ನುವ ರೀತಿಯಲ್ಲಿ ಎಗರಿಸಿ ಎರಡು ಬಿಡುವ  ದೃಶ್ಯ ಬಂದ್ರೆ ನೋಡ್ದಾ ನಮ್ ಗುರು ಹೆಂಗ್ ಬಿಟ್ಟಾ !! ಬಿಟ್ರೆ ಹಾಂಗ್  ಬಿಡ್ಬೇಕ್ ನೋಡು ಹೀಗನ್ನುವ ಮುಗ್ದ , ಹುಚ್ಚು ಸಿನಿಮಾ ಪ್ರೇಮಿ ಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ . ಅಂಥದೊಂದು ಕಲರ್ ಫುಲ್ ಘಟನೆ ನಡೆದಿದೆ . ಅದ್ರಲ್ಲೂ ನಾವು ಸಿನಿಮಾಗೆ ಹೋಗೋದಿಕ್ಕೆ ಯಾವ ಯಾವ ಬಾಳಾ೦ಗ್ ಬಿಟ್ಟಿರ್ತೀವಿ, ಯಾರ್ಯಾರಿಗೆ ಚಳ್ಳೆ ಹಣ್ಣು ತಿನ್ನಿಸಿರ್ತೀವಿ ಅನ್ನೋದನ್ನೂ  ಈ ನೈಜ ಕಥೆ ನೆನಪು ಮಾಡಿಕೊಡುತ್ತೆ.

ಬಾಹುಬಲಿ ಮೊದಲ ಭಾಗವನ್ನು  ನೋಡಿ ಹುಚ್ಚೆದ್ದಿದ್ದ ಜನ ಬಾಹುಬಲಿ- 2 ನೋಡಲಿಕ್ಕೆ ಕಾಸು ಎಷ್ಟಾದ್ರೂ ಪರವಾಗಿಲ್ಲ ಮಗ ಮೊದಲು ಸಿನಿಮಾ ನೋಡಿಬಿಡಬೇಕು ಅನ್ನುವಷ್ಟರ ಮಟ್ಟಿಗೆ ಮುಗಿಬಿದ್ದಿದ್ದಾರೆ. ಬಳ್ಳಾರಿಯ ಯುವಕನೊಬ್ಬ ತನ್ನ ಕಾಲೇಜಿಗೆ ಚಕ್ಕರ್ ಹೊಡೆದು ಬಾಹುಬಲಿ ನೋಡೋದಿಕ್ಕೆ ರಜಕ್ಕಾಗಿ ಅನುಮತಿ ಕೇಳಿದ್ದಾನೆ. ಅನುಮತಿಗಾಗಿ ಬರೆದ ಪತ್ರದಲ್ಲಿ ಚಾಣಾಕ್ಷತೆಯನ್ನೂ ಮೆರೆದಿದ್ದಾನೆ. ತನ್ನ ಜೀವನದಲ್ಲಿ ಉತ್ತರ ಪಡೆಯಲೇಬೇಕಾದ,ತನ್ನನ್ನು ಕಾಡುತ್ತಿರುವ  ಬಹು ಮುಖ್ಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು  ಸಿನಿಮಾಕ್ಕೆ ಹೋಗುತ್ತಿದ್ದೇನೆ. ಆದಕಾರಣ ರಜ ತೆಗೆದುಕೊಳ್ಳುವುದಿಕ್ಕೆ ತಾನು ಅರ್ಹ ಮತ್ತು ನೀವು ಕೊಡಲೇಬೇಕು ಎನ್ನುವ  ರೀತಿಯಲ್ಲಿ ಬಿಂಬಿಸಿದ್ದಾನೆ.

 ನಿಮ್ಮ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿಯಾದ ವಿವೇಕ್ ಕುಮಾರ್ ಎಂಬ ನಾನು ದಿನಾಂಕ ೨೮/೦೪/೨೦೧೭ರಂದು “ಬಾಹುಬಲಿಯನ್ನು ಕಟ್ಟಪ್ಪ ಏಕೆ ಸಾಯಿಸಿದ ಎಂಬುದನ್ನು ತಿಳಿಯುವ ಸಲುವಾಗಿ ವಿನಾಯಕ ಥಿಯೇಟರಿಗೆ ಹೋಗುತ್ತಿದ್ದು , ನನ್ನ ಈ ಒಂದು ದಿನದ ಗೈರು ಹಾಜರಿಯನ್ನು ಮನ್ನಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ- ತಮ್ಮ ವಿಧೇಯ ಶಿಷ್ಯ ,ವಿವೇಕ್ ಕುಮಾರ್ 

ಆದರೂ ಈ ಹುಡುಗ ಭಲೇ  ಫಳಾರ್ ಬಿಡಿ . ಹಾಗೇ ಸಿನಿಮಾ ಮೋಹ ಎಷ್ಟೆಲ್ಲಾ ಕ್ರಿಯೇಟಿವ್ ಐಡಿಯಾ ಕೊಡುತ್ತೆ ನೋಡಿ.

 

-Ad-

Leave Your Comments