ವೀಕೆಂಡ್ ಸಾಧಕರ ಚೇರ್ ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ !!

ಖಾಸಗಿ ವಾಹಿನಿ ಝೀ ಕನ್ನಡದಿಂದ   ಪ್ರತಿವಾರಾಂತ್ಯದಲ್ಲಿ  ಪ್ರಸಾರ ಆಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂದು  ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸಾಧಕರ ಸೀಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರವಿ ಡಿ ಚೆನ್ನಣ್ಣನವರ್  ಅವರು ಗದಗ ಜಿಲ್ಲೆಯವರಾಗಿದ್ದು, ಅವರು ಸಾಗಿ ಬಂದಿರುವ ಬದುಕು ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಅವರು ಐಪಿಎಸ್ ಅಧಿಕಾರಿ ಆಗುವ ಮುನ್ನ ಒಂದು ಬಾರ್ ನಲ್ಲಿ ಕೆಲಸ ಮಾಡ್ತಿದ್ರು ಅಂದ್ರೆ ಎಲ್ಲರಿಗೂ ಅಚ್ಚರಿಯೇ ಸರಿ. ಜೊತೆಗೆ ಈ ಹಂತ ತಲುಪುವ ಮುಂಚೆ ಜೀವನದಲ್ಲಿ ಏನೆಲ್ಲ ಕಷ್ಟಗಳನ್ನು ಅನುಭವಿಸಿದ್ದರು, ಅವರ ಓದಿಗೆ ಸ್ಫೂರ್ತಿ ಜೊತೆಗೆ ಬೆನ್ನೆಲುಬಾಗಿದ್ದು ಯಾರು? ಅವರ ಜೊತೆ ಓದಿದವರು ಏನು ಮಾಡ್ತಿದ್ದಾರೆ ಎನ್ನುವುದನ್ನು ನೋಡಿದ್ರೆ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಬಲ್ಲುದು .ಯುವಕರು, ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾಭ್ಯಾಸ ಮಾಡಿ ಕೆಲಸ ಇಲ್ಲದೆ ಅಲೆಯುತ್ತಿರುವ ಹುಡುಗರು ಅವಶ್ಯವಾಗಿ  ನೋಡಲೇಬೇಕಾದ  ಎಪಿಸೋಡ್ ಇದು.
 ಬಹಳ  ಕಷ್ಟದ  ಜೀವನ ಸವೆಸಿ  ಮೇಲಕ್ಕೆ  ಬಂದಿರುವ ರವಿ ಡಿ.ಚನ್ನಣ್ಣನವರ್ ಧಾರವಾಡದ ಹೋಟೆಲ್ ಒಂದರಲ್ಲಿ ಲಿಕ್ಕರ್ ಪೂರೈಕೆ ಮಾಡುವ ಮಾಣಿಯಾಗಿ ಕೆಲಸ ಮಾಡುತ್ತಿದ್ದವರು. ಮುಂದೊಂದು ದಿನ ಅದೇ ಧಾರವಾಡಕ್ಕೆ ಪೊಲೀಸ್ ಅಧಿಕಾರಿಯಾಗಿ ಹೋದಾಗ ಆದ ಅನುಭವ ಎಲ್ಲವನ್ನೂ  ಹೇಳಿಕೊಂಡಿದ್ದಾರೆ..
ಕಬ್ಬಿಣದ ಕಡಲೆ ಎನ್ನುವ ಐಪಿಎಸ್ ಕನಸು ಕಾಣುತ್ತಿರುವ ನಿಮ್ಮಲ್ಲಿ ಅನೇಕರಿಗೆ ಯಾವುದಾದರೂ ಒಂದು ಸ್ಟೇಜ್ ನಲ್ಲಿ ಸ್ಪಿರಿಟ್ ಅನ್ನೋದು ಸಿಗಬಹುದು ನೋಡಿ.
-Ad-

Leave Your Comments