ತಿಮ್ಮಪ್ಪನಿಗೆ ಹರಕೆ ಹೊತ್ತಿದ್ರಾ ಬಾಹುಬಲಿ..?

ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಐತಿಹಾಸಿಕ  ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಾಹುಬಲಿ ೨ ದಿ ಕನ್‌ಕ್ಲೂಷನ್ ಸಿನಿಮಾದ ಹೀರೋ ಪ್ರಬಾಸ್. ಕಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ  ಪ್ರಬಾಸ್. ಅಮರೇಂದ್ರ ಬಾಹುಬಲಿ ಹಾಗೂ ಮಹೇಂದ್ರ ಬಾಹುಬಲಿಯಾಗಿ ಬಹುಭಾಷಾ ಸಿನಿಪ್ರೇಕ್ಷಕರನ್ನು ಮನರಂಜಿಸಿದ ಖ್ಯಾತಿ ತೆಲುಗು ಸ್ಟಾರ್ ಪ್ರಬಾಸ್‌ಗೆ ಸಂದಿದೆ. ಇದೀಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪ್ರಬಾಸ್ ಸಿನಿಮಾದಲ್ಲಿ ಕಾಣುವ  ವಯಸ್ಸಿಗೂ ಈಗಿರುವ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸ ಇದೆ ಎನಿಸುತ್ತದೆ.

೫ ವರ್ಷದ ಬಳಿಕ ಸ್ಟೈಲ್ ಚೇಂಜ್..!

ಬಾಹುಬಲಿ ೧ ಹಾಗೂ ಬಾಹುಬಲಿ ೨ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡ ಬಳಿಕ ಪ್ರಬಾಸ್ ತನ್ನ ಲುಕ್ ಬದಲಾಯಿಸಲು ಸಾಧ್ಯವಾಗಿರಲಿಲ್ಲ. ೫ ವರ್ಷಗಳನ್ನು ಬಾಹುಬಲಿ ಡೈರೆಕ್ಟರ್ ಎಸ್ ಎಸ್ ರಾಜಮೌಳಿಗಾಗಿ ಮೀಸಲಿಟ್ಟಿದ್ರು. ಬಾಹುಬಲಿ ಸಿನಿಮಾದ ೨ ಭಾಗಗಳು ಚಿತ್ರೀಕರಣವಾಗಿ ಬಿಡುಗಡೆ ಆಗಲು ಬರೋಬ್ಬರಿ ೫ ವರ್ಷಗಳು ಬೇಕಾಯ್ತು. ಈ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ದೇಶಕರು ತಿಳಿಸಿದ್ರಿಂದ ಸ್ಟೈಲ್ ಬದಲಾವಣೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಹುಬಲಿ ೨ ಸಿನಿಮಾ ಜಗತ್ತಿನಾದ್ಯಂತ ಭರ್ಜರಿ ಯಶಸ್ಸು ಕಂಡು ಕೋಟ್ಯಂತರ ರೂಪಾಯಿ ಆದಾಯ ಗಳಿಸಿ, ಭಾರೀ ಹೆಸರು ತಂದು ಕೊಟ್ಟ ಬಳಿಕ ತನ್ನ ಮಹೇಂದ್ರ ಬಾಹುಬಲಿ ಹಾಗೂ ಅಮರೇಂದ್ರ ಬಾಹುಬಲಿ ಲುಕ್ ಬದಲಿಸಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ತಿಮ್ಮಪ್ಪನಿಗೆ ಹರಕೆ ತೀರಿಸಿದ್ರಾ ಸಾಹೋ ಬಾಹುಬಲಿ..!

ಸಿನಿಮಾ ಸ್ಟಾರ್‌ಗಳಲ್ಲಿ ಬಹಳಷ್ಟು ಮಂದಿ ದೈವಭಕ್ತರಾಗಿರುತ್ತಾರೆ. ಅದರಲ್ಲೂ ತೆಲುಗು ಸ್ಟಾರ್‌ಗಳು ಅಂದ್ರೆ ತಿಮ್ಮಪ್ಪನ ಭಕ್ತರಾಗಿರುತ್ತಾರೆ. ಅದೇ ರೀತಿ ಪ್ರಬಾಸ್ ಕೂಡ ತಿಮ್ಮಪ್ಪನಿಗೆ ಭಕ್ತರಾಗಿದ್ದಾರೆ ಎನಿಸುತ್ತದೆ. ಅದಕ್ಕಾಗಿ ಮೀಸೆ ಹಾಗೂ ಕೂದಲನ್ನು ದೇವರಿಗೆ ಅರ್ಪಿಸಿದ್ರಾ ಅನ್ನೋ ಅನುಮಾನಗಳು  ಕಾಡ್ತಿವೆ. ಇದೀಗ ಹೊಸ ಲುಕ್ ರಿವಿಲ್ ಮಾಡಿರುವ ನಟ ಪ್ರಬಾಸ್ ಮೀಸೆ ತೆಗೆಸಿದ್ದಾರೆ. ಆದ್ರೆ ತಲೆ ಮೇಲೆ ಟೋಪಿ ಹಾಕಿಕೊಂಡಿರುವುದರಿಂದ ತಲೆ ಕೂದಲನ್ನೂ ದೇವರಿಗೆ ಅರ್ಪಿಸಿದ್ದಾರಾ ಅನ್ನೋ ಅನುಮಾನ ಮೂಡ್ತಿದೆ. ಆದ್ರೆ ಅದನ್ನು ಮಾತ್ರ ಪ್ರಬಾಸ್ ರಿವೀಲ್ ಮಾಡಿಲ್ಲ. ತಲೆ ಮೇಲೆ ಹ್ಯಾಟ್ ಹಾಕೊಂಡಿರುವುದರಿಂದ ತಲೆ ಕೂದಲನ್ನೂ ದೇವರಿಗೆ ಮುಡಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅಥವಾ ಮುಂಬರುವ ಸಾಹೋ ಸಿನಿಮಾಗೂ ಮುನ್ನ ಗೆಟಪ್ ಚೇಂಜ್ ಮಾಡಿದ್ದಾರಾ ಅನ್ನೋದು ಬಹಿರಂಗ ಆಗಿಲ್ಲ..

-ಜ್ಯೋತಿ ಎಂ. ಗೌಡ

 

-Ad-

Leave Your Comments