ಬಾಹುಬಲಿ ಪ್ರಭಾಸ್ ಗೆ ಮನೆಯವರು ನೋಡಿದ ಹುಡುಗಿ ಜತೆ ಮದುವೆ?

ಬಾಹುಬಲಿ ಖ್ಯಾತಿಯ ಪ್ರಭಾಸ್ – ಅನುಷ್ಕಾ ಶೆಟ್ಟಿ ಪ್ರೇಮ ಪಲ್ಲವಿ ಶುರುವಾಗಿದೆ. ಮದುವೆಯಾಗುವ ಸಾಧ್ಯತೆ ಬಗ್ಗೆಯೂ ಗುಸುಗುಸು ಸುದ್ದಿಗಳು ಹರಿದಾಡಿದ್ದವು.  ಆದರೀಗ ಅಂತೆ-ಕಂತೆ ಸುದ್ದಿಗಳನ್ನೆಲ್ಲ ಒಗೆಯುವ ಕಾಲ ಬಂದಿದೆ .
ಪ್ರಭಾಸ್ ಯಾರನ್ನ ಮದುವೆ ಆಗಬೇಕು ಅನ್ನೋದನ್ನ ಅವರ ಮನೆಯ ಮಂದಿ ನಿರ್ಧಾರ ಮಾಡಿ ನಿಶ್ಚಯಾನು ಮಾಡಿದ್ದರಂತೆ.  ರಾಶಿ ಸಿಮೆಂಟ್ ಮಾಲೀಕ ಭೂಪತಿ ಅವರ ಮೊಮ್ಮಗಳನ್ನು ನಟ ಪ್ರಭಾಸ್ ವರಿಸಲಿದ್ದಾರಂತೆ ಎಂಬ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ .ತೆಲುಗಿನ ರೆಬಲ್ ಸ್ಟಾರ್  ಕೃಷ್ಣಂ ರಾಜು  ಪ್ರಭಾಸ್ ಮದುವೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇದೇ  ವರ್ಷದ ಕೊನೆಗೆ  ಅಥವಾ 2018 ರ ಆರಂಭದಲ್ಲಿ ಪ್ರಭಾಸ್ ಮದುವೆ  ನೆರವೇರಲಿದೆಯಂತೆ. ಹೀಗಾಗಿ ಮದುವೆಗೆ ಭರ್ಜರಿ  ಶುರುವಾಗಿವೆಯಂತೆ.  ಅಧಿಕೃತವಾಗಿ ಈ ಮಾಹಿತಿ ಪ್ರಭಾಸ್ ಕಡೆಯಿಂದ ಬರೋವರೆಗೂ ಕಾಯಬೇಕಿದೆ.
-Ad-

Leave Your Comments