ಶರಂಪರ ಕಿತ್ತಾಡಿಕೊಂಡ ಪ್ರಥಮ್ ಮತ್ತು ಭುವನ್

ಬಿಗ್‌ಬಾಸ್ ಕಾರ್ಯಕ್ರಮ ನೋಡಿದವರಿಗೆ ಒಳ್ಳೆ ಹುಡುಗ ಪ್ರಥಮ್ ಮತ್ತು ಭುವನ್ ಮಧ್ಯದ ಜಗಳ ನೆನಪಿರುತ್ತದೆ. ಭುವನ್, ಪ್ರಥಮ್ ಮತ್ತು ಸಂಜನಾರ ಟ್ರಯಾಂಗಲ್ ಲವ್‌ಸ್ಟೋರಿ ಅಲ್ಲಿ ಜನಪ್ರಿಯವಾಗಿತ್ತು. ಅದಕ್ಕಾಗಿಯೇ ಅವರಿಬ್ಬರಿಗೂ ಜಗಳವೂ ಆಗುತ್ತಿತ್ತು. ಈಗ ಆ ಜಗಳ ಮುಂದುವರಿದಿದೆ.

ಈ ಟ್ರಯಾಂಗಲ್ ಸ್ಟೋರಿಯನ್ನು ಆಧರಿಸಿಯೇ ಕಲರ್ಸ್ ಕನ್ನಡ ವಾಹಿನಿ ಸಂಜು ಮತ್ತು ನಾನು ಎಂಬ ಸರಣಿಯನ್ನು ಆರಂಭಿಸಿತ್ತು. ಈ ಸರಣಿಯ ಚಿತ್ರೀಕರಣ ಕೂಡ ನಡೆಯುತ್ತಿದ್ದು, ವಾಹಿನಿ ಇತ್ತೀಚೆಗೆ ಪ್ರೋಮೋ ಕೂಡ ಬಿಡುಗಡೆ ಮಾಡಿತ್ತು. ಇವೆಲ್ಲದರಿಂದಾಗಿ ಆ ಸರಣಿಯ ಬಗ್ಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾಗಿತ್ತು. ಅದರಲ್ಲಿ ಭುವನ್ ಮತ್ತು ಸಂಜನಾ ಜೊತೆಗಿರುವ ಫೋಟೋವನ್ನು ದೊಡ್ಡದಾಗಿ ಪ್ರಕಟಿಸಿದ್ದರು. ಅದನ್ನು ನೋಡಿದ ಪ್ರಥಮ್ ಏನು ಮಾಡಿದರು ಗೊತ್ತಾ?

ಅಲ್ಲಿದ್ದ ಭುವನ್ ಫೋಟೋ ಮತ್ತು ಭುವನ್ ಹೆಸರನ್ನು ಕೆಂಪು ಇಂಕಿನ ಪೆನ್ನಿನಿಂದ ಗೀಚಿ ಗೀಚಿ ಭುವನ್ ಮುಖ ಮತ್ತು ಹೆಸರು ಕಾಣದಂತೆ ಮಾಡಿ ಅದನ್ನೊಂದು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ನೈಸ್ ರೈಟಪ್ ಅಂತ ಬರೆದು ಪೋಸ್ಟ್ ಮಾಡಿದರು. ಭುವನ್ ಅದನ್ನೇ ಸ್ಕ್ರೀನ್‌ಶಾಟ್ ತೆಗೆದು ‘ಇಂಥಾ ನಕಲಿ ಸೈಕೋಪಾತ್ ಅನ್ನು ಬೆಂಬಲಿಸಿದ ಎಲ್ಲರಿಗೂ ನಮ್ಮ ನಮಸ್ಕಾರಗಳು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಥಮ್‌ನನ್ನು ಸೈಕೋಪಾತ್ ಅಂತ ಜರೆದು ಅವರ ಅಭಿಮಾನಿಗಳನ್ನು ವ್ಯಂಗ್ಯವಾಗಿ ಜರೆದಿದ್ದಾರೆ.

ಬಿಗ್‌ಬಾಸ್‌ನಲ್ಲಿ ಶುರುವಾದ ಇವರಿಬ್ಬರ ಗಲಾಟೆ ಇನ್ನೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ವಿಪರ್ಯಾಸವೆಂದರೆ ಇವರಿಬ್ಬರ ಜಗಳದಿಂದಾಗಿ ಕಲರ್ಸ್ ಕನ್ನಡ ವಾಹಿನಿಯ ಸಂಜು ನಾನು ಸರಣಿ ಏನಾಗುವುದೋ ಕಾದು ನೋಡಬೇಕು.

-Ad-

Leave Your Comments