ಬಿಗ್ ಬಾಸ್ ನ ಹಿಟ್ಲರ್ ಗೆ ಜೋಡಿ ಯಾರು ಗೊತ್ತಾ..?

ಬಿಗ್ ಬಾಸ್ ಅಂದ್ರೆ ಪ್ರಥಮ್.. ಪ್ರಥಮ್ ಅಂದ್ರೆ ಬಿಗ್ ಬಾಸ್ ಈ ಲೆವೆಲ್ ಗೆ ಹುಚ್ಚು ಹಿಡಿಸಿದ್ದು ಅಂದ್ರೆ ಲಾಸ್ಟ್ ಸೀಜನ್ ನ ಸ್ಪರ್ಧಿ ಪ್ರಥಮ್. ಕೆಲವೊಂದು ಹುಚ್ಚಾಟಗಳ ಮೂಲಕವೇ ಸುದ್ದಿಯಾಗಿ, ತಲೆಹರಟೆ ಮೂಲಕವೇ ಜನರ ಮೆಚ್ಚುಗೆ ಗಳಿಸಿದ ಮಾತಿನ ಮಲ್ಲ, ಬುದ್ಧಿವಂತನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಎಲ್ಲದ್ದಕ್ಕೂ ಧಿಕ್ಕಾರ ಹೇಳಿ ಖಂಡಿಸ್ತೀನಿ ಎನ್ನುತ್ತಿದ್ದ ನಾಲ್ಕನೇ ಸೀಜನ್ ವಿನ್ನರ್ ಪ್ರಥಮ್ ಮನೆಯವರ ಮಾತಿಗೆ ಮರು ಮಾತನಾಡದೆ ತೆಪ್ಪಗೆ ಒಪ್ಪಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲೇ ನಿಕ್ಕಿ ಆಗಲು ಸಿಕ್ಕಿತ್ತು ಹಕ್ಕಿ..

ಸಹ ಸ್ಪರ್ಧಿಗಳಿಂದ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಪ್ರಥಮ್ ಮಾತ್ರ ತನ್ನ ವಿಭಿನ್ನ ಶೈಲಿಯ ವ್ಯಕ್ತಿತ್ವವನ್ನು ಬಿಟ್ಟಿರಲಿಲ್ಲ. ಅದೇ ಕೊನೆಗೆ ಗೆಲುವಿನ ನಗೆ ಬೀರುವ ಮೂಲಕ ಅರ್ಧಕೋಟಿ ಒಡಯನನ್ನಾಗಿ ಮಾಡಿತು. ಇನ್ನೂ ಬಿಗ್ ಬಾಸ್ ಮನಯಲ್ಲಿಯೇ ಸ್ಪರ್ಧಿ ಆಗಿದ್ದ ನಟಿ ಸಂಜನಾರನ್ನು ಕಾಡುತ್ತಿದ್ದ ಪ್ರಥಮ್, ಕೊನೆ ಕೊನೆಗೆ ಸೀರಿಯಸ್ಸಾಗಿಯೇ ಪ್ರೀತಿಸುವ ಹಂತಕ್ಕೂ ಹೋಗಿದ್ರು. ಈ ವಿಚಾರವಾಗಿ ನಟ ಭುವನ್ ಜೊತೆಗೆ ವೈರತ್ವವನ್ನೂ ಕಟ್ಟಿಕೊಂಡ್ರು. ಇನ್ನೂ ಸೀಜನ್ ಕೊನೆ ದಿನಗಳಲ್ಲಿ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಜೊತೆಯೂ ತುಂಬಾ ಕ್ಲೋಸ್ ಆಗಿದ್ದ ಪ್ರಥಮ್ ಲಾಂಗ್ ಡ್ರೈವ್ ಕೂಡ ಹೋಗಿ ಬಂದಿದ್ದ. ಗಾಂಧಿನಗರದ ಗಲ್ಲಿಯಲ್ಲಿ ಇವರಿಬ್ಬರ ಬಗ್ಗೆ ಗುಸುಗುಸು ಕೇಳಿ ಬಂದಿತ್ತು.

ಲವ್ ಮಾಡಿ ಮದ್ವೆ ಆಗ್ತಿರೋ ಕೊಳ್ಳೇಗಾಲ ಹೀರೋ..

ಸಿನಿಮಾ ರಂಗದಲ್ಲಿ ಯಾರ ಜೊತೆಯೂ ಲವ್ ಇಲ್ಲ ಅಂತ ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದ ಪ್ರಥಮ್, ಇದೀಗ ಪ್ರೂವ್ ಮಾಡಲು ಹೊರಟಿದ್ದಾರೆ. ಮೈಸೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಹುಡುಗಿಯ ಪ್ರೇಮ ಪೂಜಾರಿ ಆಗಿರೋ ಪ್ರಥಮ್ ಸಂಕ್ರಾಂತಿ ನಂತರ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರೇಮಿ ಪ್ರಥಮ್, ಹುಡುಗಿಯನ್ನು ಲವ್ ಮಾಡ್ತಿರೋದು ಸತ್ಯ, ಎರಡೂ ಮನೆಯವರನ್ನು ಒಪ್ಪಿಸಿ ನಿಶ್ಚಿತಾರ್ಥವನ್ನು ಮಾಡಿಕೊಳ್ತೇವೆ. ಆದ್ರೆ ಎರಡು ವರ್ಷದ ಬಳಿಕೆ ಮದ್ವೆ ಅಂತ ಹೇಳಿದ್ದಾರೆ..

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments