“ಸತ್ಯ ತಿಳಿದು ಮಾತನಾಡಿ ” ನ್ಯೂಸ್ ಚಾನೆಲ್ ಗಳ ಮೇಲೆ ಪ್ರಜ್ವಲ್ ಆಕ್ರೋಶ !

ಬೆಂಗಳೂರಲ್ಲಿ ಪಾರ್ಟಿ ಮುಗಿಸಿ   ಕಾರಿನಲ್ಲಿ ಬರುವಾಗ ಡ್ರಗ್ಸ್ ಸೇವಿಸಿ ಮಾರುತಿ ವ್ಯಾನ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪ್ರಕರಣ ನಡೆದಿದೆ. ಅಪಘಾತ ಮಾಡಿದವರ ಜೊತೆಯಲ್ಲಿ ಕನ್ನಡದ  ಖ್ಯಾತ ನಟರಾದ  ದಿಗಂತ್ ,ಪ್ರಜ್ವಲ್ ಹೆಸರು ಕೇಳಿಬಂದಿತ್ತು. ಗೋವಾದಿಂದ ಎರಡು ದಿನದ ಹಿಂದಷ್ಟೇ  ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ  ಶೂಟಿಂಗ್ ಮುಗಿಸಿದ ಬಂದಿದ್ದ ಪ್ರಜ್ವಲ್ ಉದ್ಯಮಿ ಆದಿಕೇಶವಲು ಮಗನ ಜೊತೆಯಲ್ಲಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಜೊತೆಗೆ ದಿಗಂತ್ ಕೂಡ ಇದ್ದರು ಎನ್ನುವ ಸುದ್ದಿ ಕೂಡ ಢಾಳಾಗಿತ್ತು.
ಮಾಧ್ಯಮದ  ಜೊತೆ ಮಾತಾನಾಡಿದ ಪ್ರಜ್ವಲ್ ಯಾರೋ ಹೇಳಿದ್ದನ್ನು ಕೇಳಿ ಸುದ್ದಿ  ಪ್ರಸಾರ ಮಾಡುವ ಮೊದಲು ಸತ್ಯ ಏನಿದೆ ತಿಳಿದುಕೊಳ್ಳಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಸಮಾಜದ ಮೇಲೆ ಕಳಕಳಿ ಇರೋವಂತವರು ಇಂಥಾ ಕೆಲಸ ಮಾಡೋದಿಲ್ಲ. ನಾನು ಗೋವಾದಲ್ಲೇ ಇದ್ದೇನೆ . ಅದು ಹೇಗೆ ನಿನ್ನೆ ಅಪಘಾತ ಮಾಡಿದವರ ಜೊತೆ ಇರೋದಿಕ್ಕೆ ಸಾಧ್ಯ ಹೇಳಿ ಎಂದು ಮರು ಪ್ರಶ್ನೆ ಎಸೆದಿದ್ದಾರೆ. ಅಷ್ಟೇ ಅಲ್ಲದೆ ನಾನಿರುವ ಕಡೆ ನೆಟ್ ವರ್ಕ್ ಸರಿಯಾಗಿ ಸಿಗ್ತಾ ಇಲ್ಲ . ಫೇಸ್ಬುಕ್ ಲೈವ್ ಮಾಡೋದಿಕ್ಕೆ ಪ್ರಯತ್ನ ಪಡ್ತಾ ಇದ್ದೇನೆ . ಜನರಿಗೆ ಸತ್ಯ ಏನು ಅನ್ನೋದನ್ನ ಹೇಳ್ಬೇಕು ಅಂದ್ರು .
ದಿಗಂತ್ ಕೂಡ ನಾನು  ಕನಕಪುರದಲ್ಲಿ ಶೂಟಿಂಗ್ ನಲ್ಲಿದ್ದೇನೆ. ನಾನು ಹೇಗೆ ಅಪಘಾತದ ಸ್ಥಳದಲ್ಲಿ ಇರೋದಿಕ್ಕೆ ಸಾಧ್ಯ ? ನಾನು ಕನಕಪುರದಿಂದ ,ಪ್ರಜ್ವಲ್ ಗೋವಾದಿಂದ ವಾಪಾಸ್ ಬಂದು ಆಕ್ಸಿಡೆಂಟ್ ಮಾಡಿದವರ ಜೊತೆಯಲ್ಲಿ ಇದ್ದು ಆಮೇಲೆ ವಾಪಾಸ್ ಹೋಗಿದ್ದಿವಿ ಅಂತಾನಾ ಎಂದು ಮರು ಪ್ರಶ್ನಿಸಿದ್ರು. ನಾವಿಬ್ಬರೂ ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದೀವಿ .ನಮ್ಮ ಹೆಸರು ಹಾಳು ಮಾಡೋ ಪ್ರಯತ್ನ ಮಾಡ್ಬೇಡಿ ಅನ್ನೋ ಮನವಿ ಕೂಡ ಮಾಡಿದ್ರು.
ಸದ್ಯ ಅಪಘಾತ ಮಾಡಿದ ವಿಷ್ಣು ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ . ಜೊತೆಯಲ್ಲಿದ್ದವರು ಯಾರ್ಯಾರು ಎಂಬುದು ಗೊತ್ತಾಗಬೇಕಿದೆ.
-Ad-

Leave Your Comments