ಬಂಧನ ಭೀತಿಯಲ್ಲಿ ಓಡಿಹೋದ ಭುವನ್

ಮೊನ್ನೆಯಷ್ಟೇ ನಟ ಭುವನ್ ಪ್ರಥಮ್ ವಿರುದ್ಧ ಒಂದು ಆರೋಪ ಮಾಡಿದ್ರು ಶೂಟಿಂಗ್ ಸ್ಪಾಟ್ನಲ್ಲಿ ತನ್ನ ತೊಡೆ ಕಚ್ಚಿದ್ದಾನೆ ಅಂತ ರಂಪಾಟ ಮಾಡಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯನ್ನು ಮಾಡಿದ್ರು. ಆ ಬಳಿಕ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ವಿರುದ್ಧ ದೂರು ದಾಖಲು ಮಾಡಿದ ಭುವನ್, ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದರು. ಭುವನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದಂತೆ ಎಚ್ಚೆತ್ತ ಪ್ರಥಮ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಪಡೆದರು.

ನಟ ಭುವನ್ ವಿರುದ್ಧ ಪ್ರಥಮ್ ದೂರು

ನಿನ್ನೆ ನಿರೀಕ್ಷಣಾ ಜಮೀನು ಪಡೆದ ಪ್ರಥಮ್ ಇಂದು ತಾಳಗುಪ್ಪ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದರು. ಏಕಾಏಕಿ ತನ್ನ ಮೇಲೆ ಹಲ್ಲೆ ಮಾಡಿದ ಭುವನ್ ತನ್ನ ಕುತ್ತಿಗೆ ಹಿಡಿದು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ರು ಅಂತ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಯಾವಾಗ ದೂರಿಗೆ ಪ್ರತಿದೂರು ದಾಖಲಾಯಿತು ಪೊಲೀಸರು ಎರಡು ಪ್ರಕರಣಗಳ ವಿಚಾರಣೆ ಆರಂಭಿಸಿದ್ದಾರೆ.

ರಾಜರಾಜೇಶ್ವರಿ ನಗರದ ಭುವನ್ ನಿವಾಸಕ್ಕೆ ಪೊಲೀಸರ ಭೇಟಿ- ಪರಾರಿಯಾದ ಭುವನ್

ಯಾವುದೇ ಒಂದು ದೂರು ದಾಖಲಾದರೂ ಪೊಲೀಸರು ಹೇಳಿಕೆ ಪಡೆಯೋದು ಕಾಮನ್ ಅದೇ ರೀತಿ ನಟ ಪ್ರಥಮ ನೀಡಿದ ದೂರನ್ನು ಅಧರಿಸಿ ನಟ ಭುವನ್ ಮನೆಗೆ ಪೊಲೀಸರು ಭೇಟಿ ಕೊಟ್ಟಿದ್ದರು. ಆದರೆ ಪೊಲೀಸರನ್ನು ನೋಡ್ತಿದ್ದ ಹಾಗೆ ಭುವನ್ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ.

ಉಟ್ಟ ಬಟ್ಟೆಯಲ್ಲೇ ಭುವನ್ ಓಡಿಹೋಗಿದ್ದಾರೆ ಯಾಕೆ ..?

ಅಸಲಿಗೆ ಪ್ರಕರಣದಲ್ಲಿ ಭುವನ್ ಸಂತ್ರಸ್ತ ಪ್ರಥಮ ಭುವನ್ ತೊಡೆಯನ್ನು ಕಚ್ಚಿದರೆ ಅಂತ ಆರೋಪ ಮಾಡಿದ್ದಾರೆ ಹಾಗೆ ಕಂಪ್ಲೇಂಟ್ ಕೂಡ ದಾಖಲಾಗಿದೆ. ಆದ್ರೆ ಪ್ರಥಮ್ ಕೊಟ್ಟ ದೂರನ್ನು ಆಧರಿಸಿ ಪೊಲೀಸರು ವಿಚಾರಣೆ ನಡೆಸಲು ಬಂದಿದ್ದಾಗ ಬೆದರಿದ ಭುವನ್ ಉಟ್ಟ ಬಟ್ಟೆಯಲ್ಲಿ ಅಂದ್ರೆ ಬರ್ಮುಡಾ ಹಾಗೂ ಟಿ ಶರ್ಟ್ ನಲ್ಲಿ ಮನೆಯಿಂದ ಓಡಿ ಹೋಗಿದ್ದಾರೆ. ಪೊಲೀಸರು ಮನೆಯೊಳಗೆ ಕುಳಿತಿದ್ದಾಗ ಹಿಂಬದಿ ಬಾಗಿಲಿನಿಂದ ಓಡಿ ಹೋಗಿದ್ದಾರೆ. ಭುವನ್ ಈ ವರ್ತನೆ ನೋಡಿದರೆರ ಈ ಪ್ರಕರಣದಲ್ಲಿ ಭುವನ್ ಕೈವಾಡ ಇದೆಯಾ ಅನ್ನುವ ಶಂಕೆ ವ್ಯಕ್ತವಾಗುತ್ತಿದೆ. ತಮ್ಮ ಕಡೆಯಿಂದ ತಪ್ಪು ನಡೆದಿಲ್ಲ ಎಂದಾದ ಮೇಲೆ ಓಡಿ ಹೋಗುವ ಪ್ರಮೇಯವಾದರೂ ಏನಿತ್ತು ಅನ್ನೋದು ಸದ್ಯ ಉದ್ಭವಿಸಿರುವ ಪ್ರಶ್ನೆ.

ಇದಕ್ಕೂ ಮೊದಲು ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್ ಗೆ ಹಾಜರಾಗಿದ್ದ ನಟ ಭುವನ್ ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದಾರೆ. ವಿಚಾರಣೆ ನಡೆಸಲು ಹೋಗುತ್ತಿದ್ದ ಹಾಗೆ ಪೊಲೀಸರನ್ನು ಕಂಡು ಓಡಿಹೋದ ಭುವನ್ ಮೇಲೆ ಪೊಲೀಸರಿಗೆ ಒಂದು ಕಡೆ ಅನುಮಾನ ಕೂಡ ಮೂಡಿದೆ. ಹೀಗಾಗಿ ನಾಳೆ ಭುವನ್ ನನ್ನು ವಿಚಾರಣೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ. ಜೊತೆಗೆ ನಟಿ ಸಂಜನಾ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪ್ರಥಮ ಕಚ್ಚಿದ್ದಾನೆ ಎನ್ನಲಾದ ಗಾಯದ ಸ್ಯಾಂಪಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ . ಒಟ್ನಲ್ಲಿ ಇವರಿಬ್ಬರ ಕಚ್ಚಾಟದಿಂದ ಸ್ಯಾಂಡಲ್ ವುಡ್ ನಲ್ಲಿ ಕಚ್ಚೇಶ್ವರ ನೆಂಬ ಬಿರುದನ್ನು ಪ್ರಥಮ ಪಡೆದಂತಾಗಿದೆ. ಆದ್ರೆ ಈ ಪ್ರಕರಣದಲ್ಲಿ ಯಾರದು ತಪ್ಪು ಯಾರದು ಸರಿ ಅನ್ನುವ ಬಗ್ಗೆ ಪೊಲೀಸರ ತನಿಖೆಯಿಂದಷ್ಟೆ ಬಯಲಾಗಬೇಕಿದೆ.

ಜ್ಯೋತಿ ಎಂ ಗೌಡ

-Ad-

Leave Your Comments