ಒಳ್ಳೆ ಹುಡುಗ ಪ್ರಥಮ್ ಹೊಸ ಅವತಾರದಲ್ಲಿ ?

ಬಿಗ್ ಬಾಸ್ ಪ್ರಥಮ್ ಈಗ ಮಿರ್ ..ಅಂತ ಮಿಂಚ್ ಕೊಂಡು ಹೊಸ ಅಂಗಿ ಹಾಕ್ಕೊಂಡು ಫೋಟೋ ಶೂಟ್ ಮುಗಿಸಿಕೊಂಡಿದ್ದಾರೆ . ಅದೇನ್ ಪಿಕ್ಚರ್ ಗಾ ? ಅಂದ್ರೆ ಇಲ್ಲ.. ಇಲ್ಲ.. ಯಾವ ವಾಹಿನಿಗೆ ಹೇಳಹೆಸರಿಲ್ಲದೆ ಬಂದು ಫುಲ್ ಫೇಮಸ್ ಆಗಿ ಹೊರಬಂದರೋ ಅದೇ ವಾಹಿನಿಯ ಹೊಚ್ಚಹೊಸ ಧಾರಾವಾಹಿಗೆ.

ಹೌದ್ರಪ್ಪ ಕಲರ್ಸ್ ಕನ್ನಡದ ಯಶಸ್ವಿ ಕ್ಯಾಪ್ಟನ್ ಪರಮೇಶ್ವರ್ ಗುಂಡ್ಕಲ್ ಸಂಜು ಮತ್ತು ನಾನು ಧಾರಾವಾಹಿ ತೆರೆಗೆ ತರುತ್ತಿರೋ ಸುದ್ದಿ ಕೊಟ್ಟಿದ್ದಾರೆ . ಇದೊಂದು ಪ್ರಯೋಗ ಅಂತಾನೂ ಹೇಳಿದ್ದಾರೆ .

ಯಾವತ್ತಂತೆ ?

ಇದು ದಿನಾ ಬರೋ ಧಾರಾವಾಹಿ ಅಲ್ಲ. ಶನಿವಾರ -ಭಾನುವಾರ ಒಂದು ಗಂಟೆ ಕಾಲ ಪ್ರಸಾರವಾಗುತ್ತೆ. 24 ಸಂಚಿಕೆಗಳು ಇರಲಿವೆ. ಪ್ರಥಮ್ ,ಸಂಜನಾ ,ಭುವನ್ ಮುಖ್ಯ ಪಾತ್ರಧಾರಿಗಳು . ಬಿಗ್ ಬಾಸ್ ಮನೆಯಲ್ಲಿ ನಾನಿರೋವರೆಗೂ ಭುವನ್ ಸಂಜನಾ ಲವ್ ಮಾಡೋದಿಕ್ಕೆ ಬಿಡಲ್ಲ ಅಂತ ಕೂಗಾಡಿ ,ಖಡಕ್ ಆಗಿ ಹೇಳಿದ್ದ ಪ್ರಥಮ್ ಇಲ್ಲೇನು ಮಾಡ್ತಾರೋ ನೋಡೋಣ. ಸಂಜು ಗೊತ್ತಾಯ್ತು .ಈ ನಾನು ಯಾರು ?? ಪ್ರಥಮ್ ? ಅಥವಾ ಭುವನ್ ? ಯಾರ್ ..ಯಾರ್.. ಯಾರಿರಬಹುದು ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುವಂಥ ಹೆಸರಿಟ್ಟು ರಂಜಿಸೋಕೆ ಸಿದ್ಧವಾಗಿದ್ದಾರೆ ಕಲರ್ಸ್ ತಂಡದವರು.

-Ad-

Leave Your Comments