ಪ್ರಜ್ವಲ್ ದೇವರಾಜ್, ರಾಗಿಣಿ, ದಿಗಂತ್, ಐಂದ್ರಿತಾ ಹೋಗಿದ್ದೆಲ್ಲಿಗೆ?

ಸಾಮಾನ್ಯವಾಗಿ ಸ್ನೇಹಿತರೆಲ್ಲಾ ಸೇರಿಕೊಂಡು ಲಾಂಗ್ ರೈಡ್ ಹೋಗುವುದು ಸಾಮಾನ್ಯ. ಅದರಲ್ಲೂ ಬೈಕುಗಳಲ್ಲಿ ಲಾಂಗ್ ರೈಡ್ ಈಗ ಹೊಸ ಟ್ರೆಂಡ್. ಆದರೆ ಈ ಬೈಕ್ ಗಳಲ್ಲಿ ಲಾಂಗ್ ರೈಡ್ ಹೋಗುವುದು ಸ್ಟಾರ್ ಗಳಿಗೆ ಸ್ವಲ್ಪ ಕಷ್ಟ. ಯಾಕೆಂದರೆ ಎಲ್ಲಾ ಕಡೆ ಜನ ಗುರುತಿಸುತ್ತಾರೆ, ಮುತ್ತಿಕೊಳ್ಳುತ್ತಾರೆ ಇದರಿಂದಾಗಿ ತಮ್ಮ ಪಾಡಿಗೆ ತಾವು ಇರೋದಿಕ್ಕೆ ಸಾಧ್ಯವಾಗೊಲ್ಲ ಎಂಬುದು ಅವರ ಸಮಸ್ಯೆ. ಅದಕ್ಕಾಗಿಯೇ ತಾನು ಹೆಲ್ಮೆಟ್ ಹಾಕಿಕೊಂಡು ತಿರುಗಾಡುತ್ತೇನೆ ಎಂದು ಸುದೀಪ್ ಈ ಹಿಂದೆಯೇ ಹೇಳಿದ್ದರು.
ಆದರೆ ಇದೀಗ ಪ್ರಜ್ವಲ್ ದೇವರಾಜ್, ಪ್ರಜ್ವಲ್ ಪತ್ನಿ ರಾಗಿಣಿ, ದಿಗಂತ್, ಐಂದ್ರಿತಾ ಮತ್ತು ಇವರ ಗ್ಯಾಂಗ್ ಈಗ ಲಾಂಗ್ ರೈಡ್ ಹೋಗಿ ಬಂದಿದೆ. ಅದೂ ದುಬಾರಿ ಬೈಕುಗಳಲ್ಲಿ. ಇವರ ಟೀಂ  ಹಾರ್ಲೇ ಡೇವಿಡ್ ಸನ್, ಹಯಬುಝಾ, ರಾಯಲ್ ಎನ್ ಫೀಲ್ಡ್, ಕವಸಕಿ ಇತ್ಯಾದಿ ಬೈಕುಗಳಲ್ಲಿ ಇವರ ಟೀಂ ರೈಡ್ ಹೋಗಿ ಬಂದಿದೆ. ಬೈಕ್ ಗಳಿಗೆ ಆಡಿ, ಟೊಯೋಟ, ಫೋರ್ಡ್ ಇತ್ಯಾದಿ ಕಾರುಗಳೂ ಸಾಥ್ ಕೊಟ್ಟಿವೆ.
ಈ ಗೆಳೆಯರ ಗುಂಪು ಇನ್ನೊಂದು ಬಹುಕಾಲದ ನಂಬಿಕೆಯನ್ನು ಸುಳ್ಳು ಮಾಡಿದೆ. ಅದೇನೆಂದರೆ ಸಿನಿಮಾ ರಂಗದಲ್ಲಿ ಗೆಳೆಯರು ಇರುವುದಿಲ್ಲ ಅನ್ನೋ ನಂಬಿಕೆ. ಆದರೆ ಪ್ರಜ್ವಲ್, ದಿಗಂತ್ ಗುಂಪು ಯಾವಾಗಲೂ ಜೊತೆಗೆ ಇದ್ದು ಬೆಸ್ಟ್ ಫ್ರೆಂಡ್ಸ್ ಅಂತ ಕರೆಸಿಕೊಂಡಿದೆ. ಅಂದಹಾಗೆ ಈ ಗುಂಪು ಎಲ್ಲಿಗೆ ಲಾಂಗ್ ಡ್ರೈವ್ ಹೋಗಿತ್ತು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿರುವ ಸಂಗತಿ.
-Ad-

Leave Your Comments